Home
>
ಮುಂಬಯಿ
>
ಸುದ್ದಿ
>
ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ
ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ
ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ
ಮುಂಬಯಿ ಅ 4. ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯಶ್ರೀಸುಗುಣೇಂದ್ರತೀರ್ಥಶ್ ರೀಪಾದಂಗಳವರು ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಪರಮಪೂಜ್ಯ *ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರೊ ಡನೆ ಅಕ್ಟೋಬರ್ 7 ರಿಂದ 13 ರ ವರೆಗೆ ಮುಂಬೈ ಮಹಾನಗರದಲ್ಲಿ ಪರ್ಯಾಯ ಸಂಚಾರವನ್ನು ಮಾಡಿ ಭಕ್ತರನ್ನು ಅನುಗ್ರಹಿಸುವರಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಮಪೂಜ್ಯ ಶ್ರೀಪಾದರ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸೆ 30. ರಂದು ಅಂಧೇರಿಯ ಶ್ರೀ ಅದಮಾರು ಮಠದಲ್ಲಿ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನುಬಿಡುಗಡೆ ಮಾಡಲಾಯಿತು.
ಈ ಸಭೆಯಲ್ಲಿ ಪ್ರಸಿದ್ಧ ಉದ್ಯಮಿಗಳು ಮತ್ತು ಪರಮಪೂಜ್ಯ ಶ್ರೀಪಾದರ ಮುಖ್ಯಾಭಿಮಾನಿಗಳಾದ ಬಿ.ಆರ್.ಶೆಟ್ಟಿ, ಶ್ರೀ ಅದಮಾರು ಮಠದ ಪ್ರಬಂಧ ಕ ರಾಜೇಶ ಭಟ್, , ಐಓಬಿ ಯ ಪೂರ್ವಾಧ್ಯಕ್ಷರಾದ ಡಾ. ಎಂ.ನರೇಂದ್ರ, ಹಿರಿಯ ವಕೀಲರಾದ ಎನ್ ಆರ್ ರಾವ್, ಲೆಕ್ಕಪರಿಶೋಧಕರಾದ ಸಿಎ ಸುಧೀರ್ ಶೆಟ್ಟಿ,
ಉದ್ಯಮಿಗಳಾದ ಜಯಕೃಷ್ಣ ಶೆಟ್ಟಿ , ನಾರಾಯಣ ಆಚಾರ್ಯ, ಪುಷ್ಪ ಆಚಾರ್ಯ ಹಾಗೂ
ಶ್ರೀಪುತ್ತಿಗೆ ಮಠಗಳ ಪ್ರತಿನಿಧಿಗಳು ಭಾಗವಹಿಸಿದ್ದರು
. ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾದ ರಮಣ ಆಚಾರ್ಯರು ಪ್ರಾರ್ಥಿಸಿದರು. ಚೆನ್ನೈನ ಶ್ರೀಪುತ್ತಿಗೆ ಮಠದ ಅಧಿಕಾರಿಗಳಾದ ಮತ್ತು ಮುಂಬೈ ಕಾರ್ಯಕ್ರಮದ ಸಂಚಾಲಕರಾದ ನಾರಾಯಣ ಆಚಾರ್ಯರು ಸಭೆಯ ಉದ್ದೇಶವನ್ನು ವಿವರಿಸಿದರು.
Post a Comment