ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಮುಂಬಯಿ. ಸಲಹಾ ಸಮಿತಿಯ ಸಭೆ.


ಒಗ್ಗಟ್ಟಿನಲ್ಲಿ ಹಳೆ ವಿದ್ಯಾರ್ಥಿ ಸಂಘವನ್ನು ಬೆಳೆಸೋಣ:
ವಾಸುದೇವ ಸಾಲ್ಯಾನ್‌.

    ಮುಂಬಯಿ:.  ವಿಜಯ ಕಾಲೇಜು ಮುಲ್ಕಿ, ಹಳೆಯ ವಿದ್ಯಾರ್ಥಿಗಳ ಸಂಘ ಮುಂಬಯಿ
 ನ ಸಭೆ ಶುಕ್ರವಾರ ತಾ. 15,19,2023 ರಂದು ಬೋರಿವಲಿಯ ಮೆಜೆಸ್ಟಿಕ್‌' ಎನೆಕ್ಸ್‌ ನ ಸಭಾಗೃಹದಲ್ಲಿ ನಡೆಯಿತು.





ಹಳೆಯ ವಿದ್ಯಾರ್ಥಿಗಳ ಸಂಘ ಮುಂಬಯಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌ ಅವರು ಮಾತನಾಡಿ ಸಂಘದ ವಾರ್ಷಿಕ ಸ್ನೇಹಮಿಲನ ಕಳೆದ 3 ವರುಷಗಳಿಂದ ಕೋವಿಡ್ ಮತ್ತು ಇತರ ಕಾರಣಾಂತರಗಳಿಂದ ನಡೆಯಲಿಲ್ಲ. ಆದರೂ ಸಂಘ ಪ್ರತೀವರ್ಷ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡುವ ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದೆ. ಅದಕ್ಕೆ ನಮ್ಮ ಮುಂಬಯಿಗರು ಕಾಲೇಜಿನ ಹಳೆ ವಿದ್ಯಾರ್ಥಿಗಳ ಉದಾರ ಮನಸ್ಸು ಕಾರಣವಾಗಿದೆ ಎಂದರು.





ಗೌರವ ಅಧ್ಯಕ್ಷ ಆನಂದ ಶೆಟ್ಟಿಯವರು ಮಾತನಾಡಿ, ನಮ್ಮ ಎಸೋಸಿಯೇಶನ್ ಈವಾಗ ವಿಜಯಾ ಕಾಲೇಜು ಗ್ಲೋಬಲ್  ಅಲ್ಲುಮಿನ್ಮಅಸೋಸಿಯೇಷನ್
 ಆಗಿ ಪರಿವರ್ತನೆ ಆಗಿದೆ. ಇನ್ನು ಮೇಲೆ ನಾವು ಪ್ರಪಂಚದ ಯಾವ ಮೂಲೆಯಲ್ಲೂವಾಸಿಸುವ ವಿಜಯ್‌ ಕಾಲೇಜಿನ ಹಳೆವಿದ್ಯಾರ್ಥಿಯರನ್ನು ಸಂಘದಲ್ಲಿ ಕೂಡಿಸಬಹುದು ಮತ್ತು ಬಹಳಷ್ಟು ದೇಣಿಗೆಯನ್ನುಕೂಡಿಸಬಹುದು, ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನ ಆಗಬಹುದು ಎಂದರು.





ಕಾರ್ಯದರ್ಶಿ ಭಾಸ್ಕರ ಬಿ. ಶೆಟ್ಟಿಯವರು ಮಾತನಾಡಿ ಮುಂಬಯಿ ಸಂಘವು ಕಾಲೇಜಿನ ಹಲವಾರು ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತ ಬಂದಿದೆ. ನಾವು ಮುಂದೆ ಇನ್ನಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ
ಉದ್ದೇಶವನ್ನು ಇಟ್ಟುಕೊಂಡಿದ್ದೇವೆ, ಎಲ್ಲರೂ ಉದಾರ ಮನಸ್ಸಿನಿಂದ ಸಹಾಯಧನವನ್ನು ಕೊಡಬೇಕು ಎಂದರು.





ಉಪಾಧ್ಯಕ್ಷರಾದ ಅಡ್ವಕೇಟ್, ಶೇಖರ್ ಭಂಡಾರಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ಆದಷ್ಟು ಜಾಸ್ತಿ ವಿದ್ಯಾರ್ಥಿಗಳನ್ನು ವಿಜಯ ಕಾಲೇಜಿಗೆ ಸೇರಿಸುವ ಉದ್ದೇಶ ನಮ್ಮದಾಗಿದೆ. ಇದಕ್ಕೆ ಮುಂಬಯಿ ಮತ್ತು ಪರಿಸರದ ಎಲ್ಲಾ ಹಳೆ ವಿದ್ಯಾರ್ಥಿಗಳು, ಉದಾರ ಮನಸ್ಸಿನಿಂದ ದೇಣಿಗೆಯನ್ನು ಕೊಡಬೇಕು ಎಂದರು.






 ಹಳೆವಿದ್ಯಾರ್ಥಿಗಳಾದ ರಮೇಶ್‌ ಶೆಟ್ಟಿ, ಕೆ.ಎಸ್‌. ಸುವರ್ಣ, ಭಾಸ್ಕರ ಎಂ. ಸಾಲಿಯಾನ್, ಲಾರೆನ್ಸ್ ಡಿ'ಸೋಜಾ, ಸಿಎ ಸೋಮನಾಥ್ ಕುಂದರ್, ಸಿಎ ಕಿಶೋರ್‌ಕುಮಾರ್ ಸುವರ್ಣ, ಸಿಎ ರೋಹಿತಾಕ್ಷ, ನವೀನ್‌ ಚಂದ್ರ ಬಂಗೇರ, ಕೊಲ್ಕಾಡು ಅಶೋಕ್‌ ಶೆಟ್ಟಿ, ನವೀನ್‌ ಚಂದ್ರ ಸುವರ್ಣ, ದಾಮೋದರ್ ರೈ, ಸರಿತಾ ಸುನಿಲ್ ರಾವ್, ಉಷಾ ಶೇಖರ್ ಮತ್ತು ಹಲವಾರು ಹಳೆ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಭಾಸ್ಕರ ಶೆಟ್ಟಿಯವರು ವಂದನಾರ್ಪಣೆ ಮಾಡಿದರು.

ಹಳೆ ವಿದ್ಯಾರ್ಥಿ ಮತ್ತು ಮೆಜೆಸ್ಟಿಕ್ ಎಕ್ಸ್ ನ ಪಾಲುದಾರ  ಭಾಸ್ಕರ ಯಂ, ಸಾಲಿಯಾನ್' ಅವರಿಂದ ವಿಶೇಷವಾದ ಔತಣದ ವ್ಯವಸ್ಥೆಯಿತ್ತು.

No comments

Powered by Blogger.