ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟ್ರ - 15ನೇ ವಾರ್ಷಿಕ ಮಹಾಸಭೆ
ಸಂಸ್ಥೆಯ ಸ್ವಂತ ಕಛೇರಿಗಾಗಿ ಸ್ಪಂದಿಸಿ - ಡಾ.ಸುರೇಂದ್ರ ಕುಮಾರ್ ಹೆಗ್ಡೆ
(ಚಿತ್ರ ,ವರದಿ : ಯೋಗೇಶ್ ಪುತ್ರನ್)
ಮಹಾರಾಷ್ಟ್ರದಲ್ಲಿ ನೆಲೆಸಿರುವ ಎಲ್ಲಾ ಪ್ರಕರದ ಕಲಾವಿದರ ಸಂಘಟನೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ,ಇದರ 15ನೇ ವಾರ್ಷಿಕ ಮಹಾಸಭೆ ಸೆ.28 ರಂದು ಸಂಜೆ ಸಾಂತಕ್ರೂಜ್ ಪೂರ್ವ ಬಿಲ್ಲವ ಭವನದ ಸಭಾಗ್ರಹದಲ್ಲಿ , ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುರೇಂದ್ರ ಕುಮಾರ್ ಹೆಗ್ಡೆ ಎಲ್ಲರನ್ನೂ ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ದಾಮೋದರ ಶೆಟ್ಟಿ ಇರುವೈಲ್ ಗತ ವರ್ಷದ ವರದಿ ವಾಚಿಸಿದರು.
ಗೌರವ ಕೋಶಾಧಿಕಾರಿ ಪಿ.ಬಿ.ಚಂದ್ರಹಾಸ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.
ಜಗಧೀಶ ಡಿ.ರೈ ಅವರನ್ನು ಲೆಕ್ಕ ಪರಿಶೋಧಕರನ್ನಾಗಿ, ರಾವ್ ಯಾಂಡ್ ಅಶೋಕ್ ಇವರನ್ನು ಬಾಹ್ಯ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು.
ಸಭಿಕರ ಪರವಾಗಿ ಡಾ.ಸತೀಶ್ ಎನ್.ಬಂಗೇರ, ಕೆ.ಕೆ ಶೆಟ್ಟಿ, ಜಿ.ಎನ್.ನಾಯಕ್, ಡಾ.ಬಿ.ಆರ್.ಮಂಜುನಾಥ್, ಕೆ.ಮಂಜುನಾಥಯ್ಯ, ಮದುಸುದಾನ್ ಟಿ.ಆರ್., ವೀಣಾ ಸುವರ್ಣ, ದೇವಲ್ಜುಂದ ಭಾಸ್ಕರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರೇಮನಾಥ್ ಕುಕ್ಯಾನ್, ಪದ್ಮನಾಭ ಸಸಿಹಿತ್ಲು, ಅನಿಲ್ ಕುಮಾರ್ ಹೆಗ್ಡೆ ಮಾತನಾಡಿ ಸಲಹೆ-ಸೂಚನೆ ನೀಡಿದರು.
ಸದಸ್ಯರನ್ನುದೇಶಿಸಿ ಮಾತನಾಡಿದ ಡಾ.ಸುರೇಂದ್ರ ಕುಮಾರ್ ಹೆಗ್ಡೆ "ಕಲಾವಿದರಿಂದ ಕಲಾವಿದರಿಗಾಗಿ ಸ್ಥಾಪನೆಯಾದ ಪರಿಷತ್ತು ,ಕಳೆದ 15 ವರ್ಷಗಳಿಂದ ಕಲೆ, ಕಲಾವಿದರಿಗೆ ಪ್ರೋತಾಹ ನೀಡುತ್ತಾ ಬಂದಿದೆ. ಪರಿಷತ್ತಿನ ಕಾರ್ಯ ಚಟುವಟಿಕೆಗಳಲ್ಲಿ ಕಲಾವಿದರು ಇನ್ನೂ ಹೆಚ್ಚಿನ ಆಸಕ್ತಿ ವಹಿಸಬೇಕು.ಎಲ್ಲಾ ಕಲಾವಿದರ ಸಂಪೂರ್ಣ ಸಹಕಾರ ಇದ್ದರೆ, ಮತ್ತಷ್ಟು ಕಾರ್ಯಗಳನ್ನು ಮಾಡಬಹುದು.ನಮ್ಮ ಸಂಸ್ಥೆಗೆ ಸ್ವಂತ ಕಛೇರಿಯ ಅಗತ್ಯವಿದ್ದು ,ಈ ನಿಟ್ಟಿನಲ್ಲಿ ಈಗಾಗಲೇ ಒಂದು ಸ್ಥಳವನ್ನು ಆಯ್ಕೆ ಮಾಡಿದ್ದು, ಅದಕ್ಕೆ ಮುಂಗಡವನ್ನು ನೀಡಿದ್ದೇವೆ.ಕಲಾಭಿಮಾನಿಗಳು, ಕಲಾ ಪ್ರೋತ್ಸಾಹಕರು ,ದಾನಿಗಳು ,ಈ ಯೋಜನೆಗೆ ಸ್ಪಂದಿಸ ಬೇಕು" ಎಂದು ನುಡಿದರು .
ಪರಿಷತ್ತಿನ ಉಪಾಧ್ಯಕ್ಷರುಗಳಾದ ಕಮಲಾಕ್ಷ ಸರಪ್, ಶ್ರೀನಿವಾಸ ಸಾಫಲ್ಯ, ಗೌರವ ಕಾರ್ಯದರ್ಶಿ ದಾಮೋದರ ಶೆಟ್ಟಿ ಇರುವೈಲ್, ಗೌರವ ಕೋಶಾಧಿಕಾರಿ ಪಿ.ಬಿ.ಚಂದ್ರಹಾಸ,ಜೊತೆ ಕೋಶಾಧಿಕಾರಿ ಚಂದ್ರವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ, ಮಹಿಳಾ ಅಧ್ಯಕ್ಷೇ ತಾರಾ ಬಂಗೇರ, ಸಂಚಾಲಕಿ ಕುಸುಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಚಂದ್ರವತಿ ದೇವಾಡಿಗ ವಂದಿಸಿದರು.

Post a Comment