ಪನ್ವೇಲ್‌ನ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರ ಸಹಕಾರದೊಂದಿಗೆ "ಮೈತಿದಿ "ತುಳು ನಾಟಕ.

ಪನ್ವೇಲ್‌ನ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರ 
ಸಹಕಾರದೊಂದಿಗೆ "ಮೈತಿದಿ "ತುಳು ನಾಟಕ.
ಭೂಮಿಯಲ್ಲಿ ಬೆಳೆಯಲು  ಕೊಡಿಯಲ್‌ಬೈಲ್   ಪ್ರೇರಣಾ ಶಕ್ತಿ : ರೂಪಶ್ರೀ ವರ್ಕಾಡಿ

ಚಿತ್ರ ವರದಿ : ದಿನೇಶ್ ಕುಲಾಲ್ 

ಕಲಪ್ರೇಕ್ಷಕರನ್ನು ಮನರಂಜಿಸಿದ ಮೈತಿದಿ ನಾಟಕ.
-----
 ಸಿನಿಮಾ ಶೈಲಿಯ. ವಿಭಿನ್ನ ಕಥೆ ಅಂದಾರವನ್ನು ಕಲಪ್ರೇಕ್ಷಕರಿಗೆ ನೀಡಿದ ಕಲಾಸಂಗಮದ  ಕೊಡಿಯಲ್‌ಬೈಲ್ ರಚಿಸಿ ನಿರ್ದೇಶಿಸಿದ 
ಈ ವರ್ಷದ "ಮೈತಿದಿ" ನಾಟಕ ಪ್ರಾರಂಭದಿಂದ  ಕೊನೆಯವರೆಗೂ  ಪ್ರೇಕ್ಷಕರನ್ನು ಕುತೂಹಲದ ಕಡೆಗೆ ಕೊಂಡೊಯ್ಯುತ್ತಿತ್ತು . ನಾಟಕ ಹೊಸತನವನ್ನು ನೀಡಿದೆ. ಪ್ರತಿ ದೃಶ್ಯಗಳು ಕಲಾಪ್ರೇಕ್ಷಕರು ಮನ ರಂಜಿಸಿದೆ.  ಸಿನಿಮಾ ಶೈಲಿಯಲ್ಲಿ ನೃತ್ಯ. ದೇಶಪ್ರೇಮವನ್ನು ಜಾಗೃತಿಗೊಳಿಸುವ ಸಂಭಾಷಣೆಗಳು. ದೃಶ್ಯಗಳು. ಯುವ ಜನಾಂಗ ಸಾಧನೆ ಮಾಡಬೇಕೆನ್ನುವ ಛಲಉತ್ತಿಸುವ ಕಥೆ ಅಂದಾರ. ಹೊಸ ಕಲಾವಿದರ ವಿಭಿನ್ನ ಅಭಿನಯ. ರಂಗ ವಿನ್ಯಾಸ. ಬೆಳಕು. ಪ್ರತಿ ದೃಶ್ಯಗಳ ವೇಗದ ಬದಲಾವಣೆ. ಕ್ರಿಕೆಟ್ ಅಭಿಮಾನಿಗಳನ್ನು ನಾಟಕದತ್ತ ಒಲು ಮೂಡಿಸುವಂತ ದೃಶ್ಯಗಳು. ಸಂಗೀತ. ಹೊಸ ಪರಿಕಲ್ಪನೆಯ ದೃಶ್ಯಗಳು. ಒಟ್ಟು ನಾಟಕ ತುಳು ರಂಗಭೂಮಿಗೆ ಮತ್ತೊಂದು ಹೊಸ ದಾಖಲೆಯನ್ನು ಮಾಡಲು ಸಾಧ್ಯವಾಗಬಹುದು.


ಪನ್ವೇಲ್‌ನ ಅ 4. ತುಳು ರಂಗಭೂಮಿಯಲ್ಲಿ ಚಾರಿತ್ರಿಕ ದಾಖಲೆಯನ್ನು ಮಾಡಿರುವ ಕಲಾಸಂಗಮದ ತಂಡದ ಈ ವರ್ಷ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ “ಶಿವದೂತ ಗುಳಿಗೆ'  ನಾಟಕವನ್ನು ನೀಡಿದ
 ವಿಜಯ್ ಕುಮಾರ್   ಕೊಡಿಯಲ್‌ಬೈಲ್ ಯವರ ಈ ವರ್ಷದ ವಿಭಿನ್ನ ಸಂಸಾರಿಕ ಹಾಸ್ಯ ಭರಿತ ನಾಟಕ  "ಮೈತಿಧಿ" ಅ 3 ಮಂಗಳವಾರ   ಪನ್ವೇಲ್‌ನ  ಕ್ರಾಂತಿವೀರ್ ವಾಸುದೇವ್ ಬಲ್ವಂತ್ ಫಡ್ಡೆ ಆಡಿಟೋರಿಯಮ್ ನಲ್ಲಿ ಪನ್ವೇಲ್‌ನ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಅವರ ಸಂಪೂರ್ಣ ಸಹಕಾರದಲ್ಲಿ. ಸಮಾಜ ಸೇವಕ. ಧಾರ್ಮಿಕ ಮುಂದಾಳು ಬಿಕೆ ಗುರುಸ್ವಾಮಿಯವರ ಸಂಯೋಜನೆಯಲ್ಲಿ ನಡೆಯಿತು


