ವಿರಾಟ್ ಕೊಹ್ಲಿ ನನ್ನ ಅಳಿಯ : ಶಾರುಖ್‌ ಖಾನ್‌

ವಿರಾಟ್ ಕೊಹ್ಲಿ ನನ್ನ ಅಳಿಯ : ಶಾರುಖ್‌ ಖಾನ್‌

ಬಾಲಿವುಡ್‌ ನಟ ಶಾರುಖ್‌ ಖಾನ್‌, ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ಅಳಿಯ ಎಂದು ಕರೆಯುವ ಮೂಲಕ ಫ್ಯಾನ್‌ ವಾರ್‌ ವದಂತಿಗಳಿಗೆ ಬ್ರೇಕ್‌ ಹಾಕಿದ್ದಾರೆ.


‘ಜವಾನ್‌’ ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿರುವ ಶಾರುಖ್‌ ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ‘ಆಸ್ಕ್‌ ಎಸ್‌ಆರ್‌ಎಕೆ’ ಸೆಶನ್‌ ನಡೆಸಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಇಬ್ಬರ ಅಭಿಮಾನಿಗಳ ನಡುವೆ ನಡೆಯುತ್ತಿರುವ ಫ್ಯಾನ್‌ ವಾರ್‌ ಬಗ್ಗೆ ತಿಳಿಸಿದ್ದು, ಜವಾನ್‌ ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಒಂದೆರಡು ಮಾತು ಆಡುವಂತೆ ಕೇಳಿಕೊಂಡಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್‌, ‘ನನಗೆ ವಿರಾಟ್‌ ಕೊಹ್ಲಿ ಎಂದರೆ ತುಂಬಾ ಇಷ್ಟ. ಅವರು ನಮ್ಮವರೆ, ನನಗೆ ಅಳಿಯ ಇದ್ದಂಗೆ. ಅವರ ಏಳಿಗೆಗಾಗಿ ಸದಾ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಹಿಂದೆ ಆರ್‌ಸಿಬಿ–ಕೆಕೆಆರ್‌ ನಡುವಿನ ಐಪಿಎಲ್‌ ಪಂದ್ಯವೊಂದರ ವೇಳೆ 'ಪಠಾಣ್‌’ ಚಿತ್ರದ ಜನಪ್ರಿಯ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಶಾರುಖ್ ಮತ್ತು ಕೊಹ್ಲಿ ಗಮನ ಸೆಳೆದಿದ್ದರು.

ಬಾಲಿವುಡ್ ಬಾದಶಾಹ ಶಾರುಖ್ ಹಾಗೂ ಕ್ರಿಕೆಟ್ ದಿಗ್ಗಜ ಕಿಂಗ್ ಕೊಹ್ಲಿ ಅವರ ನಡುವಿನ ಭಾಂದ್ಯವ್ಯ ಮುಂಬರುವ ದಿನಗಳಲ್ಲಿ ಯಾವ ರೀತಿ ಮುಂದುವರಿಯಲಿದೆ ಎಂದು ಕಾದು ನೋಡಬೇಕಿದೆ.







No comments

Powered by Blogger.