ಕುಲಾಲ ಸಂಘ ಮುಂಬಯಿ ಯ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸಮ್ಮಿಲನ


ಕುಲಾಲ ಸಂಘ ಮುಂಬಯಿ ಯ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸಮ್ಮಿಲನ

 ಮನದಲ್ಲಿರುವ ವೈಮನಸ್ಸನ್ನು ತೊರೆದು ಜೀವನ ಸಾರ್ಥಕಗೊಳಿಸುವ ಸಾಧನೆಯಲಿರಬೇಕು. : ರಘು ಎ ಮುಲ್ಯ ಪಾದೆ ಬೆಟ್ಟು



ನವಿ ಮುಂಬಯಿ ಅ 5. ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸಮ್ಮಿಲನವು ಅ1 ರಂದು ವಾಶಿ ಕನ್ನಡ ಸಂಘ. ನವಿ ಮುಂಬಯಿ ಇಲ್ಲಿ ಕುಲಾಲ ಸಂಘದ ಅಧ್ಯಕ್ಷ ರಘು ಎ ಮುಲ್ಯ ಪಾದೆ ಬೆಟ್ಟು ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ  ನಡೆಯಿತು.
 
 ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷರಾದ  ದೇವದಾಸ್ ಕುಲಾಲ್ ,ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರು ವಾಸು ಬಂಗೇರ , ಉಪ ಕಾರ್ಯಧ್ಯಕ್ಸರು ಸದಾನಂದ ಕುಲಾಲ್. ಸಂಘದ ಉಪದ್ಯಕ್ಷಾರಾದ ಡಿ ಐ ಮೂಲ್ಯ , ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ,ಕೋಶಾಧಿಕಾರಿ ಜಯ ಅಂಚನ್ ,ಅಮೂಲ್ಯ ಪತ್ರಿಕೆಯ ಸಂಪಾದಕರು ಶಂಕರ್ ವೈ ಮೂಲ್ಯ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷೆ ಮಮತಾ ಕುಲಾಲ್ ಹಾಗೂ  ಜ್ಯೋತಿ ಕೋ  ಆಫ್ ಕ್ರೆಡಿಟ್ ಸೋಸೈಟಿ ಕಾರ್ಯದರ್ಶಿ ಶೇಖರ್ ಮೂಲ್ಯ.ಮತ್ತು ಎಲ್ಲ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ  ಹಿರಿಯ ಸದಸ್ಯರಾದ ದಿನಕರ್ ಬಂಗೇರ ದಂಪತಿಯವರನ್ನು ಹಾಗೂ  ಬಿ. ಜಿ.ಅಂಚನ್ ಮತ್ತು ಲಲಿತಾ. ಬಿ .ಅಂಚನ್ ಇವರ 50ನೆಯ ವರ್ಷದ ವೈವಾಹಿಕ ಜೀವನದ ಅಂಗವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.

