ಗೋರೆಗಾಂವ್ ಕರ್ನಾಟಕ ಸಂಘ, ಜ್ಯೇಷ್ಥ ನಾಗರಿಕರ ದಿನಾಚರಣೆ
ಗೋರೆಗಾಂವ್ ಕರ್ನಾಟಕ ಸಂಘ, ಜ್ಯೇಷ್ಥ ನಾಗರಿಕರ ದಿನಾಚರಣೆ
ಜ್ಯೇಷ್ಥ ನಾಗರಿಕರ ಅನುಭವ ಸಮಾಜಕ್ಕೆ ದಾರಿದೀಪ - ಮಮತಾ ಅಧಿಕಾರಿ ಶಾಸ್ತ್ರಿ
ಮುಂಬಯಿ : ಜ್ಯೇಷ್ಥ ನಾಗರಿಕರ ದಿನಾಚರಣೆ ಬಹಳ ಮಹತ್ವವಿದೆ. ನಮ್ಮ ಸಮುದಾಯಕ್ಕೆ ಜ್ನಾನ, ಬುದ್ದಿವಂತಿಕೆ ಇತ್ಯಾದಿ ಜ್ಯೇಷ್ಥ ನಾಗರಿಕರಿಂದಲೇ ಬರುತ್ತದೆ. ಅವರ ಅನುಭವ ಸಮಾಜಕ್ಕೆ ದಾರಿದೀಪವಾಗಿದೆ. ಇತರ ಎಲ್ಲಾ ದಿನಗಳಿಗಿಂತ ಮಹತ್ವಪೂರ್ಣವಾಗಿರುವ ಜ್ಯೇಷ್ಥ ನಾಗರಿಕರ ದಿನಾಚರಣೆಯು ಹಿರಿಯರಿಗೆ ಕೃತಜ್ನತೆಯನ್ನು ನೀಡುವ ದಿನವಾಗಿದೆ ಎಂದು ಸಮಾಜ ಸೇವಕಿ, ಶಿಕ್ಷಣ ತಜ್ನೆ ಮಮತಾ ಅಧಿಕಾರಿ ಶಾಸ್ತ್ರಿ ನುಡಿದರು.
ಅ. 1 ರಂದು ಗೋರೆಗಾಂವ್ ಪೂರ್ವದ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಹಾಲ್, ನಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ ಸಂಘದ ಹಿರಿಯರಾದ ಹಿರಿಯಣ್ಣ ಶೆಟ್ಟಿ, ಎಸ್. ಬಿ ಕುಕ್ಯಾನ್, ಆರ್ ಎಸ್ ದೇವಾಡಿಗ, ರಾಧು ಕಿಟ್ಟು ಶೆಟ್ಟಿ ಇವರ ಸ್ಮರಣಾರ್ಥ ಸ್ಥಾಪಿಸಿದ ದತ್ತಿ ನಿದಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ನಮ್ಮ ಪರಂಪರೆ ಹಾಗೂ ನಮ್ಮ ಜೀವನದ ಮೌಲ್ಯಗಳನ್ನು ಹೇಳುವವರು ನಮ್ಮ ಹಿರಿಯರು. ಹಿರಿಯ ನಾಗರಿಕರು ತಮ್ಮ ಅನಾರೋಗ್ಯವನ್ನು ಎದುರಿಸುವ ಶಕ್ತಿ ತುಂಬಲು ನಾಲ್ಕು ಬಗೆಯ ಸ್ವಾಸ್ಥ್ಯ ದ ಬಗ್ಗೆ ತಿಳಿಸುತ್ತಾ ನಾವು ಯಾವಾಗಲೂ ಸಕಾರಾತ್ಮಕವಾಗಿರಬೇಕು ಎನ್ನುತ್ತಾ ಅತೀ ಹಿರಿಯ ವಯಸ್ಸಲ್ಲೂ ಸಾದನೆ ಮಾಡಿದ ಕೆಲವು ಹಿರಿಯ ಸಾಧಕರ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಅವರು ಮಾತನಾಡುತ್ತಾ ಹಿರಿಯ ನಾಗರಿಕರ ದಿನಾಚರಣೆಯನ್ನಾಚರಿಸುತ್ತಿರುವ ಗೋರೆಗಾಂವ್ ಕರ್ನಾಟಕ ಸಂಘ ಒಂದು ಹಿರಿಯ ಸಂಘಟನೆಯಾಗಿದ್ದು ಇಂದಿನ ದತ್ತಿ ನಿಧಿ ಕಾರ್ಯಕ್ರಮದ ಮೂಲಕ ಸ್ಮರಿಸಲ್ಪಡುವಂತಹ ಹಿರಿಯರು ಸಂಘಕ್ಕೆ ನೀಡಿದ ಕೊಡುಗೆ ಅಪಾರ. ದಿ. ಡಾ. ಸಂಜೀವ ಶೆಟ್ಟಿಯವರು ಅವರ ತಾಯಿ ರಾಧು ಕಿಟ್ಟು ಶೆಟ್ಟಿ ಯವರ ಹೆಸರಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದರು. ಇಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಮಮತಾ ಅಧಿಕಾರಿ ಶಾಸ್ತ್ರಿ ಅವರು ಜೇಷ್ಠ ನಾಗರಿಕರ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದು ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ದಿ. ಹಿರಿಯಣ್ಣ ಶೆಟ್ಟಿಯವರ ಸುಪುತ್ರ ರಮೇಶ್ ಶೆಟ್ಟಿ ಸಂಘದ ಕೋಶಾಧಿಕಾರಿ ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಹರಿಶ್ಚಂದ್ರ ಆಚಾರ್ಯ ಅವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ಸಂಘದ ಗೌ. ಪ್ರ. ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಎಲ್ಲರನ್ನೂ ಸ್ವಾಗತಿಸಿದರು. ಗ್ರಂಥ ಪಾಲಕರಾದ ವಸಂತಿ ಕೋಟೆಕಾರ್ ಮತ್ತು ಮಾಜಿ ಗೌ. ಪ್ರ. ಕಾರ್ಯದರ್ಶಿ ವಾಣಿ ಶೆಟ್ಟಿಯವರು ದತ್ತಿ ನಿಧಿಯ ಮೂಲಕ ಸ್ಮರಿಸುತ್ತಿರುವಂತಹ ಹಿರಿಯರ ಬಗ್ಗೆ ಮಾಹಿತಿಯಿತ್ತರು. ಜೊತೆ ಕಾರ್ಯದರ್ಶಿ ಶಾಂತಾ ಶೆಟ್ಟಿಯವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು.
ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಹರಿಶ್ಚಂದ್ರ ಆಚಾರ್ಯ ಇವರ ನೇತೃತ್ವದಲ್ಲಿ ಯುವ ವಿಭಾಗದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಉಪಸ್ಥಿತರಿದ್ದ ಎಲ್ಲಾ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಸಂಘದ ಮಾಜಿ ಉಪಾಧ್ಯಕ್ಷೆ ಪದ್ಮಜಾ ಮಣ್ಣುರು ಅವರು ಹಿರಿಯರಿಗಾಗಿ ವಿಶೇಷ ರೀತಿಯ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಗುಣಾ ಬಂಗೇರ ಮತ್ತು ವಾಣಿ ಶೆಟ್ಟಿಯವರು ತಾವು ರಚಿಸಿದ ಕವಿತೆಯನ್ನು ವಾಚಿಸಿದರು. ಸಂಘದ ಮಾಜಿ ಟ್ರಷ್ಟಿ ರಮೇಶ್ ಶೆಟ್ಟಿ ಪಯ್ಯಾರ್, ಸಮಿತಿಯ ಸದಸ್ಯರಾದ ಪ್ರಕಾಶ್ ಶೆಟ್ಟಿ ಪೇಟೆಮನೆ, ಮಾಜಿ ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್, ಸಂಘದ ಕಾರ್ಯಕಾರಿ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸುರೇಶ್ ಪೂಜಾರಿ ವಂದನಾರ್ಪಣೆ ಮಾಡಿದರು. ಬಾಲಕ ಅವನೀಶ್ ಶೆಟ್ಟಿಯವರು ಹಾರ್ಮೋನಿಯಂ ಮೂಲಕ ರಾಷ್ಟ್ರಗೀತೆಗೆ ಸಂಗೀತ ನೀಡಿದರು.
Post a Comment