ಚಿಣ್ಣರ ಬಿಂಬ ಡೊಂಬಿವಲಿ ಪೂರ್ವ ಶಿಬಿರದ ವತಿಯಿಂದ “ಮಕ್ಕಳ ಪ್ರತಿಭಾ ಸ್ಪರ್ಧೆ"
ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಚಿಣ್ಣರ ಬಿಂಬದ ಮಹತ್ತರವಾದ ಪಾತ್ರ: ಸುಕುಮಾರ್ ಏನ್. ಶೆಟ್ಟಿ
ಚಿಣ್ಣರ ಬಿಂಬ ಡೊಂಬಿವಲಿ ಪೂರ್ವ ಶಿಬಿರದ “ಮಕ್ಕಳ ಪ್ರತಿಭಾ ಸ್ಪರ್ಧೆ-2023” ಸಪ್ಟೆಂಬರ್ 10ರಂದು ಡೊಂಬಿವಲಿ ಪೂರ್ವದ ಅಯ್ಯಪ್ಪ ಮಂದಿರದ ಸಭಾಗ್ರಹದಲ್ಲಿ ನಡೆಯಿತು.
ಮಕ್ಕಳ ಛದ್ಮವೇಷ ಸ್ಪರ್ದೆ ಯೊಂದಿಗೆ ಆರಂಭಗೊಂಡು ಭಾಷಣ, ಭಾವಗೀತೆ, ಜಾನಪದ ಗೀತೆ, ಪಾಲಕರಿಗೆ ದೇಶ ಭಕ್ತಿ ಗೀತೆ ಸ್ಪರ್ಧೆಗಳು ನಡೆದವು. ಮಕ್ಕಳ ಗಣೇಶ ಸ್ತುತಿಯೊಂದಿಗೆ ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಾಧ್ಯಕ್ಷ ಹಾಗೂ ಬಂಟರ ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸುಕುಮಾರ್ ಏನ್. ಶೆಟ್ಟಿಯವರು ಮಕ್ಕಳನ್ನುದ್ದೇಶಿಸುತ್ತಾ ಚಿಣ್ಣರ ಬಿಂಬವು ಮಕ್ಕಳ ಪ್ರತಿಭೆಯನ್ನು ಗುರುತಿಸುವ ಹಾಗೂ ನಮ್ಮ ನಾಡಿನ ಭಾಷೆ, ಸಂಸ್ಕ್ರತಿಯನ್ನು ಕಲಿಸುವ ಅತಿ ದೊಡ್ಡ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಚಿಣ್ಣರ ಬಿಂಬದಲ್ಲಿ ಅವರು ಪಡೆಯುತ್ತಿರುವ ಶಿಕ್ಷಣ ಹಾಗೂ ಅವಕಾಶ ಮಹತ್ತರವಾದ ಪಾತ್ರವನ್ನು ವಹಿಸಲಿದೆ ಎಂದು ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು.
ಗೌರವ ಅತಿಥಿಯಾಗಿ ಆಗಮಿಸಿದ ಡೊಂಬಿವಲಿಯ ಹೋಟೆಲ್ ಉದ್ಯಮಿ ಹಾಗೂ ಡೊಂಬಿವಲಿ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾದ ಸಚಿನ್ ಕೆ ಶೆಟ್ಟಿಯವರು ಮಾತನಾಡುತ್ತಾ ಚಿಣ್ಣರ ಬಿಂಬವು ಮಕ್ಕಳಿಗೆ ಭಜನೆ, ಸಂಸ್ಕ್ರತಿ, ಭಗವದ್ಗೀತೆಗಳನ್ನು ಕಲಿಸಿ ಹಿರಿಯರು ಮಾಡುತಿದ್ದಂತಹ ಅತಿದೊಡ್ಡ ಜವಾಬ್ದಾರಿಯುತ ಕೆಲಸಗಳನ್ನು ಮಾಡುತ್ತಿದೆ, ಮುಂಬಯಿ ಮಹಾನಗರದಲ್ಲಿ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುವ ಶ್ರೇಷ್ಠ ಕೆಲಸವನ್ನು ಮಾಡುತ್ತಿರುವ ಚಿಣ್ಣರ ಬಿಂಬ ಪ್ರಕಾಶ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಹೆಮ್ಮರವಾಗಿ ಬೆಳೆಯಬೇಕು ಹಾಗೂ ಕನ್ನಡ ಪ್ರೇಮಿಗಳು ಅದಕ್ಕೆ ಸಹಕಾರ ನೀಡಬೇಕು ಎಂದು ಶುಭ ಹಾರೈಸಿದರು.