   ಅಂದಿನ ಸಭೆಯಲ್ಲಿ ಅಧ್ಯಕ್ಷರಾದ ರಘು ಮೂಲ್ಯರವರುಮಾತಾಡುತ್ತಾ  ಸಮಾಜದಲ್ಲಿ ನಾವೆಲ್ಲರೂ ಒಂದೇ ಕೂಟದಲ್ಲಿರಬೇಕಾದರೆ ಸಂಘ ಸಂಸ್ತೆಯಲ್ಲಿರಬೇಕು.ಮನದಲ್ಲಿರುವ ವೈಮನಸ್ಸನ್ನು ತೊರೆದು ಜೀವನ ಸಾರ್ಥಕಗೊಳಿಸುವ ಸಾಧನೆಯಲಿರಬೇಕು. ಒಳ್ಳೆಯ ತೀರ್ಮಾನ ಆಗುವ ದಿನದಲ್ಲಿ ಎಲ್ಲರೂ ಕೆಲಸದ ಒತ್ತಡದಲ್ಲಿರುವ ಈ ಮುಂಬಯಿ ನಗರದಲ್ಲಿ ನಮ್ಮೆಲ್ಲ ಬಂದು ಬಾಂಧವರು ಮತ್ತು ನಮ್ಮ ಮಕ್ಕಳ ಪರಿಶ್ರಮವನ್ನು ತೋರಿಸಿ  ಒಟ್ಟಾಗುವ ಇದು ಒಂದು ಮಹಾ ವೇದಿಕೆ. ಸಮಾಜದ ಒಟ್ಟಿಗೆ ಬಾಳಿ ಪ್ರತಿಯೊಬ್ಬರೂ ದಿಕ್ಕು ತಪ್ಪದೇ ,ತಮ್ಮ ಪ್ರತಿಭೆಯಿಂದ ಉನ್ನತ ಮಟ್ಟಕ್ಕೆ ತಲುಪಬೇಕು ಎಂಬುದೇ  ನಮ್ಮ ಪ್ರಯತ್ನ ,ನಮ್ಮೆಲ್ಲರ ದ್ಯೇಯ ಎಂದು ನುಡಿದರು.



   ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಮಾತಾಡುತ್ತ ಇಂದು ಸನ್ಮಾನಿಸಿದ  ನಮ್ಮ ಹಿರಿಯ ಸಮಾಜದ ಸದಾಕರು , ಅಂದು ಕಷ್ಟದ ಸಮಯದಲ್ಲಿ  ಹೊಟ್ಟೆ ಪಾಡಿಗಾಗಿ ಮುಂಬಯಿ ನಗರದ ಹಾದಿ ಹಿಡಿದು ಇಂದು ಉನ್ನತ ಮಟ್ಟಕ್ಕೆ ಏರಿದ ಇವರು ಸಮಾಜದ ಪ್ರತಿಯೊಂದು ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡುವ ಇವರನ್ನು ನಮ್ಮ ನವಿ ಮುಂಬಯಿ ಸ್ಥಳೀಯ ಸಮಿತಿ ಸನ್ಮಾನ ಮಾಡಿಸಿದ್ದು ಇವರ ಈ ಕಾರ್ಯಕ್ರಮವನ್ನು ಮೆಚ್ಚುವಂತದ್ದು ,ಇಂತಹ ಕಾರ್ಯಕ್ರಮವನ್ನು ನಮ್ಮ ಎಲ್ಲ ಸಮಿತಿಯವರು ಮಾಡಬೇಕು. ಎಂದು ನುಡಿದರು.



ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಮಾತಾಡುತ್ತ ನಮ್ಮ ಸಂಘದ ವತಿಯಿಂದ ಹೆಚ್ಚು ಹೆಚ್ಚು ಕಾರ್ಯಕ್ರಮ ಆಗಲಿಕ್ಕಿದೆ. ಇ ನ್ನು 6 ವರ್ಷದ ನಂತರ ನಮ್ಮ ಸಂಘಕ್ಕೆ 100 ವರ್ಷ ಆಗಳಿಕ್ಕಿದೆ. ಎಂದು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್ ಮಾತಾಡುತ್ತ ಮುಂಬಯಿ ನಗರದ ನಮ್ಮ ತುಳುನಾಡಿನ ಪ್ರತಿಯೊಬ್ಬರೂ ಮನೆಯಲ್ಲಿ ತುಳುವಿನಲ್ಲಿ ಮಾತಾಡಿ  ,ಕುಟುಂಬದಲ್ಲಿ ಒಂದಾಣಿಕೆಯಾಗಿ ಒಳ್ಳೆಯ ವಿಧ್ಯಾಭ್ಯಾಸ ಪಡೆದು ಉನ್ನತ ಮಟ್ಟದ ಭವಿಷ್ಯವನ್ನು ರೂಪಿಸಬೇಕು ಎಂದು ನುಡಿದರು. 

