ಬಿಜೆಪಿಯ ಡೊಂಬಿವಿಲಿ ದಕ್ಷಿಣ ಘಟಕದ ಅಧ್ಯಕ್ಷರಾಗಿ ರತನ್ ಪೂಜಾರಿ ಆಯ್ಕೆ.
ಬಿಜೆಪಿಯ ಡೊಂಬಿವಿಲಿ ದಕ್ಷಿಣ ಘಟಕದ ಅಧ್ಯಕ್ಷರಾಗಿ ರತನ್ ಪೂಜಾರಿ ಆಯ್ಕೆ.
ರತನ್ ಪೂಜಾರಿ ಅವರು ಸುದೀರ್ಘ ಪ್ರಯಾಣದ ನಂತರ, ಬಿಜೆಪಿಯ ಡೊಂಬಿವಿಲಿ ದಕ್ಷಿಣ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
"ನನ್ನ ಎಲ್ಲಾ ಕುಟುಂಬಸ್ತರು, ಸ್ನೇಹಿತರು ಮತ್ತು ಸಹವರ್ತಿಗಳ ಬೆಂಬಲ ಮತ್ತು ಪ್ರೀತಿ ,ಕಷ್ಟದ ಸಮಯದಲ್ಲಿಯೂ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ನನಗೆ ಹೆಚ್ಚು ಪ್ರೇರಣೆ ನೀಡಿತು. ನನ್ನ ಜೀವನದಲ್ಲಿ, ನಾನು ಶೂನ್ಯ ಆಕ್ಷೇಪಣೆಗಳೊಂದಿಗೆ ,ಸೇವೆ ಮಾಡಿ ಇಲ್ಲಿಯ ತನಕ ತಳಪಿದ್ದೇನೆ. 15 ವರ್ಷಗಳ ಸಾರ್ಥಕ ಕಾರ್ಯಗಳ ನಂತರ ,ಈ ಪದವಿ ಸಿಕಿದ್ದು ತುಂಬಾ ಸಂತೋಷವಾಗಿದೆ" ಎಂದು ರತನ್ ಪೂಜಾರಿ ನುಡಿಯುತ್ತಾರೆ.
ಅವರು ಪಕ್ಷದ ತಳಮಟ್ಟದಲ್ಲಿ ದುಡಿದು ಇಂದು ಡೊಂಬಿವಲಿ ಬಿಜೆಪಿ ದಕ್ಷಿಣ ಘಟಕದ ಅಧ್ಯಕ್ಷರಾಗಿದ್ದಾರೆ. ಅವರು 2008 ರಲ್ಲಿ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ,2010 ರಲ್ಲಿ ಡೊಂಬಿವಲಿ ದಕ್ಷಿಣ ಘಟಕದ ಗ್ರಾಮೀಣ ಭಾಗದ ಪ್ರದಾನ ಕಾರ್ಯದರ್ಶಿ,2012 ರಲ್ಲಿ ವಿದ್ಯಾರ್ಥಿ ಘಟಕದ ಕಲ್ಯಾಣ್ ಜಿಲ್ಲಾ ಉಪಾಧ್ಯಕ್ಷ,2017 ರಲ್ಲಿ ಯುವ ಮೋರ್ಚಾ ಕಲ್ಯಾಣ್ ಜಿಲ್ಲಾ ಉಪಾಧ್ಯಕ್ಷ, 2019 ರಲ್ಲಿ ಯುವ ಮೋರ್ಚಾ ಕಲ್ಯಾಣ್ ಜಿಲ್ಲಾ ಉಪಾಧ್ಯಕ್ಷ ,2021 ರಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡೊಂಬಿವಿಲಿ , ಹೀಗೆ ವಿವಿಧ ಪದವಿಯಲ್ಲಿ ಪ್ರಾಮಾಣಿಕ ಸೇವೆ ಮಾಡಿರುವರು .
ಅವರ ಈ ಸುಧೀರ್ಘ ಪ್ರಯಾಣದಲ್ಲಿ ,ಅವರಿಗೆ ಸಾಥ್ ನೀಡಿದ ತುಳುನಾಡಿನ ಸ್ನೇಹಿತರನ್ನು ಮತ್ತು ಗುರುಗಳನ್ನು ಸದಾ ಸ್ಮರಿಸುವ ಅವರು , ಮುಂದಿನ ದಿನಗಳಲ್ಲೂ ಉತ್ತಮ ರೀತಿಯಲ್ಲಿ ಕಾರ್ಯವೆಸಗುವ ಭರವಸೆ ನೀಡಿ, ಡೊಂಬಿವಲಿ
ದಕ್ಷಿಣ ಘಟಕದ ಅಧ್ಯಕ್ಷ ಪದವಿಯ ಪದಗ್ರಹಣ ಕಾರ್ಯಕ್ರಮಕ್ಕೆ ತುಳು-ಕನ್ನಡಿಗರು ಉಪಸ್ಥಿತರಿರುವಂತ್ತೆ ವಿನಂತಿಸಿದ್ದಾರೆ.

Post a Comment