ಮಾತ ಅಮ್ರತಾನಂದಮಯಿ ಅವರಿಗೆ ಭಾರತ ರತ್ನ ನೀಡಬೇಕು - ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು.
ಮಾತ ಅಮ್ರತಾನಂದಮಯಿ ಅವರಿಗೆ ಭಾರತ ರತ್ನ ನೀಡಬೇಕು - ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು.
ಮಂಗಳೂರು .ಅ.9. ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ವೈದ್ಯಕೀಯವಾಗಿ ಸೇವೆ ಮಾಡುವ, ಜಗತ್ತಿನ ಎಲ್ಲೆಡೆ ಅಮ್ಮ ಎಂದೇ ಕರೆಯಲ್ಪಡುವ, ನೊಂದವರ ಪಾಲಿನ ಮಾತೆ, ಮಾತ ಅಮ್ರತಾನಂದಮಯಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಆಗ್ರಹಿಸಿದರು.
ಅವರು ನಿನ್ನೆ (ತಾ.8) ಮಂಗಳೂರಿನ ಉರ್ವ ಸ್ಟೋರ್ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಮಾತ ಅಮ್ರತಾನಂದ ಮಯಿ ಅವರ 70ನೇ ಹುಟ್ಟುಹಬ್ಬದ ಸಲುವಾಗಿ ನಡೆದ ಅಮೃತೋತ್ಸವ 2023 ರಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶವು ಸುಖಿ ರಾಷ್ಟ್ರ ರಾಮರಾಜ್ಯ ವಾಗಬೇಕು.ಅಮ್ಮನ ಸೇವೆ ಇನ್ನೂ ಮುಂದುವರಿದು, ಇತಿಹಾಸ ಸ್ರಷ್ಟಿಸಬೇಕು ಎಂದು ನುಡಿದು, ವಿಧಾನ ಪರಿಷತ್ ನಿಧಿಯಿದ 10 ಲಕ್ಷ ರೂಪಾಯಿ ದೇಣಿಗೆ ಪತ್ರವನ್ನು ಹಸ್ತಾಂತರಿಸಿದರು.
ಮೇಯರ್ ಸುಧೀರ್ ಶೆಟ್ಟಿ, ಮಂಗಳೂರು ಅಮ್ರತಾನಂದಮಯಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮ್ರತ, ಕೋಸ್ಟ್ ಗಾರ್ಡ್ ನ ನಿವೃತ್ತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರಾ ಉಪಸ್ಥಿತರಿದ್ದರು.
Post a Comment