ಪಿಎಂ ಉಜ್ವಲ ಯೋಜನೆ ಅಡಿ ಎಲ್​ಪಿಜಿಗೆ ಸಬ್ಸಿಡಿ ಮೊತ್ತ 200 ರೂನಿಂದ 300 ರೂಗೆ ಹೆಚ್ಚಳಎಲ್​ಪಿಜಿ ಸಿಲಿಂಡರ್


ಪಿಎಂ ಉಜ್ವಲ ಯೋಜನೆ ಅಡಿ ಎಲ್​ಪಿಜಿಗೆ ಸಬ್ಸಿಡಿ ಮೊತ್ತ 200 ರೂನಿಂದ 300 ರೂಗೆ ಹೆಚ್ಚಳ
ಎಲ್​ಪಿಜಿ ಸಿಲಿಂಡರ್

ನವದೆಹಲಿ, ಅಕ್ಟೋಬರ್ 4: ಬೆಲೆ ಏರಿಕೆಯ ಬಿಸಿಯಲ್ಲಿರುವ ಬಡ ಮತ್ತು ಮಧ್ಯಮವರ್ಗದವರಿಗೆ ತುಸು ನಿರಾಳ ತರುವ ಸುದ್ದಿ ಇದು. ಪಿಎಂ ಉಜ್ವಲ ಯೋಜನೆಯ  ಫಲಾನುಭವಿಗಳಿಗೆ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಇಂದು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್​ಪಿಜಿ ಸಬ್ಸಿಡಿ ಏರಿಸಿರುವ ವಿಚಾರವನ್ನು ತಿಳಿಸಿದ್ದಾರೆ.

No comments

Powered by Blogger.