ಭಾರತ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ. ಜಯಭೇರಿ ಗಳಿಸಿದ ಜಯ ಸುವರ್ಣ ಪನೆಲ್.
ಭಾರತ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ.
ಜಯಭೇರಿ ಗಳಿಸಿದ ಜಯ ಸುವರ್ಣ ಪನೆಲ್.
ಚಿತ್ರ : ಯೋಗೀಶ್ ಪುತ್ರನ್, ವರದಿ : ವಾಣಿ ಪ್ರಸಾದ್
ಮುಂಬೈ : ಮಹಾರಾಷ್ಟ್ರದ ಮಣ್ಣಿನಲ್ಲಿ ಬಿಲ್ಲವರ ಸಮಾಜದ ಹೆಗ್ಗುರುತಾದ, ತುಳು, ಕನ್ನಡಿಗರ ಹೆಮ್ಮೆಯ ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆಯು ಅಕ್ಟೋಬರ್ 2 ರಂದು ನಡೆದಿತ್ತು.
ಇಂದು (ಅ.4) ಬೆಳಿಗ್ಗೆಯಿಂದ ರಾತ್ರಿ ತನಕ ಮತ ಎಣಿಕೆ ನಡೆದು, ಜಯ ಸುವರ್ಣ ಪನೆಲ್ ಬಿಲ್ಲವರ ಅಸೋಸಿಯೆಶ್ಶನ್ ಪನೆಲ ಎದುರು ವಿಜಯಿಯಾಯಿತು.
ಒಟ್ಟು 5 ಸುತ್ತಿನ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನಿಂದಲೇ ಜಯ ಸುವರ್ಣ ಪನೆಲ್ ನ ಎಲ್ಲ ಅಭ್ಯರ್ಥಿಗಳು ಅಧಿಕ ಮತ ಗಳಿಸಿ ಮುಂದಿದ್ದರು.
ಕೊನೆಯ ಸುತ್ತಿನ ಮತ ಎಣಿಕೆ ಮುಗಿದಾಗ ಜಯ ಸುವರ್ಣ ಪ್ಯಾನೆಲ್ ನ ಹೆಚ್ಚಿನ ಅಭ್ಯರ್ಥಿಗಳು 1500 ಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಶಾಲಿ ಆದರು.
ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ
ಈ ಬಾರಿ ಜಯ ಸುವರ್ಣ ಹಾಗೂ ಬಿಲ್ಲವರ ಏಸೋಸಿಯೇಷನ್ ಪ್ಯಾನೆಲ್ ನ ನಡುವೆ ನೇರ ಸ್ಪರ್ಧೆ ಏರ್ಪಟ್ಟು, ಎಲ್ಲರಲ್ಲೂ ಅತೀವ ಕುತೂಹಲ ಮೂಡಿಸಿತ್ತು.
ಚುನಾವಣಾ ಫಲಿತಾಂಶ ಘೋಷಿತವಾದಂತ್ತೆ, ಜಯ ಸುವರ್ಣ ಅಭಿಮಾನಿ ಬಳಗ, ಹಿತೆಷಿಗಳು, ಸಮಾಜ ಬಾಂಧವರು ಜಯ ಸುವರ್ಣ ಪನೆಲ್ ನ ನಾಯಕ ಸೂರ್ಯಕಾಂತ ಜೆ. ಸುವರ್ಣ ಹಾಗೂ ಜಯಶಾಲಿಯಾದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು.
Post a Comment