ಶಾಕಿಂಗ್ : ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿಟ್ಟ ₹18 ಲಕ್ಷ ಮೌಲ್ಯದ ನೋಟುಗಳು ಗೆದ್ದಲು ಹುಳಕ್ಕೆ ಬಳಿ: ಹೌಹಾರಿದ ಮಹಿಳೆ



ಉತ್ತರ ಪ್ರದೇಶದ ಮೊರಾದಾಬಾದ್‌ನ ಬ್ಯಾಂಕ್‌ ಆಫ್ ಬರೋಡಾ ಶಾಖೆಯಲ್ಲಿ ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ಮೊತ್ತದ ನೋಟುಗಳಿಗೆ ಗೆದ್ದಲು ಹಿಡಿದ ಘಟನೆ  ನಡೆದಿದೆ. ಇದನ್ನು ನೋಡಿದ ಮಹಿಳೆ ಶಾಕ್ ಗೆ ತುತ್ತಾಗಿದ್ದಾರೆ.




ಕಳೆದ ವರ್ಷ  ಬ್ಯಾಂಕ್‌ ಆಫ್ ಬರೋಡಾದ ಬ್ರಾಂಚ್‌ ವೊದರಲ್ಲಿ ಈ ಮಹಿಳೆ ₹18 ಲಕ್ಷ ಹಣವನ್ನು ಇರಿಸಿದ್ದರು. ಲಾಕರ್‌ ಅಗ್ರಿಮೆಂಟ್‌ಅನ್ನು ಮುಂದುವರೆಸುವ ಸಲುವಾಗಿ ಬ್ಯಾಂಕ್‌ನಿಂದ ಕರೆಬಂದ ಹಿನ್ನೆಲೆಯಲ್ಲಿ ಅವರು ಬ್ಯಾಂಕ್‌ಗೆ ಬಂದಿದ್ದರು. ಈ ವೇಳೆ ಲಾಕರ್‌ ಓಪನ್‌ ಮಾಡಿ ನೋಡಿದಾಗ ನೋಟುಗಳಿಗೆ ಗೆದ್ದಲು ಹಿಡಿದು ಪುಡಿಯಾಗಿದ್ದವು. ಇದನ್ನು ನೋಡಿ ಮಹಿಳೆ ಮತ್ತು ಬ್ಯಾಂಕ್‌ ಸಿಬ್ಬಂದಿ ಇಬ್ಬರೂ ದಂಗಾಗಿದ್ದಾರೆ. ಬ್ಯಾಂಕಿನವರು ಈ ಮುಂಚೆ ಯಾವುದೇ ಮಾಹಿತಿಯನ್ನು ನಮಗೆ ತಿಳಿಸಿಲ್ಲ ಎಂದು ದೂರಿದ ಅವರು, ಬ್ಯಾಂಕ್‌ ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗದೇ ಇದ್ದರೆ ಮಾಧ್ಯಮಗಳ ಸಹಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ.

No comments

Powered by Blogger.