ಸುರತ್ಕಲ್ ಕೆ.ಆರ್.ಇ.ಸಿ ಕನ್ನಡ ಶಾಲಾ ಹಳೆವಿದ್ಯಾರ್ಥಿಗಳ 'ಸ್ನೇಹಮೆಲುಕು' ಕಾರ್ಯಕ್ರಮ.
ವರದಿ: ಉಮೇಶ್ ಕೆ.ಅಂಚನ್.
ಮಂಗಳೂರು, ಸೆ.20.ಸುರತ್ಕಲ್ ಕೆ.ಆರ್.ಇ.ಸಿ ಕನ್ನಡ ಮಾಧ್ಯಮ ಪ್ರೌಡಶಾಲೆಯ 1983-84ರ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹಮೆಲುಕು ಕಾರ್ಯಕ್ರಮವು ಸೆ.17ರಂದು ಮಂಗಳೂರು ಮರವೂರಿನ ಗ್ರೈಂಡ್ ಬೇ ಪಾಪ್ಯುಲರ್ ರಿಸಾರ್ಟ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಂದಿನ ಶಾಲಾ ಮುಖ್ಯೋಪಾಧ್ಯಾಯರಾದ ಸೂರಪ್ಪ ಕರಣಿಕರು ಹಾಗೂ ನಿವೃತ್ತ ಅಧ್ಯಾಪಕರುಗಳಾದ ನರಸಿಂಹ ಎಸ್. ಪ್ರಭು, ಸಂಜೀವ ಮುಖಾರಿ ಮತ್ತು ಸರೋಜಾ ಹೆಬ್ಬಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಳೆವಿದ್ಯಾರ್ಥಿಗಳು ನಿವೃತ್ತ ಅಧ್ಯಾಪಕರುಗಳ ಮುಖೇನ ಈಗಿನ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪ್ರೊಜೆಕ್ಟರನ್ನು ಹಸ್ತಾಂತರಿಸಿದರು.
ನಂತರ ಗುರು ವಂದನೆ ಹಾಗೂ ಹಳೆವಿದ್ಯಾರ್ಥಿಗಳ ಮತ್ತು ಅವರ ಕುಟುಂಬದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.ಅದ್ಯಾಪಕರುಗಳು ನಲ್ವತ್ತು ವರ್ಷಗಳ ನಂತರ ತಮ್ಮನ್ನು ನೆನಪಿಸಿ ವಿದ್ಯಾರ್ಥಿಗಳು ನಡೆಸಿದ ಗುರುವಂದನಾ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿದರು.
ಹಳೆವಿದ್ಯಾರ್ಥಿಗಳಾದ ಪ್ರಕಾಶ್ ಕೋಟ್ಯಾನ್, ಗೋವರ್ಧನ್, ಪ್ರಭಾಕರ್, ದಾಮೋದರ ಶೆಟ್ಟಿ,ದಿನಕರ್ ಶೆಟ್ಟಿ, ನಳಿನಿ, ಜ್ಯೋತಿ,ಏಸ್.ಎಮ್. ಶೆರೀಫ್, ಅಶ್ರಫ್, ಸ್ವರ್ಣ, ಲತಾ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment