ಮೈಸೂರು ದಸರಾ ಪೋಸ್ಟರ್, ವೆಬ್ಸೈಟ್ ಬಿಡುಗಡೆ ಮಾಡಿದ ಸಚಿವರು
ಮೈಸೂರು ದಸರಾ ಪೋಸ್ಟರ್, ವೆಬ್ಸೈಟ್ ಬಿಡುಗಡೆ ಮಾಡಿದ ಸಚಿವರು
ಮೈಸೂರು, ಅ.03: ವಿಶ್ವ ಪ್ರಸಿದ್ದ ಮೈಸೂರು ದಸರಾಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಅದ್ದೂರಿ ದಸರಾಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗಜಪಡೆಗಳ ತಲಾಮು ಕೂಡ ಮುಗಿದಿದೆ. ಈ ಹಿನ್ನಲೆ ಇಂದು(ಅ.03) ಮೈಸೂರು ಅರಮನೆ ಮಂಡಳಿಯಲ್ಲಿ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಹೆಚ್.ಸಿ ಮಹದೇವಪ್ಪ ಮೈಸೂರು ದಸರಾ ಪೋಸ್ಟರ್ ಹಾಗೂ ವೆಬ್ ಸೈಟ್ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಕಳೆದ ದಸರಾಗಿಂತ ಈ ಬಾರಿ ಕಡಿಮೆ ವೆಚ್ಚದ ದಸರಾ ಆಚರಣೆ ಮಾಡುತ್ತೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇದಕ್ಕೋಸ್ಕರ 15 ಕೋಟಿ ಹಣ ಬಿಡುಗಡೆಯಾಗಿದೆ. ಈ ಬಾರಿ ಯುವದಸರಾ, ಯುವ ಸಂಭ್ರಮ, ಏರ್ ಶೋ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಇರುತ್ತದೆ. ಜೊತೆಗೆ ಈ ಬಾರಿ ಹೆಚ್ಚು ಪ್ರಾಯೋಜಿಕತ್ವದ ಮೂಲಕ ದಸರಾ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು.
Post a Comment