ನೀರು ಕುಡಿದ ನಂತರ ನಲ್ಲಿ ಬಂದ್ ಮಾಡುವ ನಾಯಿ; ಇದು ಮನುಷ್ಯರಿಗಿಂತ ಜವಾಬ್ದಾರಿಯುತ
ನೀರು ಕುಡಿದ ನಂತರ ನಲ್ಲಿ ಬಂದ್ ಮಾಡುವ ನಾಯಿ; ಇದು ಮನುಷ್ಯರಿಗಿಂತ ಜವಾಬ್ದಾರಿಯುತ
ನೀರು ಕುಡಿದ ಬಳಿಕ ನಲ್ಲಿಯನ್ನು ಬಂದ್ ಮಾಡುವ ನಾಯಿ
ರೆಡ್ಡಿಟ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ನಲ್ಲಿಯ ನೀರನ್ನು ಕುಡಿದ ನಂತರ ತನ್ನ ಮೂಗಿನಿಂದ ನಲ್ಲಿಯನ್ನು ಬಂದ್ ಮಾಡುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಪರಮಾಶ್ಚರ್ಯಗೊಂಡಿದ್ದಾರೆ. ಮನುಷ್ಯರಿಗಿಂತ ಜವಾಬ್ದಾರಿಯುತವಾಗಿ ವರ್ತಿಸುತ್ತಿದೆ, ಇದು ತುಂಬಾ ಬುದ್ಧಿವಂತ ನಾಯಿ ಎಂದು ಶ್ಲಾಘಿಸುತ್ತಿದ್ದಾರೆ. ಮೂಲತಃ ಈ ವಿಡಿಯೋ ಅನ್ನು ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ರೆಡ್ಡಿಟ್ನಲ್ಲಿ ಈತನಕ 2,900 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ತಮಗೆ ಅನ್ನಿಸಿದ್ದನ್ನು ಹೇಳಿದ್ದಾರೆ.
ತುಂಬಾ ಒಳ್ಳೆಯ ಹುಡುಗನಿವ, ನೀರು ಕುಡಿದ ಮೇಲೆ ನಲ್ಲಿಯನ್ನು ತಿರುಗಿಸುವುದೂ ಇವನಿಗೆ ಗೊತ್ತಿದೆ ಎಂದಿದ್ಧಾರೆ ಒಬ್ಬರು. ಜಲಸಂರಕ್ಷಣೆಯಲ್ಲಿ ಮನುಷ್ಯರಿಗಿಂತ ಹೆಚ್ಚು ತಿಳಿವಳಿಕೆ ನಾಯಿಗಿದೆ ಎಂದಿದ್ದಾರೆ ಇನ್ನೊಬ್ಬರು. ನಿಜಕ್ಕೂ ಈ ವಿಡಿಯೋದಿಂದ ನಾನು ಪ್ರಭಾವಿತಗೊಂಡಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.
Post a Comment