   ಸಂಘದ ಉಪಧ್ಯಕ್ಸರು ಡಿ ಐ ಮೂಲ್ಯ ಇಂದಿನ ಯುವಕರು ಮೊಬೈಲ್ ತನ್ನ ಸರ್ವಸ್ವ ಎಂದು ತಿಳಿದು ಜಾಸ್ತಿ ಸಮಯವನ್ನು ಮೊಬೈಲ್ಗೆ ತನ್ನ ಸಮಯವನ್ನು ವ್ಯಯ ಮಾಡುತ್ತಿದ್ದಾರೆ. ಅದನ್ನು ಮಾಡದೇ ಒಳ್ಳೆಯ ವಿಧ್ಯಾಭ್ಯಾಸ ಪಡೆದು ತಂದೆ ತಾಯಿಯ ಅಪೇಕ್ಷೆಯಂತೆ ಸಮಾಜಕ್ಕೆ ಮತ್ತು ಅಖಂಡ ಭಾರತಕ್ಕೆ ನಾವೆಲ್ಲ ಮಾದರಿಯಗಬೇಕು. ಎಂದು ನುಡಿದರು
  ಸನ್ಮಾನಿತರಾದ ಬಿ ಜಿ ಅಂಚನ್ ನವಿ ಮುಂಬಯಿ ಸ್ಥಳೀಯ ಸಮಿತಿಯು ಕುಲಾಲ ಸಂಘದ ಒಟ್ಟಿಗೆ ಒಳ್ಳೆಯ ಸಂಘಟಕರಾಗಿ ಇದ್ದು ಸಹಕಾರದಿಂದ ಇಂದು ನನ್ನನ್ನು ಪ್ರೀತಿಯಿಂದ ಸನ್ಮಾನಿಸಿದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
  ಅಮೂಲ್ಯ ದ ಸಂಪಾದಕರು ಶಂಕರ್ ವೈ ಮೂಲ್ಯ ಮಾತನಾಡುತ್ತಾ ಸಂಘ ದ ಅಮೂಲ್ಯ ತ್ರೈಮಾಸಿಕ ಪತ್ರಿಕೆಯ ಬೆಳ್ಳಿ ಹಬ್ಬದ ಕಾರ್ಯಕ್ರಮವು ವಿಜೃಂಭಣೆ ಯಿಂದ ಜರಗಲಿದೆ.ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಎಂದು ನುಡಿದರು.
 

   ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ  ಶೇಖರ್ ಮೂಲ್ಯ , ಸುನಿಲ್ ಸಾಲಿಯಾನ್, ನ್ಯಾ. ಉಮಾನಾಥ ಮೂಲ್ಯ ,ಹರಿಯಪ್ಪ ಮೂಲ್ಯ ,ಸಂಜೀವ ಬಂಗೇರ . ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
 ಮಹಿಳಾ  ಕಾರ್ಯದರ್ಶಿ ಬೇಬಿ ಬಂಗೇರ ಮತ್ತು ಮಲ್ಲಿಕಾ ಕುಲಾಲ್ ಪ್ರಾರ್ಥನೆ ಗೈದರು.

