ಅ 1 ರಂದು : ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ.
ಅ 1 ರಂದು : ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ.
ಹಿರಿಯ ಸಾಧಕರಿಗೆ ಸನ್ಮಾನ "ಬುಡ್ದ್ ಪೋವೊಚ್ಚೀ" ನಾಟಕ
ನವಿ ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಾಘು ಎ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಹಾಗೂ ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಇವರ ಉಪಸ್ಥಿತಿಯಲ್ಲಿ ಅಕ್ಟೋಬರ್ 1ರಂದು 2023 ರಂದು ನವಿ ಮುಂಬಯಿ ಕನ್ನಡ ಸಂಘ ಪ್ಲಾಟ್ ನಂಬರ್ -2 ಸಿ, ಸೆಕ್ಟರ್ ನಂಬರ್ -9 ಏ, ವಾಶಿ ಬಸ್ ಡಿಪೋ ಸಮೀಪ ,ನವಿ ಮುಂಬಯಿ ಜರಗಲಿರುವುದು.
ಈ ಸಮಾರಂಭದಲ್ಲಿ ಸಂಘದ ಸದಸ್ಯರಾದ ಮತ್ತು ಸಮಾಜ ಕಾರ್ಯಕರ್ತರಾದ ದಿನಕರ್ ಬಂಗೇರ ಥಾಣೆ ಮತ್ತು ಬಿ ಜಿ ಅಂಚನ್ ಮತ್ತು ಲಲಿತಾ ದಂಪತಿಯವರನ್ನು ತಮ್ಮ 50 ನೇಯ ವರ್ಷದ ವೈವಾಹಿಕ ಜೀವನದ ಅಂಗವಾಗಿ ವಿಶೇಷವಾಗಿ
ಸನ್ಮಾನಿಸಲಾಗುವುದು. ಮತ್ತು ಸಂಘದ ಸ್ಥಳೀಯ ಸಮಿತಿಯ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ 10 ಗಂಟೆಯಿಂದ ಜರಗಲಿದೆ .ಅಲ್ಲದೆ ನವಿ ಮುಂಬಯಿ ಸ್ಥಳೀಯ ಸಮಿತಿಯ ಸದಸ್ಯರಿಂದ ಧನಂಜಯ ಮೂಳೂರು ನಿರ್ದೇಶನದ ಕಥೆ ಸತೀಶ್ ಏರ್ಮಲ್ ಅವರ "ಬುಡ್ದ್ ಪೋವೊಚ್ಚೀ" ತುಳು ಸಾಮಾಜಿಕ ಹಾಸ್ಯ ನಾಟಕ ಸಮಿತಿಯ ಸದಸ್ಯರಿಂದ ಪ್ರದರ್ಶನವಿದೆ.
ಈ ಸಮಾರಂಭಕ್ಕೆ ಎಲ್ಲ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ನಮ್ಮ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕುಲಾಲಸಂಘದ ಪರವಾಗಿ ಉಪಾಧ್ಯಕ್ಷರಾದ ಡಿ ಐ ಮೂಲ್ಯ , ಗೌರವ ಪ್ರದಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲಿಯಾನ್ ,ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್,ಹಾಗೂ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ವಾಸು ಏಸ್ ಬಂಗೇರ,
ಉಪಕಾರ್ಯಧ್ಯಕ್ಷ ಸದಾನಂದ ಕುಲಾಲ್,ಕಾರ್ಯದರ್ಶಿ ಎಲ್ ಆರ್ ಮೂಲ್ಯ ಕೆಂಜಾರು,ಕೋಶಾಧಿಕಾರಿ ಸೂರಜ್ ಏಸ್ ಕುಲಾಲ್,ಜೊತೆ ಕಾರ್ಯದರ್ಶಿ ಕ್ರಪೇಶ್ ಕುಲಾಲ್ ,
ಜೊತೆ ಕೋಶಾಧಿಕಾರಿ ಆನಂದ್ ಮೂಲ್ಯ ಖಾಮೋಟೆ.ಕ್ರೀಡೆ ಮತ್ತು ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಎಸ್ ಮೂಲ್ಯ.ಹಾಗೂ ಸದಸ್ಯರು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಏಸ್ ಕುಲಾಲ್ ,ಉಪಕಾರ್ಯಾಧ್ಯಕ್ಷೆ ದೇವಕಿ ಸುನಿಲ್ ಸಾಲಿಯಾನ್. ಕಾರ್ಯದರ್ಶಿ ಬೇಬಿ ವಿ ಬಂಗೇರ .ಕೋಶಾಧಿಕಾರಿ ಉಷಾ ಆರ್ ಮೂಲ್ಯ . ಉಪ ಕಾರ್ಯದರ್ಶಿ ಶೋಭಾ ಏನ್ ಬಂಗೇರ .ಉಪ ಕೋಶಾಧಿಕಾರಿ ಸುಶೀಲಾ ಪಿ ಬಂಗೇರಾ,ಸಾಂಸ್ಕೃತಿಕ ಮತ್ತು ಕ್ರೀಡೆ ಪ್ರೇಮ ಎಲ್ ಮೂಲ್ಯ.ನವಿ ಮುಂಬಯಿ ಗುರುವಂದನಾ ಬಜನ ಮಂಡಳಿಯ ಸಂಚಾಲಕರು ಮಲ್ಲಿಕಾ ಡಿ ಕುಲಾಲ್.ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ.
Post a Comment