ದೆಹಲಿಯಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ


ದೆಹಲಿಯಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ

ದೆಹಲಿಯಲ್ಲಿ ಶಂಕಿತ ಐಸಿಸ್ ಉಗ್ರ ಶಹನ್​ವಾಜ್​ ಅಲಿಯಾಸ್​ ಶಫಿಯನ್ನು ಬಂಧಿಸಲಾಗಿದೆ. ದೆಹಲಿಯ ವಿಶೇಷ ಪೊಲೀಸ್ ತಂಡವು ಶಫಿಯನ್ನು ಬಂಧಿಸಿದೆ, ಉಗ್ರರ ಬಗ್ಗೆ ಸುಳಿವು ಕೊಟ್ಟವರಿಗೆ ಎನ್​ಐಎ 3 ಲಕ್ಷ ರೂ ಬಹುಮಾನವನ್ನು ಘೋಷಿಸಿತ್ತು. ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನವಾಜ್ ಮೂಲತಃ ದೆಹಲಿಯವರು. ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದರು. ಸದ್ಯ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಶಂಕಿತ ಐಸಿಸ್ ಉಗ್ರ ಶಹನ್​ವಾಜ್​ ಅಲಿಯಾಸ್​ ಶಫಿಯನ್ನು ಬಂಧಿಸಲಾಗಿದೆ. ದೆಹಲಿಯ ವಿಶೇಷ ಪೊಲೀಸ್ ತಂಡವು ಶಫಿಯನ್ನು ಬಂಧಿಸಿದೆ, ಉಗ್ರರ ಬಗ್ಗೆ ಸುಳಿವು ಕೊಟ್ಟವರಿಗೆ ಎನ್​ಐಎ 3 ಲಕ್ಷ ರೂ ಬಹುಮಾನವನ್ನು ಘೋಷಿಸಿತ್ತು. ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನ್​ವಾಜ್ ಮೂಲತಃ ದೆಹಲಿಯವರು. ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದರು. ಸದ್ಯ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.


ISIS ಪುಣೆ ಮಾಡ್ಯೂಲ್ ಪ್ರಕರಣದಲ್ಲಿ NIA 7 ಜನರನ್ನು ಬಂಧಿಸಿತ್ತು. ಈ ವೇಳೆ ಮೂವರು ಉಗ್ರರು ತಪ್ಪಿಸಿಕೊಂಡು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದರು. ಈ ಮೂವರು ಭಯೋತ್ಪಾದಕರಲ್ಲಿ ಒಬ್ಬ ಶಹನವಾಜ್ ಅಲಿಯಾಸ್ ಶಫಿ ಉಜ್ಜಾಮ. ಮೂವರು ಐಸಿಸ್ ಉಗ್ರರು ರಾಜಧಾನಿಯಲ್ಲಿ ಅಡಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದಾದ ಬಳಿಕ ಪೊಲೀಸರು ಅಲರ್ಟ್ ಮೋಡ್‌ಗೆ ಬಂದು ಮೂವರಿಗಾಗಿ ಹುಡುಕಾಟ ಆರಂಭಿಸಿದ್ದರು.

No comments

Powered by Blogger.