     ಸಭೆಯಲ್ಲಿ  ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ದೇವಕಿ ಸುನಿಲ್ ಸಾಲಿಯಾನ್, ಸುನಿಲ್ ರಾಜು ಸಾಲಿಯಾನ್,ರೇಣುಕಾ ಸಾಲಿಯಾನ್,ಕವಿತಾ ಹಾಂಡ ,ನ್ಯಾಯವಾದಿ ಉಮಾನತ್ ಮೂಲ್ಯ, ಹರಿಯಪ್ಪ ಮೂಲ್ಯ, ಸಂಜೀವ ಬಂಗೇರ,ಆನಂದ್ ಕುಲಾಲ್,ಆನಂದ್ ಬಿ ಮೂಲ್ಯ, ಉಮೇಶ್ ಬಂಗೇರ ,ಸ್ಥಳೀಯ ಸಮಿತಿಯ ಕಾರ್ಯದರ್ಶಿ ಬೇಬಿ ಬಂಗೇರ , ಶೋಭಾ ಬಂಗೇರ,ಕ್ರೀಡೆ  ಮತ್ತು ಸಾಂಸ್ಕೃತಿಕ ಸಂಚಾಲಕರಾದ ಪ್ರಸಾದ್ ಮೂಲ್ಯ , ಅಭಿಷೇಕ್ ಬಂಗೇರ,  ಅಕ್ಷತ್ ಮೂಲ್ಯ  ,ದೀಕ್ಷಿತ್ ಕುಲಾಲ್ ಮತ್ತು ಎಲ್ಲ ಯುವ ವಿಭಾಗದವರು ಉಪಸ್ಥಿತರಿದ್ದರು., ಯುವ ವಿಭಾಗ ಮತ್ತು ಮಹಿಳಾ ವಿಭಾಗದ ಸದಸ್ಯರು ಶ್ರಮಿಸಿದರು. .
       
ಸಂಘಟನಾ ಕಾರ್ಯದರ್ಶಿ ಎಲ್. ಆರ್. ಮೂಲ್ಯ.
ಮತ್ತು ಮಾಲತಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು..
ಕಾರ್ಯಾಧ್ಯಕ್ಷರಾದ ವಾಸು ಬಂಗೇರ ಸ್ವಾಗತಿಸಿದರು. . ಸನ್ಮಾನ ಪತ್ರವನ್ನು ಜಯ ಅಂಚನ್ ಮತ್ತು ಕೃಪೇಶ್ ಕುಲಾಲ್ ಓದಿದರು.

   ಈ ಸಭೆಯಲ್ಲಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ,ದತ್ತು ಸ್ವೀಕಾರ ಇವರ ಹೆಸರನ್ನು ಆನಂದ್ ಮೂಲ್ಯ ಮತ್ತು ಜಯ ಅಂಚನ್ ಓದಿ ಅವರಿಗೆ ಪುರಸ್ಕಾರ ನೀಡಲಾಯಿತು.

ಆನಂದ್ ಮೂಲ್ಯರವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಕಾರ್ಯಕ್ರಮ.ನವಿಸ್ತಾ ಕುಲಾಲ್ ಇವರ ಪೂಜಾ ನೃತ್ಯದೊಂದಿಗೆ ನಡೆಯಿತ್ತು ಅನಂತರ ವಿವಿಧ ವಿನೋದವಲಿ ನಡೆದವು.   .
      ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸುರಜ್ ಸುಧಾಕರ್ ಕುಲಾಲ್ ಮತ್ತು ದೀಕ್ಷಾ ದಯಾನಂದ್ ಮೂಲ್ಯ,ಮಾಡಿಕೊಟ್ಟರು.ನಮ್ಮ ಪುಟಾಣಿ ಮಕ್ಕಳಿಂದ ,ಯುವವಿಭಾಗ,ಮತ್ತು ಸದಸ್ಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಿತ್ತು.ಮತ್ತು ನವಿ ಮುಂಬಯಿ ಸ್ಥಳೀಯ ಸಮಿತಿಯವರು ನಟಿಸಿ  ಅಭಿನಯಿಸಿದ ಕಥೆ ಸತೀಶ್ ಏರ್ಮಾಲ್, ಧನಂಜಯ್ ಮೂಳೂರು ನಿರ್ದೇಶನದ,ಸಂಗೀತ ರಾಜೇಶ್ ಹೆಗ್ಡೆಯವರ  ನಾಟಕ 'ಬುಡ್ದ್ ಪೋವೊಚ್ಚಿ ' ಜನ ಮನ್ನಣೆ ಗೆದ್ದಿತ್ತು.

No comments

Powered by Blogger.