ಆ 15 ರಿಂದ 24 ರ ವರಗೆ ಶ್ರೀ ಜಗದಂಬ ಸೇವಾ ಸಮಿತಿ, ವಿಕ್ರೋಲಿ ಯಲ್ಲಿ 54 ನೇ ಸಾರ್ವಜನಿಕ ನವರಾತ್ರಿ ಮಹೋತ್ಸವ.
ವಿಕ್ರೋಲಿ ಪೂರ್ವ ಟ್ಯಾಗೋರ್ ನಗರದ ಶ್ರೀ ಜಗದಂಬ ಸೇವಾ ಸಮಿತಿಯಲ್ಲಿ ವರ್ಷಾಂಪ್ರತೀ ನಡೆದು ಬರುವ ಮಹೋತ್ಸವದ ಅಂಗವಾಗಿ ಈ ವರ್ಷದ ನವರಾತ್ರಿ ಮಹೋತ್ಸವವು ಆಕ್ಟೊಬರ್ 15 ರಿಂದ 24 ರ ವರಗೆ ಜರುಗಲಿದೆ.
ಆ ಪ್ರಯುಕ್ತ ಪ್ರತಿದಿನ ರಾತ್ರಿ 7.00 ಗಂಟೆಯಿಂದ 10.00 ರ ವರಗೆ ಭಜನೆ, ಪೂಜೆ, ಆರತಿ, ತೀರ್ಥ ಪ್ರಸಾದ ಹಾಗೂ ಮಹಾಪ್ರಸಾದ ನಡೆಯಲಿದೆ.
ಅಕ್ಟೋಬರ್ 22 ರಂದು ಬೆಳಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆದು ಅನ್ನಸಂತರ್ಪಣೆ ಜರುಗಲಿದೆ.
ಅಕ್ಟೋಬರ್ 23ರ ರಾತ್ರಿ 7:00 ಗಂಟೆಯಿಂದ 24ರ ಬೆಳಿಗ್ಗೆ 6.00 ಗಂಟೆಯವರೆಗೆ ಭಜನೆ, ಪೂಜೆ, ಆರತಿ ನಡೆದು ಅಕ್ಟೋಬರ್ 24ರ ಬೆಳಿಗ್ಗೆ 6.00 ರಿಂದ 7.30 ರವರೆಗೆ ಭಜನೆ, ವಾದ್ಯವೃಂದದೊಂದಿಗೆ ಮೆರವಣಿಗೆ, ತದನಂತರ ಪೂಜೆ, ಆರತಿ ನಡೆದು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸದ್ಭಕ್ತ ಬಾಂಧವರು ಉಪಸ್ಥಿತರಿದ್ದು ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಜಗದಂಬೆ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಜಗದಂಬ ಸೇವಾ ಸಮಿತಿಯ ಪರವಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Post a Comment