ಚಿಣ್ಣರ ಬಿಂಬದ ವಿಕ್ರೋಲಿ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆಗಾಗಿ.
ಚಿಣ್ಣರ ಬಿಂಬದ ವಿಕ್ರೋಲಿ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆಗಾಗಿ.
ಮಕ್ಕಳು ನಮ್ಮ ಊರಿನ ಆಚಾರ ವಿಚಾರ ತಿಳಿದುಕೊಳ್ಳಿಬೇಕು ಆಗಲೆ ಒಂದು ಉತ್ತಮ ಸಮಾಜ ಸಾಧ್ಯ :ಉದಯ ಶೆಟ್ಟಿ ಪೇಜಾವರ
ಮುಂಬಯಿ ಅ3. ವಿಕ್ರೋಲಿ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆಗಾಗಿ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಯಿತು.ಚಿಣ್ಣರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಲಾಯಿತು.. ಸೆ.24ರಂದು ವಿಕ್ರೋಲಿಯ ವಿಕೇಸ್ ಇಂಗ್ಲೀಷ್ ಸ್ಕೋಲಿನಲ್ಲಿ ಯಶಸ್ವಿಯಾಗಿ ನೇರವೇರಿತು .
ವಿಕ್ರೋಳಿ ಕನ್ನಡ ಸಂಘದ ಅಧ್ಯಕ್ಷರಾದ ಉದಯ ಶೆಟ್ಟಿ ಪೇಜಾವರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಚಿಣ್ಣರ ಬಿಂಬದ ಮಕ್ಕಳ ಶಿಸ್ತು ಆಚಾರ ವಿಚಾರಗಳ ಬಗ್ಗೆ ಮಾತನಾಡುತ ವಿಕ್ರೋಲಿ ಚಿಣ್ಣರ ಬಿಂಬದ ಶ್ರೇಯಸಿಗೆ ಸಹಾಯ ಮಾಡುವುದ್ದಾಗಿ ಆಶ್ವಾಸನೆ ನೀಡಿದರು. ಚಿಣ್ಣರ ಬಿಂಬದ ಪ್ರತಿ ವಾರ ನಡೆಯುವ ತರಗತಿಗಳಿಗೆ ಯಾವುದೇ ತೊಂದರೆ ಇಲ್ಲದೆ ಸ್ಥಳಾವಕಾಶ ನೀಡುವುದ್ದಾಗಿ ತಿಳಿಸಿದ್ದರು. ಮಕ್ಕಳು ನಮ್ಮ ಊರಿನ ಆಚಾರ ವಿಚಾರ ತಿಳಿದುಕೊಳ್ಳಿಬೇಕು ಆಗಲೆ ಒಂದು ಉತ್ತಮ ಸಮಾಜ ಸಾಧ್ಯ ಎಂದರು.
ಬಂಟ್ಸ್ ಸಂಘ ಹಾಗೂ ವಿಕ್ರೋಳಿ ಕನ್ನಡ ಸಂಘದ ಉಪ ಅಧ್ಯಕ್ಷರಾದ ಗಣೇಶ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.ಅವರು ವಿಕ್ರೋಲಿ ಚಿಣ್ಣರ ಬಿಂಬದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರು ವಿಕ್ರೋಲಿ ಚಿಣ್ಣರ ಬಿಂಬಕ್ಕೆ ಹೆಚ್ಚಿನ ಮಕ್ಕಳು ಸೇರಿಕೊಳ್ಳುವಂತೆ ಹೆಚ್ಚಿನ ಮುತುವರ್ಜಿಯನ್ನು ವಹಿಸುದಾಗಿ ಹೇಳಿದರು ಅಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು
ಇನ್ನೋಬ್ಬ ಅತಿಥಿ ನವೀನ್ ಇನ್ನು ಬಾಳಿಕೆಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಮಕ್ಕಳಲ್ಲಿ ಉತ್ತಮ ನಡತೆ ಆಚಾರ ವಿಚಾರ. ಮೈಗೂಡಿಸುವಲ್ಲಿ ಪೋಷಕರ ಹಾಗೂ ಗುರುಗಳ ಪಾತ್ರ ಮಾಹತ್ರವಾದುದು ಶಿಲೆಗೆ ಪೆಟ್ಟುಬಿದ್ದಾಗ ಮಾತ್ರ ಅದು ಮೂರ್ತಿಯಾಗುತ್ತದೆ. ಅಂತೆಯೋ ಮಕ್ಕಳಿಗೂ ಅವರು ತಪ್ಪುಮಾಡಿದ್ದಾಗ ಅವರನ್ನು ಶಿಕ್ಷಿಸಿ ಸರಿದಾರಿಗೆ ತರಬೇಕು ಎಂದರು
ಇನ್ನೋಬ್ಬ ಅತಿಥಿ MLA. ಕ್ಸಾರ್ಟಸ್ ಮಾಲಕರು ನವೀನ್ ಕರಿಯ ಶೆಟ್ಟಿಯಾವರು ಮಾತನಾಡಿ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸಬೇಕು ಮಕ್ಕಳ ಪ್ರತಿಭೆ ಕಂಡು ಸಂತೋಷ ವ್ಯಕ್ತಪಡಿಸಿದರು
ಕನ್ನಡ ಸಂಘದ ಸದಸ್ಯೆ ಪುಷ್ಪನಾಯಕ್ ವೇದಿಕೆಯಲ್ಲಿದ್ದರು. ಅವರು ಮಕ್ಕಳ ಪ್ರತಿಭೆ ಕಂಡು ಸಂತೋಷ ಗೊಂಡರು
ಹಾಗೂ ವಿಕ್ರೋಲಿಯ ಹೊಸತಾಗಿ S. E. 0 ಆಗಿರುವ ಯುಗಾನಂದ ಶೆಟ್ಟಿಯವರು ವೇದಿಕೆಯಲ್ಲಿದರು ಅವರನ್ನು ಮಕ್ಕಳು ಶಾಲು ಹಾಕಿ ಸಾಮ್ಮನಿ ಸಿದ್ದರು. ಈ ಕಾರ್ಯಕ್ರಮ ಯಶಸ್ವಿ ಆಗುವಲ್ಲಿ ಅವರ ಸಹಾಯ ಅಮೋಘ.
