ಮೊಗವೀರ ಕೋ-ಆಪ್ ಬ್ಯಾಂಕ್ ಲಿಮಿಟೆಡ್ ಮುಂಬೈ* ಇದರ 78 ನೇ ವಾರ್ಷಿಕ ಮಹಾಸಭೆ



ಮೊಗವೀರ ಕೋ-ಆಪ್ ಬ್ಯಾಂಕ್ ಲಿಮಿಟೆಡ್ ಮುಂಬೈ ಇದರ  78 ನೇ ವಾರ್ಷಿಕ ಮಹಾಸಭೆ


ಮುಂಬಯಿ :    ಮುಂಬಯಿ ಮತ್ತು ಥಾಣೆ ಮಹಾನಗರದಲ್ಲಿ ವ್ಯವಹಾರ ನಡೆಸುತ್ತಿರುವ ಪ್ರತಿಷ್ಠಿತ ಮತ್ತು ಸಹಕಾರಿ ಬ್ಯಾಂಕುಗಳಲ್ಲೇ ಅತ್ಯಂತ ಹಿರಿಯ, ವಿಶ್ವಸನೀಯ *ಮೊಗವೀರ ಕೋ-ಆಪ್ ಬ್ಯಾಂಕ್ ಲಿಮಿಟೆಡ್ ಮುಂಬೈ* ಇದರ  78 ನೇ ವಾರ್ಷಿಕ ಮಹಾಸಭೆಯು ತಾll 16/09/ 2023 ರಂದು ಮಧ್ಯಾಹ್ನ 3.30ಕ್ಕೆ ಸರಿಯಾಗಿ ಮೊಗವೀರ ಭವನ, ವೀರ ದೇಸಾಯಿ ಮಾರ್ಗ ಅಂಧೇರಿ ಪಶ್ಚಿಮ ಮುಂಬೈ ಇಲ್ಲಿ ನೆರವೇರಿತು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ  ಸ್ಮಿತಾ ಕಾಂಚನ್* ರವರು ಆಗಮಿಸಿದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು ಮತ್ತು ಗತ ವರ್ಷದ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಓದಿದರು.
 ಬ್ಯಾಂಕ್ ನ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರನ್ನು ಅದ್ಯಕ್ಷರಾದ  ಬಾಸ್ಕರ್ ಸಾಲ್ಯಾನ್* ರವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು 2022-23 ನೇ‌ ಆರ್ಥಿಕ ವರ್ಷದ ಲೆಕ್ಕ ಪರಿಶೋಧಕರಿಂದ ಶೋದಿಸಲ್ಪಟ್ಟ ಲೆಕ್ಕಪತ್ರವನ್ನು ಮಂಡಿಸಿದರು.



ಹೊಸದಾಗಿ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿಯವರು  ಹೆಚ್ಚು  ಪರಿಶ್ರಮ ಪಟ್ಟು ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ಪಡುವುದಾಗಿ ಭರವಸೆಯನ್ನು ನೀಡಿದರು.



ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆಯಾದ  ಹರೀಶ್ ಬಿ ,ಹೇಮಾನಂದ. ಕೆ ಕುಂದರ್,  ಹರಿಶ್ಚಂದ್ರ ಸಿ.ಕಾಂಚನ್, ಮುಖೇಶ್ ಬಂಗೇರ,  ರಮೇಶ್ ಟಿ.ಸಾಲ್ಯನ್, ಬಾಸ್ಕರ್ ಸಾಲ್ಯನ್,  ವಿಜಯ್ ಕೆ. ಸಾಲ್ಯನ್, ಡಾll ಇಂದು ಯಸ್.ಸಾಲ್ಯನ್,  ಪ್ರದೀಪ್ ಮೂಲ್ಕಿ,  ಉಮೇಶ್ ಕೆ. ಮೆಂಡನ್, ಪ್ರೇಮಲತಾ ಸಕ್ಪಾಲ್,  ಸುರೇಖ ಯಚ್ ಸುವರ್ಣ,  ಕಿಶೋರ್ ಸಿ.ಕುಂದರ್(ಬ್ಯಾಂಕ್ ಸಿಬ್ಬಂದಿ ಪ್ರತಿನಿಧಿ), ಗೋಪಾಲ್ ಸಿ.ಕಾಂಚನ್(ಬ್ಯಾಂಕ್ ಸಿಬ್ಬಂದಿ ಪ್ರತಿನಿಧಿ)* ಮತ್ತು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. 




ಅಧ್ಯಕ್ಷರು ಕಾರ್ಯಸೂಚಿತ ಪ್ರಕಾರ
 ಸಭೆಯನ್ನು ನಡೆಸಿದರು ಮತ್ತು ಸರ್ವಾನುಮತದಿಂದ ಅಗತ್ಯ ನಿರ್ಣಯಗಳನ್ನು ಅಂಗೀಕರಿಸಿದರು. 




ಪ್ರಸ್ತುತ ಆಡಳಿತ ಮಂಡಳಿಯ ಕಾರ್ಯನಿರ್ವಹಣೆಯ ಮೇಲೆ ಸದಸ್ಯರು ತಮ್ಮ ಸಂಪೂರ್ಣ ವಿಶ್ವಾಸ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿದರು.  ಸುರೇಶ್ ಕಾಂಚನ್,  ವೇದ್ ಪ್ರಕಾಶ್ , ಗೋಪಾಲ್ ಪುತ್ರನ್,  ಬಿ.ಕೆ.ಪ್ರಕಾಶ್* ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿಗಳು ಉಪಸ್ಥಿತರಿದ್ದರು.




ಉಪಾಧ್ಯಕ್ಷರಾದ ನೀತಾ ಮೆಂಡನ್ ರವರು ತಮ್ಮ ಧನ್ಯವಾದ ಭಾಷಣದಲ್ಲಿ ಬ್ಯಾಂಕಿನ  ವೃತ್ತಿಪರ ನಿರ್ದೇಶಕರಿಗೆ, ಎಲ್ಲಾ ಸದಸ್ಯರಿಗೆ,ಮೊಗವೀರ ವ್ಯವಸ್ಥಾಪಕ ಮಂಡಳಿ, ಬ್ಯಾಂಕಿನ ಪೋಷಕರಿಗೆ, ಎಲ್ಲಾ ಶಾಸನಬದ್ಧ ಅಧಿಕಾರಿಗಳಿಗೆ, ಲೆಕ್ಕಪರಿಶೋಧಕರಿಗೆ, ವಕೀಲರಿಗೆ, ಅಸೋಸಿಯೇಟೆಡ್ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್‌ಗಳಿಗೆ ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಸಮರ್ಪಿಸಿದರು. ನಂತರ ಲಘು ಉಪಹಾರಗಳೊಂದಿಗೆ ಸಭೆಯು ಮುಕ್ತಾಯಗೊಂಡಿತು.

















No comments

Powered by Blogger.