ಇಂದು ದೇಶದಾದ್ಯಂತ ಸ್ವಚ್ಛತಾ ಅಭಿಯಾನ
ಇಂದು ದೇಶದಾದ್ಯಂತ ಸ್ವಚ್ಛತಾ ಅಭಿಯಾನ
ಗಾಂಧಿ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಸ್ವಚ್ಛತಾ ಅಭಿಯಾನ ದೇಶದಾದ್ಯಂತ ಇಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.
‘ಅಕ್ಟೋಬರ್ 1ರಂದು ಬೆಳಿಗ್ಗೆ 10 ಗಂಟೆಗೆ, ನಾವು ಒಂದು ಪ್ರಮುಖ ಸ್ವಚ್ಛತೆಯ ಅಭಿಯಾನಕ್ಕಾಗಿ ಒಗ್ಗೂಡುತ್ತೇವೆ. ಸ್ವಚ್ಛ ಭಾರತ್ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಚ್ಛ ಭವಿಷ್ಯವನ್ನು ರೂಪಿಸಲು ಈ ಪ್ರಯತ್ನಕ್ಕೆ ಕೈಜೋಡಿಸಿ’ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಭಾಗವಾಗಿ ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಎಂಬ ಅಭಿಯಾನ ಇಂದು ನಡೆಯಲಿದೆ.
ಇತ್ತೀಚೆಗೆ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ಸ್ವಚ್ಛತೆಗಾಗಿ ದೊಡ್ಡ ಕಾರ್ಯಕ್ರಮವೊಂದು ಭಾನುವಾರ (ಅ.1ರಂದು) ನಡೆಯಲಿದೆ. ನೀವು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ನೀವು ನಿಮ್ಮ ಬೀದಿಗಳಲ್ಲಿ, ನೆರೆಹೊರೆಯಲ್ಲಿ, ಉದ್ಯಾನದಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು’ ಎಂದು ಹೇಳಿದ್ದರು.
Post a Comment