ದಕ್ಷಿಣ ಕನ್ನಡ ಮೊಗವೀರ ಮಹಾಜನ ಸೇವಾ ಸಂಘ, ಮುಂಬಯಿ ಶಾಖೆಯ 98 ನೇ ವಾರ್ಷಿಕ ಮಹಾಸಭೆ - ನೂತನ ಅಧ್ಯಕ್ಷರಾಗಿ ಪೊಲಿಪು ದಿವಾಕರ ಸಾಲ್ಯಾನ್ ಆಯ್ಕೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸೇವಾ ಸಂಘ, ಮುಂಬಯಿ ಶಾಖೆಯ 98 ನೇ ವಾರ್ಷಿಕ ಮಹಾಸಭೆ
ನೂತನ ಅಧ್ಯಕ್ಷರಾಗಿ ಪೊಲಿಪು ದಿವಾಕರ ಸಾಲ್ಯಾನ್ ಆಯ್ಕೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಇದರ ಮುಂಬಾಯಿ ಶಾಖೆಯ 98ನೇ ವಾರ್ಷಿಕ ಮಹಾಸಭೆ ಯು ಅಕ್ಟೋಬರ್ 2ರಂದು ಸೋಮವಾರ ಬೆಳಿಗ್ಗೆ 11ಗಂಟೆಗೆ ಅಂಧೇರಿಯ ಮೊಗವೀರ ಭವನದಲ್ಲಿ ಉಪಾಧ್ಯಕ್ಷರಾದ ಪೊಲಿಪು ದಿವಾಕರ್ ಪಿ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಧಾನ ಕಾರ್ಯದರ್ಶಿಬೈಕಂಪಾಡಿ ಶ್ಯಾಮ್ ಕೆ ಪುತ್ರನ್ ಅವರು ಸ್ವಾಗತಿಸಿ ಗತ ಮಹಾಸಭೆಯ ಟಿಪ್ಪಣಿ ಓದಿದರು. ಕೋಶಾಧಿಕಾರಿ ಬಪ್ಪನಾಡು ನಾರಾಯಣ ತಿಂಗಳಾಯ ಅವರು 2023 ಮಾರ್ಚ್ ಗೆ ಅಂತ್ಯವಾದ ಲೆಕ್ಕ ಪಟ್ಟಿಯನ್ನು ಮಂಡಿಸಿದರು. ಈ ಮಹಾ ಸಭೆಯಲ್ಲಿ ಹೊಸ ಆಡಳಿತ ಮಂಡಳಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಪೊಲಿಪು ದಿವಾಕರ್ ಪಿ. ಸಾಲ್ಯಾನ್, ಉಪಾಧ್ಯಕ್ಷರಾಗಿ ಬಪ್ಪನಾಡು ಮುಖೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಒಡೆಯರಬೆಟ್ಟು ಅಶೋಕ್ ಸುವರ್ಣ, ಜತೆ ಕಾರ್ಯದರ್ಶಿಯಾಗಿ ಕದಿಕೆ ವಿಶ್ವನಾಥ್ ಪುತ್ರನ್, ಕೋಶಾಧಿಕಾರಿ ಆಗಿ ಬಪ್ಪನಾಡು ನಾರಾಯಣ ಟಿ.ತಿಂಗಳಾಯ. ಜತೆ ಕೋಶಾಧಿಕಾರಿಯಾಗಿ ಕೋಟೆಕೊಪ್ಪಳ ಲಲಿತ್ ಕುಮಾರ್ ಸುವರ್ಣ, ಸದಸ್ಯರುಗಳಾಗಿ
ಪೊಲಿಪು ನೀಲಾಧರ್ ಎಸ್. ಕುಂದರ್,ಕದಿಕೆ ಉಮೇಶ್ ಸಾಲ್ಯಾನ್,ಕೈಪುಂಜಾಲ್ ಧನ್ ರಾಜ್ ಎಸ್. ಕುಂದರ್,ಕೋಟೆಕೊಪ್ಪಳ ಸಂಜೀವ ಬಂಗೇರ, ದೊಡ್ಡ ಕೊಪ್ಪಲ ಧೀರಜ್ ಪುತ್ರನ್,ಒಡೆಯರಬೆಟ್ಟು ಗೋವಿಂದ ಎನ್. ಪುತ್ರನ್,
ಕಣ್ಣಂಗಾರ್ ದಿನೇಶ್ ಸುವರ್ಣ,ಚರಂತಿಪೇಟೆ ಕೃಷ್ಣ ಎಂ. ಕೋಟ್ಯಾನ್, ಉಚ್ಚಿಲ ಅಶೋಕ್ ಕೋಟ್ಯಾನ್,ಕುಳೂರ್ ಶ್ರೀನಿವಾಸ್ ಶ್ರೀಯಾನ್, ಕಾಪು ಮೋಹನ್ ಓ. ಮೆಂಡನ್, ಮಟ್ಟು ಪುರಂದರ ಸಾಲ್ಯಾನ್,ಹೊಸಬೆಟ್ಟು ಮಧುಸೂದನ್ ಇಡ್ಯಾ,
ಬೈಕಂಪಾಡಿ ಶ್ಯಾಮ್ ಕೆ. ಪುತ್ರನ್ ( ಆಮಂತ್ರಿತರು )
ಲೆಕ್ಕ ಪರಿಶೋಧಕರು ಪಲಿಮಾರು ಹರೀಶ್ ಕಾಂಚನ್
Post a Comment