ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ - ಆಕ್ಟೊಬರ್ 7 ರಂದು ದುಬೈ ಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ವಿಚಾರ ಸಂಕೀರಣ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ -
ಆಕ್ಟೊಬರ್ 7 ರಂದು ದುಬೈ ಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ವಿಚಾರ ಸಂಕೀರಣ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಕಳೆದ 23 ವರ್ಷಗಳಿಂದ ಕಾರ್ಯವೆಸಗುತ್ತಿರುವ ಏಕೈಕ ಸರಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ,ಕರ್ನಾಟಕ ಸಂಘ ದುಬೈ ಯ ಅಯೋಜನೆಯಲ್ಲಿ , ಅ.7 ರಂದು ,ಶನಿವಾರ , ಸಂಜೆ 5 ಗಂಟೆಗೆ ,ಪರಿಸರ ಸಂರಕ್ಷಣೆಯ ಬಗ್ಗೆ ವಿಚಾರ ಸಂಕಿರಣ ಜರಗಲಿದೆ.
ದುಬೈ ಯ FORTUNE ATRIUM ಹೋಟೆಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಿತಿಯ ಉಡುಪಿ-ಮಂಗಳೂರು ಜಿಲ್ಲಾ ಕಾರ್ಯದ್ಯಕ್ಷರಾದ ಡಿ.ಆರ್.ರಾಜು, ಸಮಿತಿಯ ಅಂತರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಡೇವಿಡ್ ಪ್ರಾಂಕ್ ಫೆರ್ನಾಂಡಿಸ್, ಸಮಿತಿಯ ಮಾಜಿ ಅಧ್ಯಕ್ಷರಾದ ಯು.ಧರ್ಮಪಾಲ ದೇವಾಡಿಗ, ಕರ್ನಾಟಕದ NRI ಫೋರಂ ಯು.ಎ. ಇ. ಯ ಅಧ್ಯಕ್ಷರೂ, ಫಾರ್ಚುನ್ ಗ್ರೂಪ್ ಅಪ್ ಹೋಟೆಲ್ ,ದುಬೈ ಯ ಕಾರ್ಯದ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕರ್ನಾಟಕ ಸಂಘ ದುಬೈ ಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅತಿಥಿಗಳಾಗಿ ಉಪಸ್ಥಿತರಿರುವರು.
ಹೊರ ರಾಷ್ಟ್ರದಲ್ಲಿ ಪ್ರಥಮ ಬಾರಿ ಪರಿಸರದ ಬಗ್ಗೆ ಕಾಳಜಿಯೊಂದಿಗೆ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶದಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಗಲ್ಫ್ ರಾಷ್ಟ್ರದ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಸಿಸುವಂತ್ತೆ, ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕ್ರಷ್ಣ ಶೆಟ್ಟಿ,ಅಧ್ಯಕ್ಷ ಎಲ್ ವಿ.ಅಮೀನ್ , ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕುರು ಸುರೇಂದ್ರ ಸಾಲ್ಯಾನ್ ಮತ್ತು ಪದಾಧಿಕಾರಿಗಳು, ಕರ್ನಾಟಕ ಸಂಘ ದುಬೈ ಯ ಪದಧಾದಿಕಾರಿಗಳು ವಿನಂತಿಸಿದ್ದಾರೆ.
Post a Comment