ಪಡಿತರ ಚೀಟಿದಾರರಿಗೆ ಸಂತಸದ ಸುದ್ಧಿ,ತಿದ್ದುಪಡಿಗೆ ಅವಕಾಶ ವಿಸ್ತರಣೆ.






ಪಡಿತರ ಚೀಟಿದಾರರಿಗೆ ಸಂತಸದ ಸುದ್ಧಿ,
 ತಿದ್ದುಪಡಿಗೆ ಅವಕಾಶ ವಿಸ್ತರಣೆ.


ಕರ್ನಾಟಕ ರಾಜ್ಯಾದ್ಯಂತ ಪಡಿತರ ಚೀಟಿ ತಿದ್ದುಪಡಿಗೆ ಆಹಾರ ಇಲಾಖೆ ಮತ್ತೊಮ್ಮೆ ಅವಕಾಶ ನೀಡಿದ್ದು, ಆಕ್ಟೊಬರ್ 13 ರ ತನಕ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

APL, BPL ಕಾರ್ಡುದಾರರು ಹೊಸ ಹೆಸರು ಸೇರ್ಪಡೆ, ಹೆಸರು, ವಿಳಾಸ ಪರಿಷ್ಕರಣೆ, ಸೇರಿದಂತೆ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಸಬಹುದು 
ಕಳೆದ ತಿಂಗಳು ಕೂಡ ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು, ಆದರೆ ಸರ್ವರ್ ನ ತಾಂತ್ರಿಕ ದೋಷದಿಂದ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು.

ಈ ಹಿನ್ನೆಲೆಯಲ್ಲಿ ಇದೀಗ ಆಹಾರ ಇಲಾಖೆ ಮತ್ತೆ ಅವಕಾಶ ನೀಡಿದ್ದು, ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ ಮಾಡಿಸಬಹುದು.

No comments

Powered by Blogger.