ಮುಂಬೈ: ಗೋರೆಗಾಂವ್​ನ ಕಟ್ಟಡದಲ್ಲಿ ಅಗ್ನಿ ಅವಘಡ, 6 ಮಂದಿ ಸಾವು, 40 ಜನರಿಗೆ ಗಾಯ.


ಮುಂಬೈ: ಗೋರೆಗಾಂವ್​ನ ಕಟ್ಟಡದಲ್ಲಿ ಅಗ್ನಿ ಅವಘಡ, 6 ಮಂದಿ ಸಾವು, 40 ಜನರಿಗೆ ಗಾಯ.


ಮುಂಬೈನ ಗೊರೆಗಾವ್ ಪಶ್ಚಿಮ ಎಂ.ಜಿ.ರೋಡ್ ನ ಕಟ್ಟಡವೊಂದರಲ್ಲಿ ಶುಕ್ರವಾರ ಬೆಳ್ಳಂಬೆಳ್ಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ. ಮುಂಜಾನೆ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಹಲವಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಬೆಂಕಿಗೆ ಆಹುತಿಯಾಗಿವೆ.


 ವಿವರಗಳ ಪ್ರಕಾರ, ಏಳು ಅಂತಸ್ತಿನ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ ಕೂಡಲೇ

ಅಗ್ನಿಶಾಮಕ ಕಾರ್ಯಾಚರಣೆ ಆರಂಭಿಸಲಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂತರ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ತಂಪಾಗಿಸುವ ಪ್ರಯತ್ನಗಳು ನಡೆಯುತ್ತಿವೆ.


ಮೃತಪಟ್ಟ ಆರು ಮಂದಿಯಲ್ಲಿ ಓರ್ವ ಪುರುಷ, ಮೂವರು ಮಹಿಳೆಯರು ಮತ್ತು ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದ್ದಾರೆ. ನೆಲಮಹಡಿಯಲ್ಲಿನ ಅಂಗಡಿಗಳು, ಸ್ಕ್ರ್ಯಾಪ್ ಸಾಮಗ್ರಿಗಳು ಮತ್ತು ಸುತ್ತಮುತ್ತಲಿನ ಹಲವಾರು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಇಬ್ಬರ ಸ್ಥಿತಿ ಗಂಭೀರವಾಗಿದ್ದು, 25 ಮಂದಿಯನ್ನು ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ಕಾಲೇಜು (ಎಚ್‌ಬಿಟಿ) ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮುಂಬೈ ಅಗ್ನಿಶಾಮಕ ದಳ ದ  ಎಂಟು ಅಗ್ನಿಶಾಮಕ ಇಂಜಿನ್‌ಗಳು, ಐದು ಜಂಬೋ ಟ್ಯಾಂಕರ್‌ಗಳು, ನೀರಿನ ಟ್ಯಾಂಕ್, ಟರ್ನ್‌ಟೇಬಲ್ ಲ್ಯಾಡರ್  ಸ್ಥಳಕ್ಕೆ ಆಗಮಿಸಿತ್ತು.

No comments

Powered by Blogger.