ಪುಣೆ ಬಂಟರ ಸಂಘ ಯಲ್ಲಿ ವಿಶ್ವ ಬಂಟರ ಸಮ್ಮೇಳನದ ಪೂರ್ವಭಾವಿ ಸಭೆ:


ಪುಣೆ ಬಂಟರ ಸಂಘ ಯಲ್ಲಿ  ವಿಶ್ವ ಬಂಟರ ಸಮ್ಮೇಳನದ  ಪೂರ್ವಭಾವಿ ಸಭೆ:


ಸಮ್ಮೇಳನ ಬಂಟರ ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ: ಐಕಳ ಹರೀಶ್ ಶೆಟ್ಟಿ

 ಪುಣೆ   ಅ 6. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷ  ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ, ವಿಶ್ವ ಬಂಟರ  ಸಮ್ಮೇಳನದ ಪ್ರಯುಕ್ತ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಅ 28. "ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆ"ಯಲ್ಲಿ ನಡೆಯಲಿರುವ "ವಿಶ್ವ ಬಂಟರ ಕ್ರೀಡಾ ಕೂಟ"  ಮತ್ತು ಅ 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ  ಕನ್ಯಾನ ಸದಾಶಿವ ಶೆಟ್ಟಿ ವೇದಿಕೆ"ಯಲ್ಲಿ ನಡೆಯಲಿರುವ "ವಿಶ್ವ ಬಂಟರ ಸಾಂಸ್ಕೃತಿಕ ವೈಭವ"* ಕಾರ್ಯಕ್ರಮಗಳ ಕುರಿತ *ಎಂಟನೇ ಪೂರ್ವಭಾವಿ ಸಭೆಯು ಅ 04ರಂದು ಬಂಟರ ಸಂಘ ಪುಣೆಯ ಸಭಾಭವನದಲ್ಲಿ  ನಡೆಯಿತು.


          ಸಭೆಯಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದ ಕರಪತ್ರವನ್ನು ಬಂಟರ ಸಂಘ ಪುಣೆಯ ಅಧ್ಯಕ್ಷರಾದ  ಸಂತೋಷ್ ಶೆಟ್ಟಿಯವರು ಅನಾವರಣಗೊಳಿಸಿ.ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮಗಳಲ್ಲಿ ಬಂಟ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು .

 ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರನ್ನು ವಿಶೇಷವಾಗಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ಮಾತನಾಡುತ್ತಾ ಸಮಾಜ ಬಲಿಷ್ಠಗೊಳ್ಳಬೇಕಿದ್ದರೆ ನಾವೆಲ್ಲರೂ ಒಗ್ಗಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಜಗತ್ತಿನಾದ್ಯಂತ ಇರುವ ಬಂಟ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ನಮ್ಮ ವೈಯಕ್ತಿಕ ಸಂಬಂಧಗಳನ್ನು ಕಟ್ಟಿಗೊಳಿಸಿದರೊಂದಿಗೆ ಬಂಟ್ ಸಮಾಜದ ಸಂಘಟನಾ ಶಕ್ತಿ ಸರಕಾರಕ್ಕೆ ಮನವರಿಕೆ  ಆಗುವಂತಾಗಲಿದೆ  ಎಂದು ನುಡಿದರು.

ಉಪಾಧ್ಯಕ್ಷ  ಕರ್ನಿರೆ ವಿಶ್ವನಾಥ್ ಶೆಟ್ಟಿಯವರು, ಕೋಶಾಧಿಕಾರಿ  ಉಳ್ತುರು ಮೋಹನದಾಸ್ ಶೆಟ್ಟಿ, ಒಕ್ಕೂಟದ ವಿಶೇಷ ಮಹಾ ನಿರ್ದೇಶಕರಾದ  ಪ್ರವೀಣ್ ಭೋಜ ಶೆಟ್ಟಿ, ಒಕ್ಕೂಟದ ಪೋಷಕ ಸದಸ್ಯರು ಹಾಗೂ ಕ್ರೀಡಾ ಸಮಿತಿಯ ಸಂಚಾಲಕರಾದ  ಗಿರೀಶ್ ಶೆಟ್ಟಿ ತೆಳ್ಳರ್, ಇವರೆಲ್ಲರೂ ಒಟ್ಟು ಕಾರ್ಯಕ್ರಮದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. 

 ಕಾರ್ಯಕ್ರಮದಲ್ಲಿಪುಣೆ ಬಂಟರ ಸಂಘದ  ಉಪಾಧ್ಯಕ್ಷ  ಚಂದ್ರಹಾಸ್ ಶೆಟ್ಟಿ ಎರ್ಮಾಳ್,ಗೌರವ ಕಾರ್ಯದರ್ಶಿ  ಅಜಿತ್ ಹೆಗ್ಡೆ, ಕೋಶಾಧಿಕಾರಿ  ಸತೀಶ್ ಶೆಟ್ಟಿ ಪುಣೆ, ಪಿಂಪ್ರಿ ಚಿಂಚ್ವಾಡದ ಅಧ್ಯಕ್ಷರು  ರಾಕೇಶ್ ಎ.ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ಪುಣೆಯ ಅಧ್ಯಕ್ಷರಾದ ಗಣೇಶ್ ಹೆಗ್ಡೆ,ಪೂನಾಗೇಟ್ ಹೋಟೆಲ್ ನ ಮಾಲಕರಾದ  ಬಾಲಚಂದ್ರ ಶೆಟ್ಟಿ ಎರ್ಮಾಳ್,  ಅಶೋಕ್ ಪಕ್ಕಳ ಮುಂಬೈ,  ವಿಜಯ ಶೆಟ್ಟಿ,  ಜಗದೀಶ್ ಶೆಟ್ಟಿ,  ಪ್ರಶಾಂತ್ ಶೆಟ್ಟಿ, ಗಣೇಶ್ ಶೆಟ್ಟಿ, ಬಂಟರ ಸಂಘ ಪುಣೆಯ ಮಹಿಳಾ ವಿಭಾಗದ ಸದಸ್ಯರು ಹಾಗೂ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು.

No comments

Powered by Blogger.