ಏಷ್ಯನ್ ಗೇಮ್ಸ್ 2023: ಭಾರತಕ್ಕೆ ಮತ್ತೊಂದು ಚಿನ್ನ
ಏಷ್ಯನ್ ಗೇಮ್ಸ್ 2023: ಭಾರತಕ್ಕೆ ಮತ್ತೊಂದು ಚಿನ್ನ
ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕದ ಭೇಟೆ ಮುಂದುವರಿದಿದ್ದು, ಗುರುವಾರವೂ ಭಾರತಕ್ಕೆ ಅದ್ಭುತ ಆರಂಭ ದೊರೆತಿದೆ. ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರನ್ನು ಒಳಗೊಂಡ ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡದಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದಿದ್ದಾರೆ. ಕೇವಲ ಒಂದು ಅಂಕದ ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತ ಚಿನ್ನದ ಪದಕ ತನ್ನದಾಗಿಸಿತು.
ಪುರುಷರ 10 ಮೀಟರ್ ಏರ್ ಪಿಸ್ಟೂಲ್ ತಂಡದ ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದರು.


.jpeg)
.jpeg)
.jpeg)
.jpeg)
.jpeg)
Post a Comment