ಆ 15 ರಂದು ಶ್ರೀ ರಜಕ ಸಂಘ ವಸಯಿ ವಲಯದ ದುರ್ಗಾ ಪೂಜೆ.
ಆ 15 ರಂದು ಶ್ರೀ ರಜಕ ಸಂಘ ವಸಯಿ ವಲಯದ ದುರ್ಗಾ ಪೂಜೆ.
ಶ್ರೀ ರಜಕ ಸಂಘ ವಸಯಿ ವಲಯ ಪ್ರತಿ ವರ್ಷ ನವ ರಾತ್ರಿಯ ಸಲುವಾಗಿ ಹಮ್ಮಿಕೊಂಡು ಬಂದ, ದುರ್ಗಾ ಪೂಜೆ (ಶಾರದಾ ಪೂಜೆ) ಕಾರ್ಯಕ್ರಮವು ದಿನಾಂಕ 15/10/2023 ರಂದು ಭಾನುವಾರ ಬೆಳಿಗ್ಗೆ 1೦.30 ರಿಂದ ಸಂಸ್ಥೆಯ ಕಚೇರಿಯ ಆವರಣದಲ್ಲಿ ಜರಗಲಿದೆ.
ಸರ್ವ ಸದಸ್ಯರು, ಭಕ್ತರು, ತುಳು ಕನ್ನಡಿಗರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಿದ್ದು ಸಹಕರಿಸಿ , ಶ್ರೀದೇವಿಯ ಮಂಗಳಾರತಿ, ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿ ದೇವತಾನುಗ್ರಹ ಪಡೆಯಬೇಕಾಗಿ ಹಾಗೂ ಸದಸ್ಯರೆಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸಹಕರಿಸ ಬೇಕಾಗಿ,
ಶ್ರೀ ರಜಕ ಸಂಘ ವಸಯಿ ವಲಯದ ಅಧ್ಯಕ್ಷರು, ಗೌ. ಪ್ರ, ಕಾರ್ಯದರ್ಶಿ ಕಾರ್ಯಕಾರಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಇತರ ಎಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Post a Comment