ಪದ್ಮಶಾಲಿ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ ಪುಣೆಯ ಉದ್ಯಮಿ ವಿನೋದ್ ಶೆಟ್ಟಿಗಾರ್ ಗೆ ಗೌರವ.
ಪದ್ಮಶಾಲಿ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ ಪುಣೆಯ ಉದ್ಯಮಿ ವಿನೋದ್ ಶೆಟ್ಟಿಗಾರ್ ಗೆ ಗೌರವ.
ಮುಂಬಯಿಯ ಹಿರಿಯ ಸಂಘಟನೆಗಳಲ್ಲಿ ಒಂದಾದ ಪದ್ಮಶಾಲಿ ಸಮಾಜ ಸೇವಾ ಸಂಘದ 87ನೇ ವಾರ್ಷಿಕೋತ್ಸವದಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುಣೆಯಿಂದ ಆಗಮಿಸಿದ ಉದ್ಯಮಿ,ದಾನಿ ವಿನೋದ್ ಆರ್.ಶೆಟ್ಟಿಗಾರ್ ಅವರನ್ನು ಸಂಘದ ಅಧ್ಯಕ್ಷರಾದ ಉತ್ತಮ್ ಶೆಟ್ಟಿಗಾರ್ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ , ವಿನೋದ್ ಆರ್ ಶೆಟ್ಟಿಗಾರ್ " ತುಳು ಭಾಷೆಗೆ ನಾವು ಮಹತ್ವವನ್ನು ನೀಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ನಾವು ಹಿಂದಿ ಇಲ್ಲವೇ ಇಂಗ್ಲಿಷ್ ನಲ್ಲಿಯೇ ಕಾರ್ಯಕ್ರಮವನ್ನು ನಡೆಸುವ ಅನಿವಾರ್ಯತೆ ಎದುರಾಗಬಹುದು. ಇಂದು ಶೈಕ್ಷಣಿಕವಾಗಿ ಪ್ರತಿಭಾ ಪುರಸ್ಕವರನ್ನು ಪಡೆದ ಮಕ್ಕಳು ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನು, ಸ್ಥಾನ-ಮಾನವನ್ನು ಪಡೆದು ಒಳ್ಳೆಯ ನಾಗರಿಕರಾಗಿ ಸಹಾಯ ಹಸ್ತವನ್ನು ನೀಡಿದ, ಪ್ರತಿಭೆಯನ್ನು ಗುರುತಿಸಿದ ಸಂಘದ ಋಣವನ್ನು ತೀರಿಸಲು ಪ್ರಯತ್ನಿಸಬೇಕು" ಎಂದರು.






Post a Comment