ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಸಂಭ್ರಮದ ಗಣೇಶೋತ್ಸವ


ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ
 ಪಶ್ಚಿಮಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ
ಸಂಭ್ರಮದ ಗಣೇಶೋತ್ಸವ


 ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ವತಿಯಿಂದ ಗಣೇಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಸೆ. 19 ಮತ್ತು 20 ರಂದು  .
 ಥಾಣೆ ಪಶ್ಚಿಮಗೋಡ್ ಬಂದರ್, ಹೋಟೇಲು ಕೋರ್ಟ್ ಯಾರ್ಡ್ ಸಮೀಪ, ಶುಭಂ ಹೌಸಿಂಗ್ ಕಾಂಪ್ಲೆಕ್ಸ್ ಇದರ ಮುಂದುಗಡೆ, ಕಸರವಾಡವಲಿ  ಇಲ್ಲಿರುವ ಸಂಘದ ನಿವೇಷಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಎರಡು ದಿನಗಳ ಗಣೇಶೋತ್ಸವವು   ಸಂಭ್ರಮ ದಿಂದ ನಡೆಯತು.


 ಸೆ. 19 ರಂದು ಬೆಳಿಗ್ಗೆ  ಗಣಹೋಮ ಮತ್ತು ಮತ್ತು ಪ್ರಾಣ ಪ್ರತಿಷ್ಠ ಪೂಜಾ, ಕಾರ್ಯ ಸಂಘದ ಸಿಎಸ್‌ಟಿ- ಮುಳುಂದು ಸ್ಥಳೀಯ ಸಮಿತಿಯ ಕಾರ್ಯ ಧ್ಯಕ್ಷ ಸಂಜೀವ ಬಂಗೇರ ದಂಪತಿ ಯಜಮಾನಿಕೆ   ನಡೆಯತು

-  ಮಧ್ಯಾಹ್ನ  ಭಜನಾ ಸಂಕೀರ್ತನ,  ಸಂಜೆ  ಸಂಘದ ಮಹಿಳಾ ವಿಭಾಗದಿಂದ ಹಳದಿ ಕುಂಕುಮ ,  ಸಂಜೆ  ಮಹಾಮಂಗಳಾರತಿ,  ರಾತ್ರಿ  ಮಹಾಪ್ರಸಾದ ಅನ್ನಸಂತರ್ಪಣೆ ನಡೆಯತು..

ಸೆ. 20 ರಂದು ಬೆಳಿಗ್ಗೆ   ಆರತಿ,  ಮಧ್ಯಾಹ್ನ  ಮಹಾ ಆರತಿ  ಬಳಿಕ ವಿಸರ್ಜನೆ ನಡೆಯತು.


   ಧಾರ್ಮಿಕ ಕಾರ್ಯಕ್ರಮಗಳುನು  ಗುರು ವಂದನ ಭಜನಾ ಮಂಡಳಿಯ  ಅರ್ಚಕರಾದ ಶಂಕರ್. ವೈ ಮೂಲ್ಯ   ನಡೆಸಿದರು,

ಕುಲಾಲ ಸಂಘ ಯ ಅಧ್ಯಕ್ಷರಾದ ರಘು   ಎ ಮೂಲ್ಯ  , ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಉಪಧ್ಯಕ್ಷ ಡಿ ಐ ಮುಲ್ಯ ,ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್, ಕೋಶಾಧಿಕಾರಿ ಜಯ ಎಸ್ ಅಂಚನ್, ಮಹಿಳಾ ವಿಭಾಗದ ಕಾರ್ಯ ಧ್ಯಕ್ಷ   ಮಮತಾ ಗುಜರಾನ್  ಹಾಗೂ ಕಾರ್ಯಕಾರಿ ಸಮಿತಿ, 


ಗುರು ವಂದನ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು . ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ ಬಿ. ಸಾಲ್ಯಾನ್ ನಿರ್ದೇಶಗರು ದಾನಿಗಳು ಯುವ ವಿಭಾಗದ ಪದಾಧಿಕಾರಿಗಳು ಸಹಕರಿಸಿದರು.

. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು  ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿದರು.
  
























No comments

Powered by Blogger.