ನವಿ ಮುಂಬಯಿಯ ಕೆಲವು ಭಾಗ 12 ಗಂಟೆ ನೀರು ಸರಬರಾಜು ವ್ಯತಯ.
ನವಿ ಮುಂಬಯಿಯ ಕೆಲವು ಭಾಗ 12 ಗಂಟೆ ನೀರು ಸರಬರಾಜು ವ್ಯತಯ.
ನವಿ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ ಏರಿಯಾ ಹಾಗೂ ಖಾರ್ಘರ್, ಕಾಮೋತೆ ಪ್ರದೇಶದಲ್ಲಿ ಆಕ್ಟೊಬರ್ 9 ರ ಸಂಜೆಯಿಂದ 12 ಗಂಟೆಗಳ ಕಾಲ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಭೋಕರ್ಪಾಡ ನೀರು ಸರಬರಾಜು ಕೇಂದ್ರ ತುರ್ತು ಕಾರ್ಯಕಾಗಿ ಮುಚ್ಚಲ್ಪಡುತ್ತಿದ್ದು, ಬೇಲಾಪುರ,ನೆರುಲ್, ತುರ್ಭೆ, ವಾಶಿ, ಕೋಪರ್ಖೈರ್ನೆ, ಘಂಸೋಲಿ ಹಾಗೂ ಐರೋಲಿ ,ಈ ಪ್ರದೇಶದಲ್ಲಿ ನೀರು ಸರಬರಾಜು ವ್ಯತಯವಾಗಲಿದೆ ಎಂದು ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ಜಲ ಸರಬರಾಜು ವಿಭಾಗ ತಿಳಿಸಿದ್ದು, ಆಕ್ಟೊಬರ್ 10 ರ ಬೆಳ್ಳಿಗ್ಗೆ ನೀರು ಸರಬರಾಜು ಆರಂಭವಾಗಲಿದೆ.
ನವಿ ಮುಂಬಯಿ ಜನತೆ ಅಗತ್ಯಕ್ಕೆ ನೀರು ಸಂಗ್ರಹ ಮಾಡಿಕೊಳ್ಳುವುದಲ್ಲದೆ, ನೀರು ಪೋಲು ಮಾಡಬಾರದು ಎಂದು ನವಿ ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ ಮನವಿ ಮಾಡಿದೆ.
Post a Comment