2023 ವಿಶ್ವಕಪ್ ಜಾಗತಿಕ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್ ನೇಮಕ
2023 ವಿಶ್ವಕಪ್ ಜಾಗತಿಕ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್ ನೇಮಕ
ಅಕ್ಟೋಬರ್ 5 ರಿಂದ ಅಹಮದಾಬಾದ್‌ನಲ್ಲಿ ಪ್ರಾರಂಭವಾಗುವ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಜಾಗತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ನೇಮಿಸಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕ್ರಿಕೆಟ್ ದೇವರು 1987ರಲ್ಲಿ ಬಾಲ್ ಬಾಯ್ ಆಗಿದ್ದಾಗಿನಿಂದ 6 ವಿಶ್ವಕಪ್ ಪಂದ್ಯಾವಳಿಗಳಲ್ಲಿ ದೇಶವನ್ನು ಪ್ರತಿನಿಧಿಸುವವರೆಗೆ ವಿಶ್ವಕಪ್ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಐಸಿಸಿ ವಿಶ್ವಕಪ್ 2011 ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ಅನುಭವವಾಗಿದೆ ಎಂದು ಸಚಿನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಸಚಿನ್, ‘ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಹಲವು ತಂಡಗಳು ಸಜ್ಜಾಗುತ್ತಿವೆ. ಈ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ನಾನು ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಎದುರು ನೋಡುತ್ತಿದ್ದೇನೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಆಡುವುದರಿಂದ ಯುವ ಆಟಗಾರರಿಗೆ ಸ್ಫೂರ್ತಿ ಸಿಗುತ್ತದೆ. ಈ ವಿಶ್ವಕಪ್ ಯುವಕರಿಗೆ ಆಟವನ್ನು ಸಮೀಪಿಸಲು ಮತ್ತು ದೇಶವನ್ನು ಪ್ರತಿನಿಧಿಸಲು ಪ್ರೇರೇಪಿಸುತ್ತದೆ’ ಎಂದು ಹೇಳಿದರು.
Post a Comment