ಅಮೂಲ್ಯ ದ 25ನೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ ದ ಪೂರ್ವಭಾವಿ ಸಭೆ.
ಅಮೂಲ್ಯ ದ 25ನೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ ದ ಪೂರ್ವಭಾವಿ ಸಭೆ.
ಅಮೂಲ್ಯದ ಹಬ್ಬ ಸಂಭ್ರಮ ವಿಭಿನ್ನ ಶೈಲಿಯಲ್ಲಿ ಮೂಡಿ ಬರಲು ಸಹಕಾರ ಅಗತ್ಯ:
ಶಂಕರ್ ವೈ ಮೂಲ್ಯ
---------------
ಮುಂಬಯಿ ಅ 8. ಕುಲಾಲ್ ಸಂಘ ಮುಂಬೈ ಮುಖವಾಣಿ *ಅಮೂಲ್ಯ* ದ 25ನೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆಯು ನವಂಬರ್ 5. ಬೆಳಿಗ್ಗೆ ಗಂಟೆ 9,ರಿಂದ ಸಂಜೆ 5.00ರ ವರೆಗೆ ನಂದ ದೀಪ ಹೈಸ್ಕೂಲ್ ಸಭಾಗೃಹ, ಜಯಪ್ರಕಾಶ್ ನಗರ, ಗೊರೆಗಾಂವ್ (ಪೂ), ಮುಂಬಯಿ ಇಲ್ಲಿ ನಡೆಯಲಿದೆ . ಈ ಸಾಹಿತ್ಯ ಸಾಂಸ್ಕೃತಿಕ ,ಸನ್ಮಾನ ವಿಭಿನ್ನ ವೈಭವ ದ ಕಾರ್ಯಕ್ರಮದ ಬಗ್ಗೆ ಸಮಾಲೋಚನೆ ಸಭೆ ಮುಂಬೈ ಕುಲಾಲ ಸಂಘದ ಕೇಂದ್ರ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ರಘು ಎ ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಅಮೂಲ್ಯದ ಸಂಪಾದಕ ಶಂಕರ್ ವೈ ಮೂಲ್ಯ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾ ಕುಲಾಲ ಸಮಾಜದ ಸಾಹಿತಿಗಳನ್ನು ಸಮಾಜಸೇವಕರನ್ನು ಕಾರ್ಯಕ್ರಮದಲ್ಲಿ ಗುರುತಿಸುವ ಮೂಲಕ ಅಮೂಲ್ಯದ 25ನೇ ವರ್ಷ ಕಾರ್ಯಕ್ರಮ ವಿಭಿನ್ನ ಶೈಲಿಯಲ್ಲಿ ಮೂಡಿ ಬರಲಿದೆ ಈ ಕಾರ್ಯಕ್ರಮ ಯಶಸ್ವಿಗೆ ಸಮಾಜದ ಬಾಂಧವರೇ ಹೆಚ್ಚಿನ ಸಹಕಾರ ನೀಡಬೇಕು ಎಂದು ನುಡಿದರು.
ಸಂಘದ. ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಮಾತನಾಡುತ್ತಾ ಸಮಾಜದ ಮತ್ತು ಸಂಘದ ಸಮಗ್ರ ಸುದ್ದಿಯನ್ನು ಅಮೂಲ್ಯ ಪ್ರತಿ ಮೂರು ತಿಂಗಳಿಗೊಮ್ಮೆ ಸಮಾಜ ಬಾಂಧವರಿಗೆ ತಲುಪಿದೆ. ಪ್ರಾರಂಭ ದಿನಗಳಿಂದ ಇಂದಿನವರೆಗೆ ಪತ್ರಿಕೆ ಸಮಾಜವನ್ನು ಜಾಗೃತಿಗೊಳಿಸಿದೆ. ಪತ್ರಿಕೆಯ ಬೆಳ್ಳಿ ಹಬ್ಬ ಸಂಭ್ರಮ ಆಚರಣೆಯು ಮುಂಬೈ ಕುಲಾಲ ಸಂಘದ ಸೇವಾ ಕಾರ್ಯಗಳನ್ನು ಮತ್ತೆ ನೆನಪಿಸುವಂಥಾಗಲಿಎಂದು ನೋಡಿದರು
ಕುಲಾಲ್ ಸಂಘ ದ ಅಧ್ಯಕ್ಷರಾದ ರಘು ಎ ಮೂಲ್ಯ
ಮಾತನಾಡುತ್ತಾ 25 ವರ್ಷಗಳಿಂದ ಅಮೂಲ್ಯ ಸಮಾಜಕ್ಕೆ ಮಹತ್ವರಾದ ಕೊಡುಗೆಯನ್ನು ನೀಡಿದೆ. ಸಮಾಜದ ಅಪಾರ ಬಂಧುಗಳು ಪತ್ರಿಕೆ ಮೂಲಕ ಸಮಾಜದಲ್ಲಿ ಗುರುತಿಸುವಂತಾಗಿದ್ದಾರೆ 25 ನೆಯ ವರ್ಷದ ಬೆಳ್ಳಿಯೊಬ್ಬ ಅರ್ಥಪೂರ್ಣವಾಗಿ ಆಚರಿಸಲು ಸಂಘದ ಸಮಾಜದ ಬಂಧುಗಳು ಸಹಕಾರ ನೀಡಬೇಕು ಎಂದು ನುಡಿದರು
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯನ್ ಸ್ವಾಗತಿಸಿದರು. ಗೌರವ ಕೋಶಧಿಕಾರಿ ಜಯ ಅಂಚನ್ ಧನ್ಯವಾದ ನೀಡಿದರು.
ಸಂಘದ ಉಪಾಧ್ಯಕ್ಷ ಡಿಐ ಮೂಲ್ಯ . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್. ಜ್ಯೋತಿ ಆಪರೇಟಿವ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಸಾಲಿಯಾನ್ ರವರು ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ವಿವಿಧ ಸ್ಥಳೀಯ ಸಮಿತಿಗಳ ಕಾರ್ಯ ಧ್ಯಕ್ಷರು. ಪದಾಧಿಕಾ
Post a Comment