ಕೇಂದ್ರೀಯ ಸಮಿತಿಯ ಸದಸ್ಯರಾದ ಶ್ರೀ ಪದ್ಮನಾಭ ಶೆಟ್ಟಿಯವರು ಪ್ರಕಾಶ್ ಭಂಡಾರಿಯವರ ಸಾರಥ್ಯದಲ್ಲಿ ಚಿಣ್ಣರ ಬಿಂಬವು ಮಕ್ಕಳಿಗೆ ವೇದಿಕೆಯನ್ನು ಒದಗಿಸುವ ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದೆ. ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿಣ್ಣರ ಬಿಂಬದ ಕೇಂದ್ರ ಸಲಹಾ ಸಮಿತಿಯ ಸದಸ್ಯೆ ಮಂಜುಳಾ ಶೆಟ್ಟಿಯವರು ಸಭೆಯನ್ನುದ್ದೇಶಿಸಿ ಸಾವಿರಾರು ಮಕ್ಕಳು ಕನ್ನಡವನ್ನು ಕಲಿತು ಅದರೊಂದಿಗೆ ತಮ್ಮ ವಿವಿಧ ರೀತಿಯ ಪ್ರತಿಭಾ ವಿಕಸನವನ್ನು ಮಾಡಿಕೊಂಡಿದ್ದಾರೆ.ಪಾಲಕರ ಹಾಗೂ ಅನೇಕ ಮಹನೀಯರ ಸಹಕಾರದಿಂದ ಚಿಣ್ಣರ ಬಿಂಬ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಲಯ ಮುಖ್ಯಸ್ಥೆ ಅನಿತಾ ಶೆಟ್ಟಿ, ಶಿಬಿರ ಮುಖ್ಯಸ್ಥೆ ಜ್ಯೋತಿ ಶೆಟ್ಟಿ, ಸಾಂಸ್ಕ್ರತಿಕ ಮುಖ್ಯಸ್ಥೆ ಅಂಬಿಕಾ ಶೆಟ್ಟಿ, ಪದ್ಮಾವತಿ ಪೂಜಾರಿಯವರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಆಗಮಿಸಿದ್ದ ಸವಿತಾ ವಿ ರಾಣೆಬೆನ್ನೂರು ಹಾಗೂ ಸಂಧ್ಯಾ ರವಿಯವರನ್ನು ಸನ್ಮಾನಿಸಲಾಯಿತು. ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತ ಮುಂಬಯಿ ಮಹಾನಗರದ ಮಕ್ಕಳು ಉತ್ತಮ ರೀತಿಯಲ್ಲಿ ಕನ್ನಡದಲ್ಲಿ ಹಾಡು ಹಾಗೂ ಭಾಷಣ ಮಾಡುತ್ತಿರುವುದು ನಿಜವಾಗಿಯೂ ಪ್ರಶಂಶನೀಯ, ಮಕ್ಕಳು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂಧರ್ಭದಲ್ಲಿ ಕಳೆದ ವರ್ಷದ ಶಿಕ್ಷಕಿ ಸರೋಜಾ ಶೆಟ್ಟಿಯವರನ್ನು ಗೌರವಿಸಲಾಯಿತು. ಹಾಗೂ ಸ್ವಯಂ ಸೇವಕರನ್ನು ಹೂ ಗಿಡ ನೀಡಿ ಗೌರವಿಸಲಾಯಿತು.
ಆರಂಭದಲ್ಲಿ ಶಿಬಿರ ಮುಖ್ಯಸ್ಥೆ ಜ್ಯೋತಿ ಶೆಟ್ಟಿಯವರು ಸ್ವಾಗತಿಸಿ, ಸಹ ಶಿಬಿರ ಮುಖ್ಯಸ್ಥೆ ಶ್ರೀಮತಿ ರೂಪ ಕೋಟ್ಯಾನ್ ರವರು ಪ್ರಾಸ್ತಾವಿಕ ನುಡಿಯನ್ನಾಡಿದರು.
ಪುಟಾಣಿಗಳಾದ ಪ್ರತ್ಯುಷಾ ಬಲ್ಲಾಳ್ ,ಮತ್ತು ಶ್ರುದ್ಧಿ ಶೆಟ್ಟಿ , ಪುನೀತ್ ಶೆಟ್ಟಿ ಮತ್ತು ವೃದ್ಧಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರೆ ಇವರೊಂದಿಗೆ ಶಿಬಿರದ ಕನ್ನಡ ಶಿಕ್ಷಕಿ ಪದ್ಮಪ್ರಿಯಾ ಬಲ್ಲಾಳ್ ಸಹಕರಿಸಿದರು.
ಚಿಣ್ಣರಾದ ಸುಕ್ಷಿತ್ ಶೆಟ್ಟಿ & ಅದ್ವಿತ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು .
ಸುಂದರವಾದ ಕುಣಿತ ಭಜನೆಯಿಂದ ಚಿಣ್ಣರು ಎಲ್ಲರನ್ನು ರಂಜಿಸಿದರು.
ಶಿಬಿರದ ಪಾಲಕರು ಹಾಗು ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಸಾಂಸ್ಕ್ರತಿಕ ಮುಖ್ಯಸ್ಥೆ ಶಿಕ್ಷಕಿ ಅಂಬಿಕಾ ಶೆಟ್ಟಿಯವರು ಧನ್ಯವಾದಗೈದರು.
ಬಹುಮಾನ ವಿತರಣಾ ಕಾರ್ಯಕ್ರಮವನ್ನು
ಕಲ್ವಾ ಶಿಬಿರದಿಂದ ಆಗಮಿಸಿದ ಜ್ಯೋತಿ ನಾಯಕ್ ಹಾಗು ಲೀಲ ಪುಜಾರಿಯವರು ನಡೆಸಿಕೊಟ್ಟರು.
ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
------------------------------ ----------
*ಸ್ಪರ್ಧೆಯ ಫಲಿತಾಂಶ*
*ಕಿರಿಯರ ಛದ್ಮವೇಷ ಸ್ಪರ್ಧೆ* :
ಪ್ರಥಮ : ಶರಣ್ R. ನಾಯಕ್
ದ್ವಿತೀಯ : ತ್ರಿಶಾ ಮೊಗವೀರ
ತೃತೀಯ : ಕ್ರಿಶಾ ಅಡಪ
*ಕಿರಿಯರ ಭಾಷಣ ಸ್ಪರ್ಧೆ* :
ಪ್ರಥಮ : ಪ್ರಥ್ಯೂಷಾ ಬಲ್ಲಾಳ್
ದ್ವಿತೀಯ : ಹನಿ ಬಿ. ಶೆಟ್ಟಿ
ತೃತೀಯ : ಶರಣ್ ಆರ್. ನಾಯಕ್
*ಕಿರಿಯರ ಜಾನಪದ ಗೀತೆ ಸ್ಪರ್ಧೆ* :
ಪ್ರಥಮ : ಪ್ರಥ್ಯೂಷಾ ಬಲ್ಲಾಳ್
ದ್ವಿತೀಯ : ಹನಿ ಬಿ. ಶೆಟ್ಟಿ
ತೃತೀಯ : ಜಿಶಾ ಶೆಟ್ಟಿ
*ಹಿರಿಯರ ಚರ್ಚಾ ಸ್ಪರ್ಧೆ* :
ಪ್ರಥಮ : ಸಾನ್ವಿ ಕೋಟ್ಯಾನ್
ದ್ವಿತೀಯ : ಧ್ರುವಿಕಾ ನಾಯಕ್
ತೃತೀಯ : ದ್ರಿತಿ ಆರ್ ಶೆಟ್ಟಿ
*ಹಿರಿಯರ ಭಾವಗೀತೆ ಸ್ಪರ್ಧೆ*:
ಪ್ರಥಮ : ಪುನೀತ್ ಎಸ್ ಶೆಟ್ಟಿ
ದ್ವಿತೀಯ : ದ್ರಿತಿ ಆರ್ ಶೆಟ್ಟಿ
ತೃತೀಯ : ಸಾನ್ವಿ ಕೋಟ್ಯಾನ್
*ಪಾಲಕರ ದೇಶಭಕ್ತಿ ಗೀತೆ ಸ್ಪರ್ಧೆ*
ಪ್ರಥಮ : ರೇಣುಕ ರೈ
ದ್ವಿತೀಯ : ಶಾಲಿನಿ ಶೆಟ್ಟಿ
ತೃತೀಯ : ಅರುಣ ಶೆಟ್ಟಿ
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment