ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಗರಿಗೆದರಿದ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು
ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಗರಿಗೆದರಿದ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು
ದೇಶದಲ್ಲೇ ಇದೇ ಮೊದಲ ಬಾರಿ ಬಿಹಾರ ಜಾತಿ ಗಣತಿ ಸಮೀಕ್ಷೆಯ ವರದಿಯನ್ನ ಬಹಿರಂಗ ಪಡಿಸಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಇದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಸಹ ಜಾತಿ ಗಣತಿ ವರದಿ ಚಟುವಟಿಕೆಗಳು ಗರಿಗೆದರಿದ್ದು, ಶೀಘ್ರದಲ್ಲೇ ಜಾತಿ ಗಣತಿ ವರದಿ ಸಲ್ಲಿಸುವ ಸಾಧ್ಯತೆಗಳಿವೆ. ಇನ್ನು ಈ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗಡೆ ಮಾತನಾಡಿದ್ದು, ಅದು ಈ ಕೆಳಗಿನಂತಿದೆ ; ಬಿಹಾರದಲ್ಲಿ ಕೊಟ್ಟಿದ್ದು ಜಾತಿ ಗಣತಿ ವರದಿ. ಕರ್ನಾಟಕದ್ದು ಸಮಾಜಿಕ ಮತ್ತು ಶೈಕ್ಷಣಿಕ ವರದಿ. ಕಾಂತರಾಜ್ ಯಾಕೆ ಕೊಟ್ಟಿಲ್ಲ ಎನ್ನುವುದು ನಾನು ಚರ್ಚೆ ಮಾಡಿಲ್ಲ. ಸಾಮಾಜಿಕ ಮತ್ತು ಶೈಕ್ಚಣಿಕ ವರದಿ ಸಲ್ಲಿಸಲು ಸರ್ಕಾರದಿಂದ ಪತ್ರ ಬಂದಿದೆ. ನಾವು ಶೀಘ್ರದಲ್ಲೇ ವರದಿ ಸಲ್ಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ವರದಿ ಸಲ್ಲಿಸಲು ಕಾಲಮಿತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಪತ್ರ ಬರೆದಿರುವುದರಿಂದ ವರದಿ ನೀಡುವುದು ನಮ್ಮ ಜವಾಬ್ದಾರಿ ಆಗುತ್ತೆ. ನವೆಂಬರ್ 25ಕ್ಕೆ ನನ್ನ ಅವಧಿ ಮುಗಿಯಲಿದೆ. ಅದರೊಳಗೆ ವರದಿ ಸಲ್ಲಿಕೆ ಆಗಲಿದೆ. ಕಾಂತರಾಜು ಅವರ ನೀಡಿರುವ ಅಂಕಿ-ಅಂಶವನ್ನ ನಾವು ಅಲ್ಲಗೆಳಯಲು ಆಗುವುದಿಲ್ಲ. ಅವರನ್ಬ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವರದಿಗೆ ಕೆಲ ಸಮುದಾಯಗಳ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು, ಡಾಟಾ ಸರಿಯಾಗಿ ಬಂದಿರಬೇಕು. ಯಾವ ರಾಜಕೀಯ ಪಕ್ಷಗಳು ಮಾಡಿಲ್ಲ. ಶಿಕ್ಷಕರು ಮನೆ ಮನೆಗೆ ಹೋಗಿ ಮಾಡಿದ್ದಾರೆ. ಶೇಕಡಾ 80ಕ್ಕಿಂತ ಹೆಚ್ಚು ಇದ್ದರೆ ಅದನ್ನ ಒಪ್ಪಿಕೊಳ್ಳಬೇಕಾಗುತ್ತೆ. ಆಕ್ಷೇಪಣೆ ಸರ್ಕಾರಕ್ಕೆ ಕೆಲವರು ಮಾಡಿದಾರೆ. ಆದರೆ ನಾವು ಡಾಟಾ ಆಧಾರದಲ್ಲಿ ಮಾಡಿ್ದೇವೆ. ಉಳಿದಿದ್ದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ಹಿಂದುಳಿದ ವರ್ಗಗಳನ್ಬ ಮರು ವರ್ಗಿಕರಣ ಮಾಡಬೇಕಾಗುತ್ತೆ. ಪ್ರತಿ ಹತ್ತು ವರ್ಷಗಳಿಗೆ ಮರು ವರ್ಗಿಕರಣ ಮಾಡಬೇಕು. ಆದರೆ ಈಗ 20 ವರ್ಷ ಆಗಿದೆ. ಬಾಕಿ ಇರುವ ಹಿಂದಿನ ಆಯೋಗದ ವರದಿಯನ್ನ ಸಹ ಸರ್ಕಾರಕ್ಕೆ ಪಟ್ಟಿ ಕೊಡುತ್ತೇವೆ. ಇದು ಸಿದ್ದರಾಮಯ್ಯ ಅವರ ಬ್ರೈನ್ ಚೈಲ್ಡ್. ಅವರು ಈ ವರದಿಯನ್ನ ಒಪ್ಪುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
Post a Comment