ಏಷ್ಯಾನ್ ಗೇಮ್ಸ್ನಲ್ಲಿ ಇತಿಹಾಸ ಬರೆದ ಜೈಸ್ವಾಲ್: ನೇಪಾಳಕ್ಕೆ 203 ರನ್ಸ್ ಟಾರ್ಗೆಟ್
ಏಷ್ಯಾನ್ ಗೇಮ್ಸ್ನಲ್ಲಿ ಇತಿಹಾಸ ಬರೆದ ಜೈಸ್ವಾಲ್: ನೇಪಾಳಕ್ಕೆ 203 ರನ್ಸ್ ಟಾರ್ಗೆಟ್
ಚೀನಾದ ಹ್ಯಾಂಗ್‌ಝೌನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಟಿ20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಶತಕ ಹಾಗೂ ರಿಂಕು ಸಿಂಗ್- ಶಿವಂ ದುಬೆ ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್ಗಳಲ್ಲಿ 202 ರನ್ ಸಿಡಿಸಿದೆ.
ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಬೊಂಬಾಟ್ ಆರಂಭ ಒದಗಿಸಿದರು. ಜೈಸ್ವಾಲ್ ಸಿಕ್ಸರ್ಗಳ ಮಳೆ ಸುರಿಸಿದರೆ ಗಾಯಕ್ವಾಡ್ ಇವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಕೇವಲ 9.5 ಓವರ್ಗಳಲ್ಲಿ ತಂಡದ ಮೊತ್ತವನ್ನು 100 ಗಡಿ ದಾಟಿಸಿತು. ರುತುರಾಜ್ 23 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ (2) ಹಾಗೂ ಜಿತೇಶ್ ಶರ್ಮಾ (5) ಮೋಡಿ ಮಾಡುವಲ್ಲಿ ವಿಫಲರಾದರು.
ಆದರೆ, ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಜೈಸ್ವಾಲ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಇದು ಏಷ್ಯನ್ ಗೇಮ್ಸ್ನಲ್ಲಿ ಭಾರತದ ಚೊಚ್ಚಕ ಶತಕವಾಗಿದೆ. ಕೇವಲ 49 ಎಸೆತಗಳಲ್ಲಿ 8 ಫೋರ್, 7 ಅಮೋಘ ಸಿಕ್ಸರ್ನೊಂದಿಗೆ 100 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ಹಾಗೂ ರಿಂಕು ಮನಬಂದಂತೆ ಬ್ಯಾಟ್ ಬೀಸಿದರು. ರಿಂಕು 15 ಎಸೆಗಳಲ್ಲಿ 37 ಹಾಗೂ ದುಬೆ 25 ರನ್ ಸಿಡಿಸಿ ಅಜೇಯತಾಗಿ ಉಳಿದರು. ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು. ನೇಪಾಳ ಪರ ದಿಪೇಂದರ್ ಸಿಂಗ್ 2 ವಿಕೆಟ್ ಪಡೆದರು.
Post a Comment