ಕುರ್ಲಾ ಬಾಲಾಜಿ ಮಂದಿರ ಗಣೇಶೋತ್ಸವ.
ವರದಿ ಚಿತ್ರ : ಕಮಲಾಕ್ಷ ಸರಾಫ್
ಮುಂಬಯಿ : ಜಿ ಎಸ್ ಬಿ ಸಭಾ ಕುರ್ಲಾ, ಘಾಟ್ಕೋಪರ್, ಚೆಂಬುರ ಕಳೆದ 50 ವರ್ಷಗಳಿಗಿಂತ ಅಧಿಕ ವರ್ಷದಿಂದ ನಡೆಸುತ್ತಿರುವ ಶ್ರೀ ಗಣೇಶೋತ್ಸವ ವು ಶ್ರೀ ವೆಂಕಟರಮಣ ದೇವರ ದಿವ್ಯ ಸಾನಿಧ್ಯದಲ್ಲಿ, ಕುರ್ಲಾ ದ ಪ್ರತಿಷ್ಟಿತ ಬಾಲಾಜಿ ಮಂದಿರದ ಸಂಕಿರಣದಲ್ಲಿ ಸಾರಸ್ವತ ಸ್ವಾಮೀಜಿಯವರ ಸಂಪೂರ್ಣ ಆಶೀರ್ವಾದಗಳನ್ನು ಪಡೆದು ಈ ವರ್ಷವೂ ಕೂಡ 5 ದಿವಸಗಳ ಉತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತಿದೆ.
ಮಂಗಳವಾರ, 19 ರಂದು ಗಣೇಶ ಚತುರ್ಥಿಯ ಶುಭ ಅವಸರದಲ್ಲಿ ಪ್ರಾರಂಭಗೊಂಡ ಶ್ರೀ ಗಣಪತಿ ಮಹೋತ್ಸವವು ಶನಿವಾರ, 23 ರಂದು ಮುಕ್ತಾಯಗೊಂಡು ಮೂರ್ತಿಯನ್ನು ಚೌಪಾತಿ ಸಮುದ್ರ ತಟದಲ್ಲಿ ವಿಸರ್ಜಿತ ಗೊಳ್ಳುವದು.
ಗಣೇಶ ಉತ್ಸವ ದುದ್ದಕ್ಕೂ ದೇವರಿಗೆ ವಿವಿಧ ಪೂಜೆ, ಪುನಸ್ಕಾರ, ಗಣಹೋಮ, ಮೂಡಗಣಪತಿ ಸೇವೆ, ಪುಷ್ಪ ಪೂಜೆ, ರಂಗ ಪೂಜೆ ಸೇವಾದಾರ ಗಾಗಿ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ, ದಿನಾಂಕ 22.09.2023 ರಂದು ಶ್ರೀ ಭಕ್ತ, ಶೆಣೈ ನೇತೃತ್ವದ ಸುಪ್ರಸಿದ್ಧ ಬಾಲಾಜೀ ಭಜನಾ ಮಂಡಳಿ, ವಸಯಿ ಯವರಿಂದ ಮೊಟ್ಟ ಮೊದಲನೆಯ ಸಲ ಮಧ್ಯಾಹ್ನ ಪೂಜೆಯ ವಿಶೇಷ ಸಂದರ್ಭದಲ್ಲಿ ಸುಂದರ ದೇವ ನಾಮಾಮೃತ ಭಜನೆ ರೂಪದಲ್ಲಿ ಗಣೇಶ ಚರಣಿ ಅರ್ಪಿಸಲಾಯಿತು.
ಭಕ್ತ ಜನ ಸಮಾಜವಾಂಧವರ ಮಹಾಪೂರ ವೆಂಬಂತೆ ದೇವರ ಪ್ರತಿ ಶ್ರದ್ಧಾ ಭಕ್ತಿಯ ಖಜಾನೆಯನ್ನು ವ್ಯಕ್ತಪಡಿಸಿ ಧನ್ಯರಾದರು. ಶ್ರದ್ಧಾಳುಗಳು ವೈಭವವನ್ನು ವೀಕ್ಷಿಸಿ ಪುಲಕಿತಗೊಂಡರು.
ವೇದಮೂರ್ತಿ ತ್ರಿವಿಕ್ರಮ ಆಚಾರ್ಯರು ಶಾಸ್ತ್ರೋಕ್ತ ಪದ್ಧತಿಯಲ್ಲಿ ಸಿದ್ಧಿವಿನಾಯಕ ದೇವರ ಪೂಜೆ ಆರತಿ ಕೈಗೊಂಡು ಬಳಿಕ ಸೇವಾದರರಿಗೆ ತೀರ್ಥ ಪ್ರಸಾದ ನೀಡಿದರು. ಬಳಿಕ ಅದ್ದೂರಿಯ ಪ್ರಸಾದ್ ಭೋಜನದ ಸವಿಯನ್ನು ಭಕ್ತ ಸಮುದಾಯದವರು ಅನುಭವಿಸಿದರು.
GSB Sabha KCG ಯ ಅಧ್ಯಕ್ಷರು, ಸಮಿತಿ ಸದಸ್ಯರು, ಸ್ವಯಂ ಸೇವಕರು, ವಿವಿಧ ಕಾರ್ಯಾವಲಿಗಳ ಸಂಚಾಲಕರು ಸಕ್ರಿಯರಾಗಿ ಕಾರ್ಯ ತತ್ಪರರಾಗಿದ್ದರು. ಕಳೆದ ವರ್ಷ ಬಾಲಾಜಿ ಮಂದಿರ, ಕೂರ್ಲಾದ ಸುವರ್ಣ ವರ್ಷ ವನ್ನು ವಿಜೃಂಭಣೆಯಿಂದ ಆಚರಿಸುರುವ ವಿಷಯವನ್ನು ಇಲ್ಲಿ ಸ್ಮರಿಸುವುದು ಅವಶ್ಯ.
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment