ಭಾರತ್ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ - ಶೇರುದಾರರಿಂದ ನೀರಸ ಮತದಾನ.
ಭಾರತ್ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ - ಶೇರುದಾರರಿಂದ ನೀರಸ ಮತದಾನ.
ಇಂದು(ಅ.2) ನಡೆದ ಭಾರತ್ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ 8 ರೀ 10 ಪ್ರತಿಶತ ಮತ ಚಲಾವಣೆಯಾಗಿದ್ದು , ಒಟ್ಟು 1,72,349 ಶೇರುದಾರರಲ್ಲಿ , 14,856 ಶೇರುದಾರರು ಮತ ಚಲಾಯಿಸಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯದ ಬ್ಯಾಂಕ್ ನ 79 ಶಾಖೆಗಳಲ್ಲಿ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಜಯ ಸುವರ್ಣ ಪ್ಯಾನೆಲ್ ಹಾಗೂ ಬಿಲ್ಲವರ ಏಸೋಸಿಯೇಷನ್ ಪ್ಯಾನೆಲ್ ಹಾಗೂ ಬಂಗೇರ ಸತೀಶ್ ನಾರಾಯಣ, ಬಂಗೇರ ಸತೀಶಾ ಜಗನ್ನಾಥ್ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.
ಆಕ್ಟೊಬರ್ 4 ರಂದು ಬೆಳ್ಳಿಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಸಂಜೆ ತನಕ ಫಲಿತಾಂಶ ಹೊರಬೀಳಬಹುದು.ಆಕ್ಟೊಬರ್ 5 ರಂದು ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಲಿದೆ.
ಎಲ್ಲರ ಕುತೂಹಲ ಕೆರಳಿಸಿದ ಈ ಬಾರಿಯ ಚುನಾವಣೆ ಬಿಲ್ಲವರ ಏಸೋಸಿಯೇಷನ್ ಪ್ಯಾನೆಲ್ ಹಾಗೂ ಜಯ ಸುವರ್ಣ ಪ್ಯಾನೆಲ್ ನಡುವೆ ಜಿದ್ದಾಜಿದ್ದಿನಿಂದ ಕೂಡಿದ್ದು , ಅಂತಿಮವಾಗಿ ಯಾವ ಬಣ ಜಯಗಳಿಸುತದೆ, ,ಎಂದು ಅ.4ರ ತನಕ ಕಾದು ನೋಡಬೇಕಿದೆ. ಭಾರತ್ ಬ್ಯಾಂಕ್ ನ 47 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿ 2 ಬಣಗಳ ನಡುವೆ ನೇರ ಸ್ಪರ್ಧೆ ನಡೆದಿದ್ದು , ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಸುದ್ದಿ ಮಾಡಿತ್ತು.
Post a Comment