ಹೆಂಡತಿಯಿಂದಲೇ ಗಂಡನ ಕೊಲೆ; ಪ್ರಕರಣ ಭೇದಿಸಲು ನೇರವಾದ ಬಸ್ ಟಿಕೆಟ್
ಹೆಂಡತಿಯಿಂದಲೇ ಗಂಡನ ಕೊಲೆ; ಪ್ರಕರಣ ಭೇದಿಸಲು ನೇರವಾದ ಬಸ್ ಟಿಕೆಟ್
ಮೂರು ದಿನಗಳ ಹಿಂದಿನ ಹಳೆಯ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ವೊಂದು ಕುಮಟಾದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ.
ಸೆ.30ರಂದು ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಾಟ್‌ನ ದೇವಸ್ಥಾನದ ಹಿಂಭಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು, ಆತನನ್ನು ಚೂಪಾದ ಆಯುಧಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು.
ತನಿಖೆ ಆರಂಭಿಸಿದ ಕುಮಟಾ ಪೊಲೀಸರಿಗೆ ಪ್ರಾರಂಭದಲ್ಲಿ ಯಾವುದೇ ಸುಳಿವು ಸಿಗಲಿಲ್ಲ. ಆದರೆ ಮೃತ ವ್ಯಕ್ತಿ ಬರ್ಬರವಾಗಿ ಹತ್ಯೆಯಾಗಿರುವುದು ದೃಢಪಟ್ಟಿತ್ತು. ಮೃತ ವ್ಯಕ್ತಿಯ ಪಾಕೆಟ್ ನಲ್ಲಿ ಸಿಕ್ಕ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ನಿಂದ ಆತ ಇತ್ತೀಚೆಗೆ ಗಜೇಂದ್ರ ಗಢಕ್ಕೆ ಭೇಟಿ ನೀಡಿದ್ದು ದೃಢವಾಗಿತ್ತು, ಆತ ಒಬ್ಬನೇ ಗಜೇಂದ್ರ ಗಢಕ್ಕೆ ಹೋಗಿರಲಿಲ್ಲ. ಮತ್ತೊಬ್ಬರು ಕೂಡ ಆತನ ಜೊತೆ ಪ್ರಯಾಣಿಸಿದ್ದರು. ಪೊಲೀಸರು ತನಿಖೆ ನಡೆಸಿದ ವೇಳೆ ಆತನ ಜೊತೆಗೆ ಪತ್ನಿಯೂ ಪ್ರಯಾಣಿಸಿರುವುದು ಬೆಳಕಿಗೆ ಬಂತು. ನಂತರ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಸಿಗೆರೆಗೆ ಪೊಲೀಸ್ ತಂಡ ತೆರಳಿ ವಿಚಾರವನ್ನು ದೃಢ ಪಡಿಸಿಕೊಂಡಿತ್ತು.
ವಿಚಾರಣೆಯ ಬಳಿಕ ಮೃತ ವ್ಯಕ್ತಿಯ ಪತ್ನಿಗೆ ಆತನ ಸ್ನೇಹಿತನ ಜೊತೆ ಇದ್ದ ಅಕ್ರಮ ಸಂಬಂಧವೇ ಆತನ ಕೊಲೆಗೆ ಕಾರಣ ಎಂಬುದಾಗಿ ತಿಳಿದು ಬಂದಿದೆ.
ತನ್ನ ಪ್ರಿಯಕರನ ಜೊತೆ ಸೇರಿ ಗಂಡನಿಗೆ ಸರಿಯಾಗಿ ಮದ್ಯ ಕುಡಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
Post a Comment