ಅಕ್ಟೋಬರ್ 8 ರಂದು ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ
ಅಕ್ಟೋಬರ್ 8 ರಂದು ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ
ಶ್ರೀ ರಾಮ ಪ್ರಕಾಶನ, ಮಂಡ್ಯ ಮತ್ತು ಸಾಹಿತ್ಯ ಸುಗ್ಗಿ, ಬೆಂಗಳೂರು ಪ್ರಕಟಿಸಿರುವ ಸಾಹಿತಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ
40 ನೆಯ ಕೃತಿ "ಸ್ಮಶಾನದಲ್ಲಿ ನೃತ್ಯ ಮತ್ತು ದೇವರುಗಳ ನ್ಯಾಯಾಲಯ"
41 ನೆಯ ಕೃತಿ "ಎಲ್ಲಿಗೋ ಪಯಣ ಯಾವುದೋ ದಾರಿ"
ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ದಿನಾಂಕ: 08-10-2023, ಆದಿತ್ಯವಾರ ಸಮಯ ಸಂಜೆ 5.೩೦ ಕ್ಕೆ ಮೈಸೂರು ಅಸೋಸಿಯೇಷನ್, ಬಾವುದಾಜಿ ರಸ್ತೆ, ಮಾಟುಂಗಾ ಪೂರ್ವ. ಇಲ್ಲಿ ಬಿ. ಎಸ್. ಕೆ.ಬಿ.ಎಸೋಸಿಯೇಷನ್ ಮುಂಬಯಿಯ ಅಧ್ಯಕ್ಷರಾದ ಡಾ.ಸುರೇಶ್ ರಾವ್ ರವರ ಅಧ್ಯಕ್ಷತೆ ಯಲ್ಲಿ ಲೋಕಾರ್ಪಣೆ ಗೊಳ್ಳಲಿದೆ.
ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಶ್ರೀನಿವಾಸ ಪಿ. ಸಾಫಲ್ಯ ಹಾಗೂ
ಹೈಕೋರ್ಟ್ ಮುಂಬಯಿಯ ಹೆಸರಾಂತ ಅಡ್ವಕೇಟ್ ಆರ್ ಎಂ ಭಂಡಾರಿ
ಕೃತಿಗಳನ್ನು ಬಿಡುಗಡೆ ಗೊಳಿಸಲಿರುವರು.
ಮುಖ್ಯ ಅತಿಥಿಯಾಗಿ ಐಐಟಿಸಿ ಮುಂಬಯಿಯ ಆಡಳಿತ ನಿರ್ದೇಶಕರಾದ ವಿಕ್ರಾಂತ್ ಉರ್ವಲ್ ಉಪಸ್ಥಿತರಿರುವರು.
ಕೃತಿಗಳ ಕುರಿತು ಡಾ.ಭರತ್ ಕುಮಾರ್ ಪೊಲಿಪು( ಅಧ್ಯಕ್ಷರು: ಕರ್ನಾಟಕ ಸಂಘ ಮುಂಬಯಿ) ಹಾಗೂ ರೂಪಾ ಸಂಗೋಳಿ (ಯುವ ಲೇಖಕಿ) ಕೃತಿ ಪರಿಚಯ ಮಾಡಿದರೆ
ಅವಿನಾಶ್ ಕಾಮತ್ ಮತ್ತು ಸುರೇಂದ್ರ ಮಾರ್ನಾಡ್(ಪ್ರಸಿದ್ಧ ರಂಗಕಲಾವಿದರು) ಕಾರ್ಯಕ್ರಮ ನಿರೂಪಿಸಲಿರುವರು.
ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರು ಪುಸ್ತಕ ಪ್ರೇಮಿಗಳನ್ನ ಈ ಕಾರ್ಯಕ್ರಮಕ್ಕೆ ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.










Post a Comment