ಭಾರತ್ ಬ್ಯಾಂಕ್ ಚುನಾವಣೆ : ಜಯ ಸಿ. ಸುವರ್ಣ ಬಣಕ್ಕೆ ಭರ್ಜರಿ ಜಯ : ವಿಡಿಯೋ
ಭಾರತ್ ಬ್ಯಾಂಕ್ ಚುನಾವಣೆ : ಜಯ ಸಿ. ಸುವರ್ಣ ಬಣಕ್ಕೆ ಭರ್ಜರಿ ಜಯ : ವಿಡಿಯೋ
ಚಿತ್ರ : ಯೋಗೀಶ್ ಪುತ್ರನ್, ವರದಿ : ವಾಣಿ ಪ್ರಸಾದ್
ಭಾರತ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ. ಜಯಭೇರಿ ಗಳಿಸಿದ ಜಯ ಸುವರ್ಣ ಪನೆಲ್.
ಜಯ ಸುವರ್ಣ ಪನೆಲ್ ನ ಎಲ್ಲಾ ಜಯಶಾಲಿ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ವಿವರ :
ಅಮೀನ್ ಸೋಮನಾಥ್ ಬಾಬು 8382 ,
ಕೋಟ್ಯಾನ್ ಜಯ ಐತಪ್ಪ 8124,
ಕೋಟ್ಯಾನ್ ಅಶೋಕ್ ಮುತ್ತಪ್ಪ 8105 ,
ಸುವರ್ಣ ಸೂರ್ಯಕಾಂತ್ ಜಯ 8013 ,
ಪೂಜಾರಿ ಗಂಗಾಧರ ಜಾರಪ್ಪ 7954 ,
ಸಾಲ್ಯಾನ್ ಭಾಸ್ಕರ ಮುದ್ದು 7947,
ಪೂಜಾರಿ ಚಂದ್ರಶೇಖರ್ ಸೋಮಪ್ಪ 7878 ,
ಪೂಜಾರಿ ನಿರಂಜನ್ ಲಕ್ಷ್ಮಣ್ 7853,
ಪೂಜಾರಿ ನರೇಶ್ ಕೃಷ್ಣ 7848 ,
ಪೂಜಾರಿ ಗಣೇಶ್ ದೇಜು 7813 ,
ಪೂಜಾರಿ ಸಂತೋಷ್ ಕಾಂತಪ್ಪ 7793 ,
ಪೂಜಾರಿ ಹರೀಶ್ ವಿಟಲ್ 7767,
ಸುವರ್ಣ ನಾರಾಯಣ ಲೋಕಯ್ಯ 7734,
ಪೂಜಾರಿ ದಯಾನಂದ ರಾಜು 7728,
ಪೂಜಾರಿ ಮೋಹನ್ದಾಸ್ ಗಿರಿಯ 7723,
ಸುವರ್ಣ ಕಾರ್ನಾಡ್ ನಾರಾಯಣ್ 7720,
ಸುವರ್ಣ ಸುರೇಶ್ ಬೇಜಾ 7445.
Bangera Asha Rajesh = 6916
Salian Jayalaxmi Premananda = 6770
ಮುಂಬೈ: ಮಹಾರಾಷ್ಟ್ರದ ಮಣ್ಣಿನ ಲ್ಲಿ ಬಿಲ್ಲವರ ಸಮಾಜದ ಹೆಗ್ಗುರುತಾದ, ತುಳು, ಕನ್ನಡಿಗರ ಹೆಮ್ಮೆಯ ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆ ಯು ಅಕ್ಟೋಬರ್ 2 ರಂದು ನಡೆದಿತ್ತು.
ಇಂದು (ಅ.4) ಬೆಳಿಗ್ಗೆಯಿಂದ ರಾತ್ರಿ ತನಕ ಮತ ಎಣಿಕೆ ನಡೆದು, ಜಯ ಸುವರ್ಣ ಪನೆಲ್ ಬಿಲ್ಲವರ ಅಸೋಸಿಯೆಶ್ಶನ್ ಪನೆಲ ಎದುರು ವಿಜಯಿಯಾಯಿತು.
ಒಟ್ಟು 5 ಸುತ್ತಿನ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನಿಂದಲೇ ಜಯ ಸುವರ್ಣ ಪನೆಲ್ ನ ಎಲ್ಲ ಅಭ್ಯರ್ಥಿಗಳು ಅಧಿಕ ಮತ ಗಳಿಸಿ ಮುಂದಿದ್ದರು.
ಕೊನೆಯ ಸುತ್ತಿನ ಮತ ಎಣಿಕೆ ಮುಗಿದಾಗ ಜಯ ಸುವರ್ಣ ಪ್ಯಾನೆಲ್ ನ ಹೆಚ್ಚಿನ ಅಭ್ಯರ್ಥಿಗಳು 1500 ಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಶಾಲಿ ಆದರು.
ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಈ ಬಾರಿ ಜಯ ಸುವರ್ಣ ಹಾಗೂ ಬಿಲ್ಲವರ ಏಸೋಸಿಯೇಷನ್ ಪ್ಯಾನೆಲ್ ನ ನಡುವೆ ನೇರ ಸ್ಪರ್ಧೆ ಏರ್ಪಟ್ಟು ,ಎಲ್ಲರಲ್ಲೂ ಅತೀವ ಕುತೂಹಲ ಮೂಡಿಸಿತ್ತು.
ಚುನಾವಣಾ ಫಲಿತಾಂಶ ಘೋಷಿತವಾದಂತ್ತೆ, ಜಯ ಸುವರ್ಣ ಅಭಿಮಾನಿ ಬಳಗ, ಹಿತೆಷಿಗಳು, ಸಮಾಜ ಬಾಂಧವರು ಜಯ ಸುವರ್ಣ ಪನೆಲ್ ನ ನಾಯಕ ಸೂರ್ಯಕಾಂತ ಜೆ. ಸುವರ್ಣ ಹಾಗೂ ಜಯಶಾಲಿಯಾದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು.

Post a Comment