₹ 2,000 ನೋಟುಗಳ ವಿನಿಮಯಕ್ಕೆ ಇಂದು ಕೊನೆಯ ದಿನ


₹ 2,000 ನೋಟುಗಳ ವಿನಿಮಯಕ್ಕೆ ಇಂದು ಕೊನೆಯ ದಿನ


ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಇಂದು(ಅ.7) ಕೊನೆಯ ದಿನ. ಭಾರತೀಯ ರಿಸರ್ವ್ ಬ್ಯಾಂಕ್ 

 ಸೆ.30ರಂದು ಈ ಆದೇಶವನ್ನು ಹೊರಡಿಸಿತ್ತು. ಸೆ.30 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನವಾಗಿತ್ತು. ಆದರೆ ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸುವ ನಿರ್ಧಾರವನ್ನು ಆರ್​​ಬಿಐ ಮಾಡಿತ್ತು. ಅದಕ್ಕಾ ಅ.7ರವರೆಗೆ ಮರಳಿಸಲು ಮತ್ತು ವಿನಿಮಯ ಕಲಾವಕಾಶವನ್ನು ನೀಡಲಾಗಿತ್ತು. ಇಂದು 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಕೊನೆಯ ದಿನವಾಗಿದೆ. ಅ.7ರ ನಂತರ 2,000 ರೂ. ನೋಟುಗಳನ್ನು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.


ಇನ್ನು ಈ 19 ಕಛೇರಿಗಳಲ್ಲಿ 20 ಸಾವಿರದವರೆಗೆ ವಿನಿಮಯ ಮಾಡಿಕೊಳ್ಳಬಹುದು. ಜತೆಗೆ 2 ಸಾವಿರ ನೋಟುಗಳನ್ನು ಜನರು ತಮ್ಮ ಬ್ಯಾಂಕ್​​ಗಳಲ್ಲಿ ಯಾವುದೇ ಮೊತ್ತಕ್ಕೆ ಕ್ರೆಡಿಟ್​​ ಮಾಡಿಕೊಳ್ಳಬಹುದು ಎಂದು ಹೇಳಿದೆ.


ಆರ್​​ಬಿಐ ಪ್ರಕಾರ 2,000 ರೂ. ನೋಟು ಅ.7ರವರೆಗೆ ಕಾನೂನುಬದ್ಧವಾಗಿ ಬ್ಯಾಂಕ್​​ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ ಈ ನೋಟುಗಳನ್ನು ಯಾವುದೇ ವಹಿವಾಟುಗಳಲ್ಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಅ.7 ನಂತರ ಆರ್​​ಬಿಐ ಸೂಚಿಸಿದ 19 ಕಛೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು.


2,000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ?
ಆರ್‌ಬಿಐ ನಿಗಪಡಿಸಿರುವ 18 ಕಛೇರಿಗಳಲ್ಲಿ 2 ಸಾವಿರದ ನೋಟನ್ನು ವಿನಿಮಯ ಮಾಡಿಕೊಳ್ಳಲು ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂಗಳಲ್ಲಿ ಶಾಖೆಯನ್ನು ಈಗಾಗಲೇ ತೆರೆಯಲಾಗಿದೆ.

ಇದಲ್ಲದೆ ನಿಮ್ಮ ಹತ್ತಿರದ ಬ್ಯಾಂಕ್​​ಗಳಲ್ಲಿ ಈ ವಿನಿಮಯಗಳನ್ನು ಮಾಡಿಕೊಳ್ಳಬಹುದು. ಆದರೆ ಇದು ಆರ್​​ಬಿಐ ಸೂಚಿಸಿದ 19 ಕಚೇರಿಗಳ ವ್ಯಾಪ್ತಿಯನ್ನು ಹೊಂದಿರಬೇಕು. ಒಂದು ವೇಳೆ ಈ ಕಚೇರಿಗಳು ನಿಮ್ಮ ಬ್ಯಾಂಕ್​​​ಗಳಲ್ಲಿ ಇಲ್ಲವೆಂದರೆ, 2 ಸಾವಿರ ನೋಟುಗಳನ್ನು ಪೋಸ್ಟ್​ ಕೂಡ ಮಾಡಬಹುದು ಎಂದು ಆರ್​​ಬಿಐ ಹೇಳಿದೆ.

No comments

Powered by Blogger.