ನಾಟಕದ ಮಧ್ಯಾಂತರದಲ್ಲಿ ಪನ್ವೇಲ್‌ನ. ಮಹಿಳಾ ಕಲಾ ಪೋಷಕರಾದ ಶಬುನಾ ಸತೀಶ್ ಶೆಟ್ಟಿ, ಸೀತಾ ಮಹಾಬಲ ಶೆಟ್ಟಿ ರಸಾಯಿನಿ , ಶಶಿ ಭಾಸ್ಕರ್ ಶೆಟ್ಟಿ, ಸುನೀಲ ಸತೀಶ್ ಶೆಟ್ಟಿ ,ಗೀತಾ ಸೀತಾಂ ಶೆಟ್ಟಿ, ಪ್ರಮೀಳಾ ಶಶಿಕುಮಾರ್ ಶೆಟ್ಟಿ, ಶ್ವೇತಾ ಸಂತೋಷ್ ಶೆಟ್ಟಿ ,ಪ್ರೀತಿ ದಿವಾಕರ್ ಶೆಟ್ಟಿ ಉಪಸ್ಥಿತಿಯಲ್ಲಿ ತಂಡದ ಕಲಾವಿದೆ ತುಳುನಾಡ ಐಸಿರಿ ರೂಪಶ್ರೀ ವರ್ಕಾಡಿ ಅವರನ್ನು ಸನ್ಮಾನಿಸಲಾಯಿತು.
  ಸನ್ಮಾನ ಸ್ವೀಕರಿಸಿದ ರೂಪಶ್ರೀ ಅವರು ಮಾತನಾಡುತ್ತಾ ರಂಗಭೂಮಿಯಲ್ಲಿ ಈ ಎತ್ತರಕ್ಕೆ ಬೆಳೆಯಲು ಗುರುವಾಗಿ. ಮಾರ್ಗದರ್ಶಕರಾಗಿ ನನ್ನನ್ನು ಬೆಳೆಸಿದ ವಿಜಯಕುಮಾರ್ ಕೊಡಿಯಲ್‌ಬೈಲ್    ರವರಿಗೆ ಸನ್ಮಾನ ಸಲ್ಲುತ್ತದೆ. ತುಳು ರಂಗಭೂಮಿಗೆ ಹೊಸ  ಕಲಾವಿದರನ್ನು ನೀಡಿದ ಕಲಾಸಂಗಮ ತಂಡದ ಈ ವರ್ಷದ ನಾಟಕ ಮತ್ತೊಂದು ಬ್ರಹ್ಮಾಸ್ತ ವಾಗಿದೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ನಮ್ಮ ತಂಡಕ್ಕಿರಲಿ ಎಂದು ನುಡಿದರು.


  ಇದೆ ಸಂದರ್ಭದಲ್ಲಿ ಮೂಡಬಿದ್ರೆಯ ಯುವ ಕಲಾವಿದ ರಮೇಶ್ ಶೆಟ್ಟಿ ಮಿಜಾರ್ ಅವರನ್ನು ನಗರ ಸೇವಕ ಸಂತೋಷ್ ಜಿ ಶೆಟ್ಟಿ ಅವರು ಗೌರವಿಸಿದರು.
  ಕಾರ್ಯಕ್ರಮವನ್ನು ರಂಗ ಕಲಾವಿದ ನಿರ್ದೇಶಕ. ಪನ್ವೆಲ್ ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರ ನಿರೂಪಿಸಿದರು. ಸನ್ಮಾನಿತರ ಪರಿಚಯವನ್ನು
ಶಬುನಾ ಸತೀಶ್ ಶೆಟ್ಟಿ, ಮಾಡಿದರು .


 .ಪನ್ವೇಲ್‌ನ ಪರಿಸರದ ಕಲಾಪೋಷಕ ಬಿ ಕೆ  ಗುರು ಸ್ವಾಮಿ ಸಂಯೋಜನೆಯಲ್ಲಿ ಪನ್ವೆಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಪದ್ಮ ಮತ್ತು  ಪದಾಧಿಕಾರಿಗಳ ಸದಸ್ಯರ ಹಾಗೂ. ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ನಾಟಕ ಮನರಂಜಿಸಿತು.
---------
  


No comments

Powered by Blogger.