ಮಹತೋಭಾರ ಶನೀಶ್ವರ ದೇವಸ್ಥಾನ ದ ಆಡಳಿತ ಸಂಸ್ಥೆಯ ಅಧ್ಯಕ್ಶರಾಗಿ ಶ್ರೀನಿವಾಸ್ ಸಪಲ್ಯ ಅವಿರೋಧವಾಗಿ ಆಯ್ಕೆ
ಮುಂಬಯಿ:ಮಹತೋಭಾರ ಶನೀಶ್ವರ ದೇವಸ್ಥಾನದ ಆಡಳಿತ ಸಂಸ್ಥೆಯಾದ ಶನಿ ಮಹಾತ್ಮಾ ಪೂಜಾ ಸಮಿತಿಯ ಸಭೆ ತಾರೀಕು 14 ಸೆಪ್ಟೆಂಬರ್ ೨೦೨೩ ನೇ ಗುರುವಾರ ಸಂಜೆ ದೇವಸ್ಥಾನದ ಪಕ್ಕದಲ್ಲಿ ಇದ್ದ ಶಾಲೆಯಲ್ಲಿ ಶ್ರೀನಿವಾಸ್ ಸಾಫಲ್ಯರ ಅಧ್ಯಕ್ಷೆತೆಯಲ್ಲಿ ಜರಗಿತು. ೨೦೨೩-೨೪ ರಿಂದ ೨೦೨೫-೨೫ ರ ವರೆಗೆ ಹೊಸ ಕಾರ್ಯಕಾರಿ ಸಮಿತಿಯನ್ನು ನೇಮಿಸಲಾಯಿತು. ಕಳೆದ ೯ ವರುಷದಲ್ಲಿ ಕೋಶಾಧಿಕಾರಿಯಾಗಿ, ೯ ವರುಷ ಕಾರ್ಯದರ್ಶಿಯಾಗಿ ಮತ್ತು ೯ ವರುಷ ಅಧ್ಯಕ್ಶರಾಗಿ ಸೇವೆ ಸಲ್ಲಿಸಿದ ಧಾರ್ಮಿಕ ಚಿಂತಕರು ಹಾಗು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡುತ್ತಿರುವ ಶ್ರೀನಿವಾಸ್ ಸಾಫಲ್ಯರನ್ನು ಮುಂದಿನ ಮೂರೂ ವರುಷಕ್ಕೆ ಅಧ್ಯಕ್ಷರಾಗಿ ನೇಮಿಸಲಾಯಿತು.
ಕಳೆದ ಮೂರೂ ವರುಷಗಳಿಂದ ಸೇವೆ ಸಲ್ಲಿಸುತ್ತಿರುವ ರಮೇಶ್ ಆಚಾರ್ಯ ಅವರನ್ನು ಮತ್ತು ಕವಿ, ಸಾಮಾಜಿಕ ಚಿಂತಕರು ಆದ ವಿಶ್ವನಾಥ್ ಪೇತ್ರಿ ಇವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಪ್ರದಾನ ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಮತ್ತು ಜೊತೆ ಕಾರ್ಯದರ್ಶಿಯಾಗಿ ನಿತ್ಯಾನಂದ ಕೋಟಿಯನ್ ಮತ್ತು ಶಾಲಿನಿ ಶೆಟ್ಟಿ ಹಾಗು ಕೋಶಾಧಿಕಾರಿಯಾಗಿ ದೀರ್ಘ ಸಮಯ ಸೇವೆ ಮಾಡುತ್ತಿರುವ ಹರೀಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಯಾಗಿ ಚಂದ್ರಕುಮಾರ್ ಶೆಟ್ಟಿ ಮತ್ತು ಮನೋಹರ್ ಶೆಟ್ಟಿ ಇವರನ್ನು ನೇಮಿಸಲಾಯಿತು.
