ಕರ್ನಾಟಕ ರಾಜ್ಯದ ಸನ್ಮಾನ್ಯ ವಿಧಾನ ಪರಿಷತ್ ಸದಸ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಭೇಟಿ.


ಕರ್ನಾಟಕ ರಾಜ್ಯದ  ಸನ್ಮಾನ್ಯ ವಿಧಾನ ಪರಿಷತ್ ಸದಸ್ಯ  ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಭೇಟಿ ನೀಡಿ  
 ದೇವಿಯ ದರ್ಶನ ಪಡೆದರು. 


 ನಾಡೋಜ ಸನ್ಮಾನ್ಯ ಡಾ. ಶ್ರೀ ಜಿ. ಶಂಕರ್ ಅವರು ಸನ್ಮಾನ್ಯ ವಿಧಾನ ಪರಿಷತ್ ಸದಸ್ಯ  ಶ್ರೀ ತಿಪ್ಪ್ಪಣ್ಣಪ್ಪ ಕಮಕನೂರು ಅವರನ್ನು ಶ್ರೀಕ್ಷೇತ್ರದಲ್ಲಿ ಶಾಲು ಹೊದಿಸಿ, ಫಲ ಪುಷ್ಪಗಳೊಂದಿಗೆ ಸನ್ಮಾನಿಸಿದರು.


 ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಡಾ.ದೇವಿಪ್ರಸಾದ್ ಹೆಜಮಾಡಿಯವರು ವಿಧಾನ ಪರಿಷತ್ ಸದಸ್ಯರಾದ   ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಪರಿಚಯಿಸಿ, ಸ್ವಾಗತಿಸಿದರು.


 ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರು ಶ್ರೀ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಅನುದಾನ ದೊರಕಿಸಲು ವಿಶೇಷ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು. 

ಮಹಾಜನ ಮೊಗವೀರ ಸಂಘದ ಅಧ್ಯಕ್ಷ  ಮಾನ್ಯ ಶ್ರೀ ಜಯ ಕೋಟ್ಯಾನ್ ಅವರು ಶ್ರೀ ಕ್ಷೇತ್ರದ ಭವ್ಯ  ಇತಿಹಾಸ, ಪರಂಪರೆ,  ಅಭಿವೃದ್ಧಿ ಕಾರ್ಯಕ್ರಮಗಳ  ಬಗ್ಗೆ ಮಾನ್ಯರಿಗೆ ಸವಿಸ್ತಾರವಾಗಿ ವಿವರಿಸಿದರು.  ಅಮ್ರತಾನಂದಮಯಿ ಮಠದ  ಶ್ರೀ  ಮಾತಾ ಅಮ್ರತಾನಂದಮಯಿ ಅಮ್ಮ ನವರನ್ನು  ಉಚ್ಚಿಲದ ಶ್ರೀ ಮಹಾಲಕ್ಷ್ಮಿ ಕ್ಷೇತ್ರಕ್ಕೆ  ಆಮಂತ್ರಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. 

ಮೊಗವೀರ  ಮಹಾಜನ ಸಂಘದ ಪ್ರಧಾನ ಖಜಾಂಚಿ  ಶ್ರೀ ಭರತ್ ಕುಮಾರ್ ಎರ್ಮಾಳ್,  ಅಮ್ರತಾನಂದಮಯಿ  ಮಠದ  ಉಪಾಧ್ಯಕ್ಷರಾದ ಶ್ರೀ ಸುರೇಶ್ ಅಮೀನ್ , ಶ್ರೀ ಕ್ಷೇತ್ರದ ಪ್ರಧಾನ ವ್ಯವಸ್ಥಾಪಕ  ಶ್ರೀ ಸತೀಶ್ ಅಮೀನ್ ಪಡುಕರೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.

No comments

Powered by Blogger.