ಏಷ್ಯನ್ ಗೇಮ್ಸ್ ನ ಹಾಕಿಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಸೆಮಿಫೈನಲ್ ತಲಪಿದ ಭಾರತ.


ಏಷ್ಯನ್ ಗೇಮ್ಸ್ ನ ಹಾಕಿಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಸೆಮಿಫೈನಲ್  ತಲಪಿದ ಭಾರತ.

ಚೀನಾದ ಹಾಂಗ್​ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಪುರುಷ ಹಾಕಿ ಕ್ವಾರ್ಟರ್ ​ಫೈನಲ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರಿದೆ. ಗೊಂಗ್‌ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಇತ್ತ ಭಾರತ ಮುನ್ಪಡೆ ಆಟಗಾರರ ಸಾಂಘಿಕ ಪ್ರದರ್ಶನ ಕಂಡು ಪಾಕಿಸ್ತಾನ್ ತಂಡದ ರಕ್ಷಣಾತ್ಮಕ ಆಟಗಾರರು ನಿಬ್ಬೆರಗಾಗಿ ನಿಂತು ಬಿಟ್ಟರು.

 ಮೊದಲಿನಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತದ ಆಟಗಾರರು ಪ್ರಥಮಾರ್ದದಲ್ಲಿ ಮುನ್ನಡೆ ಸಾಧಿಸದ್ದರು. ದ್ವಿತೀಯರ್ದದಲ್ಲಿ ಮತ್ತೆ ಮುನ್ನಗಿದ ಭಾರತದ ಹಾಕಿ ಪಟುಗಳು ಪಾಕಿಸ್ತಾನಕ್ಕೆ ಗೋಲು ಹೊಡೆಯುವ ಅವಕಾಶ ನೀಡದೆ ,ಕೊನೆಯಲ್ಲಿ
 10-2 ಅಂತರದೊಂದಿಗೆ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತೀಯ ಹಾಕಿ ಪಡೆ ಏಷ್ಯನ್ ಗೇಮ್ಸ್​ ಸೆಮಿಫೈನಲ್​ಗೇರಿದೆ.
ಭಾರತದ ಪರ ನಾಯಕ ಹರ್ಮನ್​ಪ್ರೀತ್ ಸಿಂಗ್ 4 ಗೋಲು ಬಾರಿಸಿದರೆ, ವರುಣ್ ಕುಮಾರ್ ಎರಡು, ಶಂಶೇರ್, ಮಂದೀಪ್, ಸುಮಿತ್, ಗುರ್ಜಂತ್ ತಲಾ ಒಂದು ಗೋಲು ಗಳಿಸಿ ಮಿಂಚಿದರು.

No comments

Powered by Blogger.