ಸಾಲುಮರದ ತಿಮ್ಮಕ್ಕ ಸಾವಿನ ಸಾಮಾಜಿಕ ಮಾಧ್ಯ ಮದಲ್ಲಿ ಸುಳ್ಳು ಸುದ್ದಿ ಹರಿದಾಟ.


ಸಾಲುಮರದ ತಿಮ್ಮಕ್ಕ ಸಾವಿನ ಸಾಮಾಜಿಕ ಮಾಧ್ಯ ಮದಲ್ಲಿ ಸುಳ್ಳು ಸುದ್ದಿ ಹರಿದಾಟ.

ಸಾಲು ಮರದ ತಿಮ್ಮಕ್ಕ ಅವರು ಅನಾರೋಗ್ಯದ ಹಿನ್ನೆಲೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅವರ ನಿಧನದ ಸುದ್ದಿ ಹಾಕಲಾಗಿದೆ. ಈ ಬಗ್ಗೆ ತಿಮ್ಮಕ್ಕ ಅವರ ದತ್ತುಪುತ್ರ ವನಸಿರಿ ಅವರನ್ನು ಸಂಪರ್ಕಿಸಿದಾಗ ವೃಕ್ಷಮಾತೆ ಆರೋಗ್ಯವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ನಾಗರಾಜ್ ಹತ್ತೂರು ಎಂಬವರು ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದು, ವದಂತಿಯನ್ನು ನಂಬಬೇಡಿ ಎಂದಿದ್ದಾರೆ.

No comments

Powered by Blogger.