ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ಆಕ್ಟೊಬರ್ 1 ರಂದು ಪ್ರಥಮ ವಾರ್ಷಿಕ ಮಹಾಸಭೆ


ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ಆಕ್ಟೊಬರ್ 1 ರಂದು ಪ್ರಥಮ ವಾರ್ಷಿಕ ಮಹಾಸಭೆ

ಮುಂಬಾಯಿ : ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ಈ ಸಂಸ್ಥೆಯ  ಪ್ರಥಮ  ವಾರ್ಷಿಕ ಮಹಾ ಸಭೆಯು ಅಕ್ಟೋಬರ್ 1ರಂದು ಬೆಳಿಗ್ಗೆ 10.30ಕ್ಕೆ ಮುಂಬೈ ಕೋಟೆಯೊಳಗಿನ  ಪಿ. ಎಂ. ರಸ್ತೆಯಲ್ಲಿರುವ  ಎಲ್. ಐ. ಸಿ. ಕ್ಯಾಂಟೀನ್ 4ನೇ ಮಹಡಿಯಲ್ಲಿ ಸಂಸ್ಥೆಯ  ಆಧ್ಯಕ್ಷರಾದ  ಸುರೇಂದ್ರ ಪೂಜಾರಿ ಅವರ   ಅಧ್ಯಕ್ಷತೆ ಯಲ್ಲಿ ಜರಗಲಿದೆ ಎಂದು  ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ ಅವರು ತಿಳಿಸಿದ್ದಾರೆ.



ಅಂದು ವರದಿ ಮಂಡನೆ, ಲೆಕ್ಕ ಪಟ್ಟಿಗಳ  ಮಂಜೂರಾತಿ ಹಾಗೂ ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ಹಾಗೂ ನಿರ್ಣಯ ತೆಗೆದುಕೊಳ್ಳಲಾಗುವುದು ಆ ಪ್ರಯುಕ್ತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ವಿನಂತಿಸಿದ್ದಾರೆ.

No comments

Powered by Blogger.