ಚಿಣ್ಣರಬಿಂಬದ ಕೇಂದ್ರ ಸಮಿತಿಯ ಸದಸ್ಯರಾದ ಸುಮಿತ್ರ ದೇವಾಡಿಗ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಚಿಣ್ಣರ ಬಿಂಬದ ಮಹತ್ವವನ್ನು ವಿವರಿಸಿದ್ದರು
ಕೇಂದ್ರ ಸಮಿತಿಯ ಸತೀಶ್ ಸಾಲಿಯಾನ್ ಅವರು ಮಕ್ಕಳಿಗೆ ಹಿತವಚನ ನುಡಿದ್ದರು. ಅಂತಿಯೊ ವಲಯ ಮುಖ್ಯಸ್ಥರಾದ ಸ್ಮಿತ ಸುಧಾಕರ್ ಹಾಗೂ
ದೇವಿಕಾ ಶೆಟ್ಟಿ ಉಪಸ್ಥಿತರಿದರು.
ಅಂತಿಯೋ ಮಕ್ಕಳ ಪ್ರತಿಭಾನ್ವೇಷನೆಗೆ ಬಂದ ತೀರ್ಪುಗಾರರಾಗಿ ಬಂದ ಶಾರದ ಅಂಬೆ. ಸಂಖ್ಯೆ ಹಾಗೂ ಸರ್ವ ಮಂಗಳ ನಿರಂಜನ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು ಅವರು ಮಕ್ಕಳ ಪ್ರತಿಭೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು
ಕೇಂದ್ರ ಸಮಿತಿಯ ಅಶೋಕ್ ಶೆಟ್ಟಿ ವೇದಿಕೆಯಲ್ಲಿದ್ದರು.
ಶಿಬಿರದ ಪಾಲಕರಾದ ವನಿತ ಅವರು ಸ್ವಾಗತ ಭಾಷಣ ಮಾಡಿದ್ದರು. ಶಿಬಿರ ಮುಖ್ಯಸ್ಥೆ ಅನುಸೂಯ ಸುಧೀರ್ ಶೆಟ್ಟಿ ಪ್ರಾಸ್ತವಿಕ ಭಾಷಣ ಮಾಡಿದ್ದರು. ಶಿಬಿರದ ಸಾಂಸ್ಕ್ರತಿಕ ಮುಖ್ಯಸ್ಥೆ ಹೇಮ ಶೆಟ್ಟಿ ಹಾಗೂ ಮಲ್ಲಿಕ ಸಾಲಿಯಾನ್ ಕಾಯ೯ಕ್ರಮದ ನಿರೂಪಣೆ ಮಾಡಿದ್ದರು. ಬಹುಮಾನ ವಿತರಣೆಯನ್ನು ಶೋಭಾ ಶೆಟ್ಟಿ ಹಾಗೂ ಸತೀಶ್ ಸಾಲಿಯಾನ್ ಮಾಡಿದ್ದರು. ಕನ್ನಡ ಶಿಕ್ಷಕಿ ಮಲ್ಲಿಕ ಸಾಲಿಯಾನ್ ಧನ್ಯವಾದ ಸಮರ್ಪಣೆ ಮಾಡಿದರು. ನಂತರ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಿಯ ಗೊಂಡಿತು.ಕಾರ್ಯಕ್ರಮ ದ ನಂತರ ಪ್ರೀತಿ ಭೋಜನದ ವ್ಯವಸ್ಥೆಯನ್ನು ಗಣೇಶ್ ಶೆಟ್ಟಿ ಮತ್ತು ಯುಗಾನಂದ ಶೆಟ್ಟಿಯವರ ವತಿಯಿಂದ ಮಾಡಲಾಯಿತು.
Post a Comment