ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ವಿಶೇಷ ಜ್ಯೂರಿ ಪ್ರಶಸ್ತಿ
*Education Today.Co. ಇವರ ವತಿಯಿಂದ ಪ್ರಶಸ್ತಿ ಪ್ರಧಾನ*
*ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ವಿಶೇಷ ಜ್ಯೂರಿ ಪ್ರಶಸ್ತಿ*
ಮುಂಬಯಿ : ಎಜುಕೇಶನ್ ಟುಡೆ. ಕೊ ಇವರ ವತಿಯಿಂದ ಪ್ರಶಸ್ತಿ ಸಮಾರಂಭವು ದಿನಾಂಕ 04 ಅಕ್ಟೋಬರ್ 2023 ರಂದು ಅಂಧೇರಿ ಪೂರ್ವದ ಮರೋಳದಲ್ಲಿರುವ 5 ಸ್ಟಾರ್ ಹೊಂದಿರುವ ಲಲಿತ್ ಹೋಟೇಲ್ ಇದರ ತಳ ಮಹಡಿಯಲ್ಲಿ ನಡೆಯಿತು.
ಎಜ್ಯುಕೇಶನ್ ಟುಡೆ. ಕೊ ಇವರು ಶೈಕ್ಷಣಿಕ ವರ್ಷ 2022-23 ರಲ್ಲಿ ಉತ್ತಮವಾಗಿ ನಡೆಯುವ ಶಾಲೆಗಳನ್ನು ಸಮೀಕ್ಷೆ ಮಾಡಿದ ವಿವಿಧ ಶಾಲೆಗಳಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮುಂಬಯಿ ಪ್ರತಿಷ್ಠಿತ ಬಿಲ್ಲವರ ಅಸೋಷಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಪ್ರಗತಿಯನ್ನು ಪರಿಗಣಿಸಿ ವಿಶೇಷವಾಗಿ Ranked -1 ಜ್ಯೂರಿ ಪ್ರಶಸ್ತಿಯನ್ನು ಶಾಲಾ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.ಈ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಶಿಕ್ಷಣ ಸಮಿತಿಯ ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ್. ಶಿಕ್ಷಕಿಯರಾದ ಮೋಹಿನಿ ಪೂಜಾರಿ
ಜಗದೀಶ ಪೂಜಾರಿ ಅವರು ವೇದಿಕೆಯಲ್ಲಿದ್ದರು.
ಶಾಲೆಗೆ ವಿಶೇಷ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಬಿಲ್ಲವರ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಯ ವಿ. ಪೂಜಾರಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ್ ಅವರು ಶಾಲೆಯ ಪ್ರಗತಿಗಾಗಿ ಶ್ರಮಿಸಿದ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ್ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದಿಸಿ ಗೌರವಿಸಿದ್ದಾರೆ. ಎಂದು ಗೌರವ ಪ್ರದಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್ ಅವರು ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===============================
Post a Comment