ಮುಂಬಯಿ ಸೆ21. ನಗರದ ೮೩ ವರುಷದ ಹಿರಿಯ ಜಾತಿ ಸಂಸ್ಥೆಯಾದ ಸಾಫಲ್ಯ ಸೇವಾ ಸಂಘ ಮುಂಬೈ ಇದರ ವಾರ್ಷಿಕ ಮಹಾಸಭೆ ಸಪ್ಟಂಬರ್ ೨೪ ಸೆಪ್ಟೆಂಬರ್ ೨೦೨೩ ನೇ ಭಾನುವಾರ ಮದ್ಯಾನ ೩ ಘಂಟೆಗೆ ಸಂತಕ್ರೋಜ್ ಪೇಜಾವರ ಮಠದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅಧ್ಯಕ್ಶತೆಯಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಗಣಕ ಯಂತ್ರ ವಿತರಣೆ ಮತ್ತು ಗಣಕ ಯಂತ್ರ ಕಲಿಯಲು ಸಹಾಯಧನ ವಿತರಿಸಲಾಗುವುದು. ಮಹಾಸಭೆಯ ನಂತರ ಭಜನೆ ಮತ್ತು ಕೀರ್ತನೆ ಹಾಗು ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ ನೆರವೇರಿಸಲಾಗುವುದು.
ಸಮಾಜ ಬಾಂಧವರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾವಹಿಸಬೇಕಾಗಿ ಕಾರ್ಯದರ್ಶಿಯಾದ ಶೋಭಾ ಬಂಗೇರ ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸಿದ್ದಾರೆ.
Post a Comment