ಮಹಿಳಾವಿಭಾಗದ ಕಾರ್ಯಾಧ್ಯಕ್ಷರಾಗಿ ಶೀತಲ್ ಕೋಟಿಯನ್ ಮತ್ತು ಸಲಹಾಕಾರರಾಗಿ ನಾರಾಯಣ್ ಶೆಟ್ಟಿ, ಬಾಬು ಚಂದನ್, ಐತು. ಕೆ . ದೇವಾಡಿಗ ಮತ್ತು ರಮೇಶ್ ರಾವ್ ಅವರನ್ನು ನೇಮಿಸಲಾಯಿತು
. ಕಾರ್ಯಕಾರಿ ಸಮಿತಿಯ ಹಾಗು ಉಪ ಸಮಿತಿಯ ಸದಸ್ಯರಾಗಿ ಪ್ರಭಾಕರ್ ಶೆಟ್ಟಿ (ಬಿ. ಯಸ್. ಟಿ), ಶಿವಾನಂದ ದೇವಾಡಿಗ, ಪ್ರಭಾಕರ್ ಶೆಟ್ಟಿ ಗೋರೆಗಾವ್ನ್, ಮಹೇಶ್ ಸಾಲಿಯಾನ್, ದಯಾನಂದ ಶೆಟ್ಟಿ, ಸದಾನಂದ ಶೆಟ್ಟಿ, ಜಯೇಶ್ ಸಾಲಿಯಾನ್, ಸುರೇಶ ಸಾಲಿಯಾನ್, ರಮೇಶ್ ಪೂಜಾರಿ, ಅಶೋಕ್ ಸಾಲಿಯಾನ್ ಯವರನ್ನು ನೇಮಿಸಲಾಯಿತು. ಮಹಿಳಾ ವಿಭಾಗದಲ್ಲಿ ಜಯಂತಿ ಸಾಲಿಯಾನ್, ರಾಜಶ್ರೀ ಪೂಜಾರಿ, ಶಾಲಿನಿ ಶೆಟ್ಟಿ, ಜಯಲಕ್ಷ್ಮಿ ನಾಯಕ್, ಯಶೋದಾ ರಾಯ್, ಯಶೋದಾ ಕುಂಬ್ಳೆ, ಗಿರಿಜಾ ಮಾರಕಲ,ಭವಾನಿ ಕುಂದರ್, ಲತಾ ಪೂಜಾರಿ, ಸುರೇಖಾ ಶೆಟ್ಟಿಯನ್, ಸ್ನೇಹಲತಾ ನಾಯಕ್ ಅವರನ್ನು ನೇಮಿಸಲಾಯಿತು.
ಅಧ್ಯಕ್ಷರಾದ ಶ್ರೀನಿವಾಸ್ ಸಾಫಲ್ಯರು ಮಾತಾಡುತ್ತ, ಸ್ವರ್ಣ ಸಂಭ್ರಮದ ಕಾರ್ಯಕ್ರಮ ಏಪ್ರಿಲ್ ೨೦೨೩ ರಿಂದ ಏಪ್ರಿಲ್ ೨೦೨೪ ರ ವರೆಗೆ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮದೊಂದಿಗೆ ಜರಾಗುತ್ತಿದೆ. ಈ ತನಕ ಆರು ಕಾರ್ಯಕ್ರಮಗಳು ವಿವಿಧ ರೀತಿಯಲ್ಲಿ ಜರಗಿದೆ, ತಾ ೧.೧೦.೨೦೨೩ ನೇ ಭಾನುವಾರ ಸಂಜೆ ೫.೩೦ ಕ್ಕೆ ಬಂಟರ ಭವನದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿವ ದೂತ ಗುಳಿಗೆ ಎಂಭ ನಾಟಕವನ್ನು ಕಲಾ ಸಂಗಮ ಮಂಗಳೂರು ಇವರು ಪ್ರಸ್ತುತ ಪಡಿಸುವ ಹಾಗು ವಿಜಯ ಕುಮಾರ್ ಕೊಡಿಯಾಲಬೈಲು ನಿರ್ದೇಶಿಸಿದ ವಿಭಿನ್ನ ಶೈಲಿಯ ತುಳು ನಾಟಕ ಜರಗಲಿದೆ. ಎಲ್ಲ ಧರ್ಮಾಭಿಮಾನಿಗಳು
Post a Comment