ಉಡುಪಿ ಶಾಸಕ ಯಶಪಾಲ ಸುವರ್ಣ ಸೆ.25 ಕ್ಕೆ ಅಂಧೇರಿ ಪಶ್ಚಿಮ ಮೊಗವೀರ ಭವನಕ್ಕೆ ಭೇಟಿ
ಉಡುಪಿ ಶಾಸಕ ಯಶಪಾಲ ಸುವರ್ಣ ಸೆ.25 ಕ್ಕೆ ಅಂಧೇರಿ ಪಶ್ಚಿಮ ಮೊಗವೀರ ಭವನಕ್ಕೆ ಭೇಟಿ
ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ ಅವರು ಸೆ.25 ರಂದು ತಮ್ಮ ಮುಂಬಾಯಿ ಭೇಟಿ ಸಂದರ್ಭದಲ್ಲಿ ಮುಂಬಾಯಿಯ ಹಿರಿಯ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಸಂಸ್ಥೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಂಧೇರಿಯಲ್ಲಿರುವ ಕೇಂದ್ರ ಕಚೇರಿ ಮೊಗವೀರ ಭವನಕ್ಕೆ ಭೇಟಿ ನೀಡಿದರು.
ಅವರನ್ನು ಮಂಡಳಿಯ ಉಪಾಧ್ಯಕ್ಷರಾದ ಸತೀಶ್ ಶ್ರೀಯಾನ್, ಟ್ರಸ್ಟಿ ಹರೀಶ್ ಪುತ್ರನ್, ಜತೆ ಕಾರ್ಯದರ್ಶಿಗಳಾದ ವಿಶ್ವನಾಥ್ ಪುತ್ರನ್ ಮತ್ತು ದಯಾವತಿ ಸುವರ್ಣ, ಪ್ರಶಾಂತ್ ತಿಂಗಳಾಯ, ಗೋವಿಂದ ಪುತ್ರನ್ ಅವರು ಮಂಡಳಿಯ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮೊಗವೀರ ಬ್ಯಾಂಕ್ ನ ನಿರ್ದೇಶಕರಾದ ಮುಖೇಶ್ ಬಂಗೇರ ಹಾಗೂ ಇತರರು ಉಪಸ್ಥಿತರಿದ್ದರು.
Post a Comment